ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದರಿಗೆ ಮೊದಲ ಪ್ರಾಶಸ್ತ್ಯ ಮತ ನೀಡಿ: ಡಾ.ಕೆ.ಅನ್ನದಾನಿ ಮನವಿ

| Published : Jun 01 2024, 12:46 AM IST

ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದರಿಗೆ ಮೊದಲ ಪ್ರಾಶಸ್ತ್ಯ ಮತ ನೀಡಿ: ಡಾ.ಕೆ.ಅನ್ನದಾನಿ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಎನ್‌ಡಿಎ ಅಭ್ಯರ್ಥಿ ಕೆ.ವಿವೇಕಾನಂದರ ಪರ ಸರ್ಕಾರಿ ಶಾಲೆಗಳು, ಜೂನಿಯರ್ ಕಾಲೇಜುಗಳಿಗೆ ಭೇಟಿಕೊಟ್ಟು ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು ಸೇರಿದಂತೆ ಇತರರು ಮತಯಾಚನೆ ಮಾಡುತ್ತಿದ್ದೇವೆ. ಮಳವಳ್ಳಿ ತಾಲೂಕಿನಲ್ಲಿ 670 ಮತಗಳಿದ್ದು ಅವರೆಲ್ಲರೂ ಕೆ.ವಿವೇಕಾನಂದರವರಿಗೆ ತಮ್ಮ ಮತ ನೀಡಿ ಗೆಲ್ಲಿಸಬೇಕು.

ಕನ್ನಡಪ್ರಭ ವಾರ್ತೆ ಹಲಗೂರು

ಜೂನ್ 3ರಂದು ನಡೆಯುವ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿ ಅಭ್ಯರ್ಥಿ ಕೆ. ವಿವೇಕಾನಂದರಿಗೆ ಮೊದಲ ಪ್ರಾಶಸ್ತ್ಯ ಮತ ನೀಡುವಂತೆ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮನವಿ ಮಾಡಿದರು.

ದಳವಾಯಿ ಕೊಡಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಲ್ಲಿ ಶುಕ್ರವಾರ ಕೆ.ವಿವೇಕಾನಂದರ ಪರ ಮತಯಾಚಿಸಿ ಮಾತನಾಡಿ, ಶಿಕ್ಷಕ ಮತದಾರರು ಈ ಬಾರಿ ಕೆ.ವಿವೇಕಾನಂದರಿಗೆ ಮತ ನೀಡುವಂತೆ ಕೋರಿದರು.

ಎನ್‌ಡಿಎ ಅಭ್ಯರ್ಥಿ ಕೆ.ವಿವೇಕಾನಂದರ ಪರ ಸರ್ಕಾರಿ ಶಾಲೆಗಳು, ಜೂನಿಯರ್ ಕಾಲೇಜುಗಳಿಗೆ ಭೇಟಿಕೊಟ್ಟು ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು ಸೇರಿದಂತೆ ಇತರರು ಮತಯಾಚನೆ ಮಾಡುತ್ತಿದ್ದೇವೆ ಎಂದರು.

ಮಳವಳ್ಳಿ ತಾಲೂಕಿನಲ್ಲಿ 670 ಮತಗಳಿದ್ದು ಅವರೆಲ್ಲರೂ ಕೆ.ವಿವೇಕಾನಂದರವರಿಗೆ ತಮ್ಮ ಮತ ನೀಡಿ ಗೆಲ್ಲಿಸಬೇಕು. ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂಗಳಾದ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪನವರ ವೈಖರಿ ಮೆಚ್ಚಿ ಶಿಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈ ಬಾರಿ ವಿವೇಕಾನಂದರವರು ಖಂಡಿತ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ನಟರಾಜು, ಸಿದ್ದೇಗೌಡ, ಜಯರಾಮ, ರಮೇಶ್, ಮತ್ತು ಮುಖಂಡರಾದ ತಮ್ಮಣ್ಣೆಗೌಡ, ಕುಂತೂರ್ ಸೋಮಶೇಖರ್, ಸುರೇಂದ್ರ, ಸುರೇಶ್, ಎನ್.ಕೆ. ಕುಮಾರ್, ಮೋದಿ ರವಿ ಸೇರಿದಂತೆ ಇತರರು ಇದ್ದರು.

ಮರಿತಿಬ್ಬೇಗೌಡರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ: ವಿಜಯ್ ರಾಮೇಗೌಡ

ಕೆ.ಆರ್.ಪೇಟೆ:ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸಿ ನೌಕರರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುತ್ತಿರುವ ಮರಿತಿಬ್ಬೇಗೌಡರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸುವಂತೆ ಕಾಂಗ್ರೆಸ್ ಮುಖಂಡ ವಿಜಯ್‌ರಾಮೇಗೌಡ ಕರೆ ನೀಡಿದರು.

ಪಟ್ಟಣದಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರನ್ನು ಭೇಟಿಮಾಡಿ ಮಾತನಾಡಿ, ಕಳೆದ 20 ವರ್ಷಗಳಿಂದ ಶಿಕ್ಷಕರೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದಾರೆ. ಸದನದ ಒಳಗೆ ಹಾಗೂ ಹೊರಗೆ ಶಿಕ್ಷಕರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ದನಿಯಾಗಿ ಬದ್ಧತೆಯಿಂದ ಕೆಲಸ ಮಾಡಿದ್ದಾರೆ ಎಂದರು.ಮೈತ್ರಿ ಅಭ್ಯರ್ಥಿ ವಿವೇಕಾನಂದರವರು ಹಣದಿಂದ ಚುನಾವಣೆ ಗೆಲ್ಲಬಹುದು ಎಂದು ಭಾವಿಸಿದ್ದಾರೆ. ಅವರಿಗೆ ಶಿಕ್ಷಕರ ಕ್ಷೇತ್ರದ ಸಮಸ್ಯೆಗಳ ಆಳ, ಅಗಲ ಗೊತ್ತಿಲ್ಲ. ಪ್ರಜ್ಞಾವಂತ ಮತದಾರರು ಹಣಕ್ಕೆ ಆಸ್ಪದ ನೀಡದೇ ಹಗಲಿರುಳು ಶಿಕ್ಷಕರ ಸಮಸ್ಯೆಗಳಿಗೆ ಪ್ರತಿನಿಧಿಯಾಗಿ ಕೆಲಸ ಮಾಡುವ ಮರಿತಿಬ್ಬೇಗೌಡರನ್ನು ಬೆಂಬಲಿಸಬೇಕು ಎಂದು ಕೋರಿದರು.

ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮುಖಂಡರಾದ ಮತ್ತಿಘಟ್ಟ ಕೃಷ್ಣಮೂರ್ತಿ, ಜಿಪಂ ಮಾಜಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ಜಿಲ್ಲಾ ಕುರುಬರ ಸಂಘದ ಕಾರ್ಯದರ್ಶಿ ಎಂ.ಜೆ.ಶಶಿಧರ, ಉಪನ್ಯಾಸಕ ಜೆ.ಜಿ.ರಾಜೇಗೌಡ, ಬಡ್ತಿ ಉಪನ್ಯಾಸಕರ ಸಂಘದ ರಾಜ್ಯಾದ್ಯಕ್ಷ ರಮೇಶ್, ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಆರ್.ವೆಂಕಟೇಶ್ ಇದ್ದರು.