ಸಾರಾಂಶ
ಸಂಕಷ್ಟದಲ್ಲಿರುವ ಈರುಳ್ಳಿ ಬೆಳೆಗಾರರ ಸಹಾಯಕ್ಕೆ ರಾಜ್ಯ ಸರ್ಕಾರ ರೈತರಿಗೆ ಪರಿಹಾರ ನೀಡಬೇಕು ಹಾಗೂ ಈರುಳ್ಳಿ ರಫ್ತು ನಿಷೇಧ ಹಿಂಪಡೆ ಯಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸ ಕು ಎಂದು ರಾಜ್ಯ ಈರುಳ್ಳಿ ಬೆಳಗಾರರ ಸಂಘದ ಮುಖಂಡರು ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸಂಕಷ್ಟದಲ್ಲಿರುವ ಈರುಳ್ಳಿ ಬೆಳೆಗಾರರ ಸಹಾಯಕ್ಕೆ ರಾಜ್ಯ ಸರ್ಕಾರ ರೈತರಿಗೆ ಪರಿಹಾರ ನೀಡಬೇಕು ಹಾಗೂ ಈರುಳ್ಳಿ ರಫ್ತು ನಿಷೇಧ ಹಿಂಪಡೆ ಯಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸ ಕು ಎಂದು ರಾಜ್ಯ ಈರುಳ್ಳಿ ಬೆಳಗಾರರ ಸಂಘದ ಮುಖಂಡರು ಒತ್ತಾಯಿಸಿದರು.ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಎಂ.ಸಿದ್ದೇಶ, ರಾಜ್ಯದಲ್ಲಿ 30 ಲಕ್ಷ ಈರುಳ್ಳಿ ಬೆಳೆಗಾರರ ರೈತರಿದ್ದು, ಪ್ರತಿ ವರ್ಷವೂ ರೈತರು ಒಂದಲ್ಲ ಒಂದು ಕಷ್ಟಗಳನ್ನು ಅನುಭವಿಸುತ್ತಿದ್ದೇವೆ. ಈ ವರ್ಷ ಬರಗಾಲವಿದ್ದರೂ ಈರುಳ್ಳಿ ಬಂದಿದ್ದು ಅದರಲ್ಲೂ ಮಾರು ಕಟ್ಟೆಯಲ್ಲಿ ಯೋಗ್ಯವಾದ ದರ ರೈತರಿಗೆ ಸಿಗುತ್ತಿಲ್ಲ ಹಾಕಿದ ಬಂಡವಾಳವೂ ಕೈ ಸೇರುತ್ತಿಲ್ಲ ಎಂದರು.
ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಈರುಳ್ಳಿಗೆ ಕೇವಲ ₹600 ರಿಂದ 800 ಮಾತ್ರ ಇದ್ದು, ಒಂದು ಕ್ವಿಂಟಲ್ ಈರುಳ್ಳಿ ಬೆಳೆ ಬೇಕಾದರೆ ಕನಿಷ್ಠ ₹2000 ಖರ್ಚು ಬರುತ್ತದೆ. ಇಂದಿನ ಪರಿಸ್ಥಿತಿಯಲ್ಲಿ ಈರುಳ್ಳಿ ಬೆಳೆದ ರೈತರು ಮೂರಾಬಟ್ಟೆಯಾಗಿ ಹೋಗಿದ್ದೇವೆ. ಕೂಡಲೇ ಸರ್ಕಾರ ಪರಿಹಾರ ಒದಗಿಸಬೇಕು ಎಂದು ಹೇಳಿದರು.ಕೃಷಿ ನಿಗಮ ಮಂಡಳಿ ಸ್ಥಾಪನೆ ಮಾಡಬೇಕು ಯಾವ ಯಾವ ಬೆಳೆಗೆ ಆ ನಿಗಮ ಮಂಡಳಿಯಿಂದ ಸಿಗಲಿದೆ ಮತ್ತು ರೈತರ ಕಡೆಯಿಂದ ರಾಗಿ, ಜೋಳ, ಅಕ್ಕಿ, ಈರುಳ್ಳಿ ಖರೀದಿ ಮಾಡಿ ಸೊಸೈಟ್‌ಗಳಿಂದ ಸಾರ್ವಜನಿಕರಿಗೆ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನ ಗಳಲ್ಲಿ ಹೋರಾಟ ನಡೆಸಲಾಗುವುದು ಎಂದರು. ಸುದ್ದಿ ಗೋಷ್ಠಿಯಲ್ಲಿ ಬಸವರಾಜ ಹಡಪದ, ವೀರಭದ್ರಪ್ಪ ಕಾಳಗಿ, ತಿಪ್ಪಣ್ಣ ಮೇಟಿ, ಲೋಕಣ್ಣ ಉಳ್ಳಾಗಡ್ಡಿ, ಹಣಮವ್ವ ಈರಣ್ಣವರ ಮತ್ತಿತರರು ಇದ್ದರು.