ಮಗುವಿಗೆ ಉತ್ತಮ ಸಂಸ್ಕಾರ, ಶಿಕ್ಷಣ ನೀಡಿ

| Published : May 18 2024, 12:36 AM IST

ಸಾರಾಂಶ

ತ್ಯೇಕ ಮಕ್ಕಳನ್ನು ಪೋಷಿಸಿ ಮಕ್ಕಳಿಲ್ಲದ ದಂಪತಿಗಳ ಮಡಿಲಿಗೆ ಕಾನೂನಾತ್ಮಕ ಮಗುವನ್ನು ದತ್ತು ನೀಡುತ್ತಿರುವದು ಮಗುವಿಗೆ ಭವಿಷ್ಯ ನೀಡಿದಂತೆ ಹಾಗೂ ಮಕ್ಕಳಿಲ್ಲದ ದಂಪತಿಗಳ ಕೊರಗು ನಿಗಿಸಿದಂತಾಗುವುದು

ಗದಗ: ದತ್ತು ಮಗು ಪಡೆದುಕೊಂಡ ಪೋಷಕರು ಮಗುವಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ, ಉನ್ನತ ಶಿಕ್ಷಣ ನೀಡಿ ಅವರನ್ನು ಸತ್ಪ್ರಜೆಗಳನ್ನಾಗಿ ಮಾಡಲು ಮುಂದಾಗಬೇಕೆಂದು ಬೆಟಗೇರಿಯ ನೀಲಕಂಠ ಮಠದ ನೀಲಕಂಠ ಪಟ್ಟದಾರ್ಯ ಸ್ವಾಮೀಜಿಗಳು ಹೇಳಿದರು.

ಅವರು ಗುರುವಾರ ಬೆಟಗೇರಿಯ ಸೇವಾಭಾರತಿ ಟ್ರಸ್ಟನ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯಲ್ಲಿ ಪೋಷಣೆಗೊಂಡ ಮಗುವನ್ನು ಬೆಂಗಳೂರಿನ ಮಕ್ಕಳಿಲ್ಲದ ದಂಪತಿಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ದತ್ತು ಮಗು ಹಸ್ತಾಂತರಿಸಿ ಮಾತನಾಡಿ, ಎಲ್ಲಿಯೋ ಜನ್ಮತಾಳಿದ ಮಕ್ಕಳು ಇನ್ನೆಲ್ಲೊ ಪೋಷಣೆಗೊಂಡು ದತ್ತು ಪೋಷಕರ ಕಾಳಜಿಯೊಂದಿಗೆ ಬೆಳೆಯುತ್ತಿದ್ದು, ಅಂತಹ ಮಕ್ಕಳ ಬದುಕು ಸುಂದರವಾಗಿ ರೂಪುಗೊಳ್ಳಲಿ ಎಂದು ಹಾರೈಸಿದರು.

ಸೇವಾಭಾರತಿ ಟ್ರಸ್ಟ್‌ನ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆ ಉತ್ತಮ ರೀತಿಯಲ್ಲಿ ಕಾರ್ಯ ಮಾಡುತ್ತಿದೆ. ಪ್ರತ್ಯೇಕ ಮಕ್ಕಳನ್ನು ಪೋಷಿಸಿ ಮಕ್ಕಳಿಲ್ಲದ ದಂಪತಿಗಳ ಮಡಿಲಿಗೆ ಕಾನೂನಾತ್ಮಕ ಮಗುವನ್ನು ದತ್ತು ನೀಡುತ್ತಿರುವದು ಮಗುವಿಗೆ ಭವಿಷ್ಯ ನೀಡಿದಂತೆ ಹಾಗೂ ಮಕ್ಕಳಿಲ್ಲದ ದಂಪತಿಗಳ ಕೊರಗು ನಿಗಿಸಿದಂತಾಗುವುದು ಎಂದರು.

ಹುಬ್ಬಳ್ಳಿಯ ಕರ್ನಾಟಕ ಚೇಂಬರ್ ಆಫ್ ಕಾಮರ್ಸ ಆ್ಯಂಡ್ ಇಂಡಸ್ಟ್ರೀಜ್‌ನ ಅಧ್ಯಕ್ಷ ಎಸ್.ಸಿ. ಸಂಶಿಮಠ ಮಾತನಾಡಿ, ಬಹುವರ್ಷಗಳಿಂದ ಈ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದೆ.ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ತನ್ನನ್ನು ಸಮರ್ಪಿಸಿಕೊಂಡಿರುವ ಈ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

ಈ ವೇಳೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಫೀಕಾ ಹಳ್ಳೂರ, ಶೋಭಾ ಸಂಶಿಮಠ, ಮೈಲಾರಪ್ಪ ಅರಣಿ, ಬಸವರಾಜ ನಾಗಲಾಪೂರ, ದತ್ತು ಸ್ವೀಕಾರ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ, ಜಯರಾಜ ಮುಳಗುಂದ, ಲುಕ್ಕಣಸಾ ರಾಜೋಳಿ, ಅಶೋಕ ಅಂಟಿನ, ರಂಜನಾ ಕೋಟಿ, ಶ್ರೀಧರ ಕಾಂಬಳೆ, ಪ್ರಮೋದ ಹಿರೇಮಠ, ಅಭಿಷೇಕ ಮಾಳೋದೆ ಸೇರಿದಂತೆ ಇತರರು ಇದ್ದರು.

ನಾಗವೇಣಿ ಕಟ್ಟಿಮನಿ ಪ್ರಾರ್ಥಿಸಿದರು. ಗುರುಸಿದ್ಧಪ್ಪ ಕೊಣ್ಣೂರ ಸ್ವಾಗತಿಸಿದರು. ಮಂಜುನಾಥ ಚನ್ನಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ನರಸಿಂಹ ಕಾಮರ್ತಿ ನಿರೂಪಿಸಿ, ವಂದಿಸಿದರು.