ಸನಾತನ ಕಾಲದ ಜನಪದ ಕಲೆಗಳು ನಶಿಸಿ ಹೋಗದಂತೆ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪೋಷಣೆ ಮಾಡಬೇಕು ಎಂದರು. ಜಾನುವಾರುಗಳಲ್ಲಿ ಇರುವ ಎಷ್ಟೋ ತಳಿಗಳ ಬಗ್ಗೆ ನಮ್ಮಗೆ ಮಾಹಿತಿ ಇರಲಿಲ್ಲ ನೆನೆ ಜಾನುವಾರುಗಳ ಪ್ರದರ್ಶನ ವೀಕ್ಷಣೆ ಮಾಡು ಸಂದರ್ಭದಲ್ಲಿ ಅವುಗಳ ಪರಿಚಯವಾಯಿತು ಎಂದರು. ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರು ಮಾತನಾಡಿ ಹಾಸನಾಂಬ ಜಾತ್ರಾ ಮಹೋತ್ಸವದ ಪ್ರಯುಕ್ತ ಹಾಸನದಲ್ಲಿ ಮೊದಲನೇ ಬಾರಿಗೆ ಕ್ರೀಡಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು, ಜಾತ್ರೆಯ ಅಂಗವಾಗಿ ಹಲವು ರೀತಿಯ ಜಾನುವಾರುಗಳ ಪ್ರದರ್ಶನವೂ ನಡೆದಿದೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಹಾಸನ
ಸನಾತನ ಕಾಲದ ಚಿತ್ರಕಲೆ ಸೇರಿದಂತೆ ಇಂತಹ ಜನಪದ ಕಲೆಗಳಿಗೆ ಹೆಚ್ಚಿನ ಮಹತ್ವ ನೀಡುವ ಉದ್ದೇಶದಿಂದ ನಾಳೆಯಿಂದ ಮಹಾನಗರ ಪಾಲಿಕೆ ಆವರಣದಲ್ಲಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗುವುದು ಎಂದು ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಂ. ಶಿವಲಿಂಗೇಗೌಡ ಅವರು ತಿಳಿಸಿದರು.ಹೊಸ ಬಸ್ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಸೋಮವಾರ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯನ್ನು ವಿಕ್ಷೀಸಿ ಮಾತನಾಡಿದ ಅವರು, ೫,೦೦೦ ಜನ ಬಂದು ದರ್ಶನ ಮಾಡಿದರೆ ಅದು ದೇವಿ ದರ್ಶನವಾಗುತ್ತದೆ, ಆದರೆ ಲಕ್ಷಾಂತರ ಜನ ಬಂದು ದರ್ಶನ ಮಾಡಿದರೆ ಅದು ನಾಡ ಹಬ್ಬವಾಗುತ್ತದೆ ಎಂದು ಹೇಳಿದರು. ಮೈಸೂರು ದಸರಾ ರೀತಿಯಲ್ಲಿ ಹಾಸನಾಂಬ ಜಾತ್ರಾ ಮಹೋತ್ಸವದ ಹಲವು ರೀತಿಯ ಕ್ರೀಡೆಗಳನ್ನು ಆಯೋಜಿಸಲಾಗಿದೆ ಎಂದ ಅವರು ಸನಾತನ ಕಾಲದ ಜನಪದ ಕಲೆಗಳು ನಶಿಸಿ ಹೋಗದಂತೆ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪೋಷಣೆ ಮಾಡಬೇಕು ಎಂದರು. ಜಾನುವಾರುಗಳಲ್ಲಿ ಇರುವ ಎಷ್ಟೋ ತಳಿಗಳ ಬಗ್ಗೆ ನಮ್ಮಗೆ ಮಾಹಿತಿ ಇರಲಿಲ್ಲ ನೆನೆ ಜಾನುವಾರುಗಳ ಪ್ರದರ್ಶನ ವೀಕ್ಷಣೆ ಮಾಡು ಸಂದರ್ಭದಲ್ಲಿ ಅವುಗಳ ಪರಿಚಯವಾಯಿತು ಎಂದರು. ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರು ಮಾತನಾಡಿ ಹಾಸನಾಂಬ ಜಾತ್ರಾ ಮಹೋತ್ಸವದ ಪ್ರಯುಕ್ತ ಹಾಸನದಲ್ಲಿ ಮೊದಲನೇ ಬಾರಿಗೆ ಕ್ರೀಡಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು, ಜಾತ್ರೆಯ ಅಂಗವಾಗಿ ಹಲವು ರೀತಿಯ ಜಾನುವಾರುಗಳ ಪ್ರದರ್ಶನವೂ ನಡೆದಿದೆ ಎಂದು ಹೇಳಿದರು.ಕಲೆ ಎಂಬುದು ಮಹಿಳೆಯರಲ್ಲಿ ಜೀವಂತವಾಗಿದೆ, ಕ್ರೀಡೆಗಳು ಮನುಷ್ಯರ ಜೀವನದ ಅವಿಭಾಜ್ಯ ಅಂಗವಾಗಿದ್ದು, ಜೀವನವನ್ನು ಕ್ರೀಡಾ ಮನೋಭಾವದಿಂದ ಸಾಗಿಸಬೇಕು ಎಂದು ಅವರು ಕರೆ ನೀಡಿದರು. ಪ್ರತಿದಿನ ಮಹಾನಗರ ಪಾಲಿಕೆ ಆವರಣದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ನೇರವಾಗಿ ಬಂದು ವೀಕ್ಷಿಸಿ ಆನಂದಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಾರಾದ ಧರಣಿ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎಚ್ ಪಿ ತಾರಾನಾಥ್ ಹಾಗೂ ಮತ್ತಿತರರು ಹಾಜರಿದ್ದರು.