ಸಾರಾಂಶ
ಕನ್ನಡಪ್ರಭ ವಾರ್ತೆ ಗುರುಮಠಕಲ್
ಇಡೀ ಯಾದಗಿರಿ ಜಿಲ್ಲೆಯಲ್ಲಿಯೆ ಗುರುಮಠಕಲ್ ತಾಲೂಕಿನ ಸರ್ಕಾರಿ ಕಾಲೇಜಿನಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಒಳ್ಳೆಯ ಶಿಕ್ಷಣ ದೊರಕಿಸಿ, ಕ್ಷೇತ್ರಕ್ಕೆ ಹೆಸರು ತರಬೇಕೆಂದು ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶರಣಗೌಡ ಕಂದಕೂರು ತಿಳಿಸಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ನಡೆದ ಕಾಲೇಜು ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕಾಲೇಜು ಕಟ್ಟಡ, ವಿದ್ಯುತ್ ಸಂಪರ್ಕ ಅವ್ಯವಸ್ಥೆಯ ಕುರಿತು ಜೆಸ್ಕಾಂ ಅಧಿಕಾರಿಯನ್ನು ಸಂಪರ್ಕಿಸಿ ವ್ಯವಸ್ಥೆ ಮಾಡಲು ಸೂಚನೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿಯನ್ನು ಸಂಪರ್ಕಿಸಿ, ಕಾಲೇಜಿಗೆ ಭೇಟಿಯಾಗಿ ನೀರಿನ ಸಂಪರ್ಕ, ಶುಚಿತ್ವ ಕುರಿತು ಗಮನಹರಿಸಲು ತಿಳಿಸಿದರು. ಡಿವೈಎಸ್ಪಿ ಅವರನ್ನು ಸಂಪರ್ಕಿಸಿ ಕಾಲೇಜು ಆವರಣದಲ್ಲಿ ರಾತ್ರಿ ಕುಡಿದು, ಪುಂಡರ ಹಾವಳಿ ತಡೆಗೆ ಕ್ರಮ ವಹಿಸುವಂತೆ ಸೂಚಿಸಿದರು.ಈ ಸಂದರ್ಭದಲ್ಲಿ ಪ್ರಾಂಶುಪಾಲರು ಕಾಲೇಜು ಆವರಣದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಶಾಸಕರಿಗೆ ಬೇಡಿಕೆಯ ಮನವಿ ಸಲ್ಲಿಸಿದರು.
ಸಭೆಯಲ್ಲಿ ಉಪನ್ಯಾಸಕ, ಸಿಬ್ಬಂದಿ ವಿವರ ಪಡೆದ ಶಾಸಕರು, ಉಪನ್ಯಾಸಕರ ಕೊರತೆ ಕುರಿತು ಕಾಲೇಜು ಶಿಕ್ಷಣ ಸಚಿವರಿಗೆ ಮಾತನಾಡಿ, ಕೊರತೆ ನೀಗಿಸಲು ಪ್ರಯತ್ನಿಸುವುದಾಗಿ ಹೇಳಿದರು.ಸದಸ್ಯರಾದ ಜಗದೀಶ ಆವುಂಟಿ, ಗುರುನಾಥ ತಲಾರಿ, ಮಸಿಯುದ್ದೀನ್ ಆಸೀಮ್, ನಾಗನಾಥ ರೆಡ್ಡಿ, ಜಯಶ್ರೀ ಪಾಟೀಲ್, ರಾಧಾರೆಡ್ಡಿ, ಡಾ. ಗುರುಲಿಂಗಯ್ಯ ಹಿರೇಮಠ, ನಾರಾಯಣ ಪಾಂಚಾಳ, ಪ್ರಾಚಾರ್ಯ ಡಾ. ಮೋನಪ್ಪ ಗಚ್ಚಿನಮನಿ ಇತರರಿದ್ದರು.
ಇದಕ್ಕೂ ಮೊದಲು ಮಾಜಿ ಶಾಸಕ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದ ನಾಗನಗೌಡ ಕಂದಕೂರ ಹಾಗೂ ಇತರೆ ಮೃತ ಸದಸ್ಯರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು.------ಬಾಕ್ಸ್---
ಸಮರ್ಪಕ ಮಾಹಿತಿ ನೀಡದ ಪ್ರಾಂಶುಪಾಲರ ವಿರುದ್ಧ ಕಂದಕೂರು ಆಕ್ರೋಶಗುರುಮಠಕಲ್ :
ಕಾಲೇಜಿಗೆ ಕೆಕೆಆರ್‌ಡಿಬಿಯಿಂದ 1.90 ಕೋಟಿ ರು.ಗಳ ಅನುದಾನದಲ್ಲಿ ಟೇಬಲ್, ಡೆಸ್ಕ್ ಪೂರೈಕೆ ಇತರೆ ಕಾಮಗಾರಿಗಳ ಮಾಹಿತಿ ನೀಡದ ಪ್ರಾಂಶುಪಾಲರ ವಿರುದ್ಧ ಶಾಸಕ ಶರಣಗೌಡ ಕಂದಕೂರು ಅಸಮಾಧಾನ ವ್ಯಕ್ತಪಡಿಸಿದರು.2 ಕೋಟಿ ರು.ಗಳ ಅನುದಾನ ಹೌಸಿಂಗ್ ಬೋರ್ಡ್ ವಹಿಸಿದ ಕಾಮಗಾರಿ ಆರಂಭಿಸಿದ ಕುರಿತು ತರಾಟೆಗೆ ತೆಗೆದುಕೊಂಡರು. ಬಳಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರನ್ನು ಸಂಪರ್ಕಿಸಿ ಕ್ರಮವಹಿಸಲು ಮನವಿ ಮಾಡಿದರು.
ಯೋಜನಾ ವರದಿ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿಲ್ಲ ಎಂದರೆ ಏನೂ ಮಾಡುತ್ತಿದ್ದೀರಿ ಎಂದು ಪಿಆರ್‌ಇ ಎಇಇ ಅವರಿಗೆ ತರಾಟೆಗೆ ತೆಗೆದುಕೊಂಡು ವಿಳಂಬಕ್ಕೆ ಕಾರಣವಾದ ಅಧಿಕಾರಿಗೆ ನೋಟಿಸ್ ನೀಡಲು ನಿರ್ದೇಶನ ನೀಡಿದರು.-
12ವೈಡಿಆರ್14ಗುರುಮಠಕಲ್ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಾಸಕ ಶರಣಗೌಡ ಕಂದಕೂರು ಅವರ ಅಧ್ಯಕ್ಷತೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸಭೆ ಜರುಗಿತು.