ನಾಗರ ಪಂಚಮಿಗೆ ಸರ್ಕಾರಿ ರಜೆ ನೀಡಿ: ಸಿಎಂಗೆ ಯಶ್ಪಾಲ್ ಮನವಿ

| Published : Aug 10 2024, 01:36 AM IST

ನಾಗರ ಪಂಚಮಿಗೆ ಸರ್ಕಾರಿ ರಜೆ ನೀಡಿ: ಸಿಎಂಗೆ ಯಶ್ಪಾಲ್ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ನಾಗರ ಪಂಚಮಿ ಹಬ್ಬಕ್ಕೆ ಕರಾವಳಿ ಜಿಲ್ಲೆಯಲ್ಲಿ ವಿಶೇಷ ಮಾನ್ಯತೆಯಿದ್ದು, ಪ್ರತಿ ಮನೆಯಲ್ಲೂ ಭಕ್ತರು ನಾಗ ಬನಗಳಲ್ಲಿ ಅತ್ಯಂತ ಭಕ್ತಿ ಭಾವದಿಂದ ತನು ಎರೆದು, ಧಾರ್ಮಿಕ ಕಾರ್ಯಗಳಲ್ಲಿ ಕುಟುಂಬ ಸಮೇತರಾಗಿ ಪಾಲ್ಗೊಳ್ಳುತ್ತಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಕರಾವಳಿ ಜಿಲ್ಲೆಯ ಜನರಿಗೆ ಅತ್ಯಂತ ಭಾವನಾತ್ಮಕವಾದ ಶ್ರದ್ಧಾ ಭಕ್ತಿಯಿಂದ ಆಚರಿಸಲ್ಪಡುವ ನಾಗರ ಪಂಚಮಿ ಹಬ್ಬಕ್ಕೆ ರಾಜ್ಯ ಸರ್ಕಾರ ಮುಂದಿನ ವರ್ಷದಿಂದಾದರೂ ಸಾರ್ವತ್ರಿಕ ರಜೆ ಘೋಷಣೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮನವಿ ಮಾಡಿದ್ದಾರೆ.ನಾಗರ ಪಂಚಮಿ ಹಬ್ಬಕ್ಕೆ ಕರಾವಳಿ ಜಿಲ್ಲೆಯಲ್ಲಿ ವಿಶೇಷ ಮಾನ್ಯತೆಯಿದ್ದು, ಪ್ರತಿ ಮನೆಯಲ್ಲೂ ಭಕ್ತರು ನಾಗ ಬನಗಳಲ್ಲಿ ಅತ್ಯಂತ ಭಕ್ತಿ ಭಾವದಿಂದ ತನು ಎರೆದು, ಧಾರ್ಮಿಕ ಕಾರ್ಯಗಳಲ್ಲಿ ಕುಟುಂಬ ಸಮೇತರಾಗಿ ಪಾಲ್ಗೊಳ್ಳುತ್ತಾರೆ. ಮಕ್ಕಳನ್ನು ಈ ಹಬ್ಬದಲ್ಲಿ ಭಾಗಿಯಾಗಲು ಪೋಷಕರು ಇಚ್ಛಿಸಿದರೂ ಶಾಲಾ ಕಾಲೇಜುಗಳಿಗೆ ರಜೆ ಇಲ್ಲದ ಕಾರಣ ಭಾಗವಹಿಸಲು ಸಾಧ್ಯವಾಗದೇ ನಿರಾಶರಾಗುತ್ತಿದ್ದಾರೆ.ನಾಗರ ಪಂಚಮಿಗೆ ರಜೆ ನೀಡುವ ಬಗ್ಗೆ ಕರಾವಳಿ ಜಿಲ್ಲೆಯ ನಾಗರಿಕರ ಬಹು ವರ್ಷಗಳ ಬೇಡಿಕೆಯಾಗಿದ್ದು, ರಾಜ್ಯ ಸರ್ಕಾರ ಕರಾವಳಿ ಜಿಲ್ಲೆಯ ಧಾರ್ಮಿಕ ಭಾವನೆಗಳಿಗೆ ಗೌರವ ನೀಡಿ ಮುಂದಿನ ವರ್ಷದಿಂದ ನಾಗರ ಪಂಚಮಿ ಹಬ್ಬಕ್ಕೆ ಸಾರ್ವತ್ರಿಕ ರಜೆ ನೀಡುವಂತೆ ಜನತೆಯ ಪರವಾಗಿ ಮನವಿ ಮಾಡುವುದಾಗಿ ತಿಳಿಸಿದ್ದಾರೆ.