ದೇವರ ಅನುಗ್ರಹವಿಲ್ಲದ ಪ್ರಪಂಚದಲ್ಲಿ ಏನು ನಡೆಯಲು ಸಾಧ್ಯವಿಲ್ಲ, ಮನುಷ್ಯನ ಅತಿಯಾದ ಸ್ವಾರ್ಥತನದಿಂದ ಕೆಲವು ಕಹಿ ಘಟನೆಗಳು ಸಂಭವಿಸುತ್ತಿದೆ ಎಲ್ಲವನ್ನು ಒಳಿತಿನಿಂದ ನೋಡಿದರೆ ಮಾತ್ರ ಶಾಂತಿ ನೆರಸಲು ಸಾಧ್ಯ ಎಂದರು. ಗ್ರಾಮದ ಶ್ರೀ ಮಾರಮ್ಮ ದೇವಿ ದೇವಾಲಯ ನಿರ್ಮಾಣಕ್ಕೆ ಈಗಾಗಲೇ ₹ 3 ಲಕ್ಷ ಅನುದಾನ ನೀಡಲಾಗಿದ್ದು ಇದರ ಜೊತೆಗೆ ಹೆಚ್ಚುವರಿಯಾಗಿ ಕಾಂಪೌಂಡ್ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ₹ 1 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ ಮುಂಬರುವ ದಿನಗಳಲ್ಲೂ ಹೆಚ್ಚಿನ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಧಾರ್ಮಿಕ ಪರಂಪರೆಯಿಂದ ಮಾತ್ರ ಸಂಸ್ಕೃತಿ ಧರ್ಮ ಉಳಿಯಲು ಸಾಧ್ಯ ದೇವಾಲಯ ನಿರ್ಮಾಣದ ಜೊತೆಗೆ ನಿರ್ವಹಣೆಗೂ ಹೆಚ್ಚಿನ ಆದ್ಯತೆ ನೀಡಬೇಕು ಶಾಸಕ ಸಿ ಎನ್ ಬಾಲಕೃಷ್ಣ ತಿಳಿಸಿದರು.ಹೋಬಳಿಯ ಹೊನ್ನಮಾರನಹಳ್ಳಿ ಗ್ರಾಮದ ಶ್ರೀ ಮಾರಮ್ಮ ದೇವಿಯ ನೂತನ ಶಿಲಾ ವಿಗ್ರಹ ಹಾಗೂ ದೇವಾಲಯ ಲೋಕಾರ್ಪಣೆ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ದೇವರ ಅನುಗ್ರಹವಿಲ್ಲದ ಪ್ರಪಂಚದಲ್ಲಿ ಏನು ನಡೆಯಲು ಸಾಧ್ಯವಿಲ್ಲ, ಮನುಷ್ಯನ ಅತಿಯಾದ ಸ್ವಾರ್ಥತನದಿಂದ ಕೆಲವು ಕಹಿ ಘಟನೆಗಳು ಸಂಭವಿಸುತ್ತಿದೆ ಎಲ್ಲವನ್ನು ಒಳಿತಿನಿಂದ ನೋಡಿದರೆ ಮಾತ್ರ ಶಾಂತಿ ನೆರಸಲು ಸಾಧ್ಯ ಎಂದರು. ಗ್ರಾಮದ ಶ್ರೀ ಮಾರಮ್ಮ ದೇವಿ ದೇವಾಲಯ ನಿರ್ಮಾಣಕ್ಕೆ ಈಗಾಗಲೇ ₹ 3 ಲಕ್ಷ ಅನುದಾನ ನೀಡಲಾಗಿದ್ದು ಇದರ ಜೊತೆಗೆ ಹೆಚ್ಚುವರಿಯಾಗಿ ಕಾಂಪೌಂಡ್ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ₹ 1 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ ಮುಂಬರುವ ದಿನಗಳಲ್ಲೂ ಹೆಚ್ಚಿನ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ನುಗ್ಗೇಹಳ್ಳಿ ಏತ ನೀರಾವರಿ ಯೋಜನೆ ಮೂಲಕ ಈ ಭಾಗದ ಕೆರೆಗಳನ್ನು ತುಂಬಿಸಿರುವುದರಿಂದ ರೈತರ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿದೆ. ಈ ಯೋಜನೆ ಸಹಕಾರ ಗೊಳ್ಳದಿದ್ದರೆ ರೈತರು ಸಮಸ್ಯೆ ಎದುರಿಸಬೇಕಾಗುತ್ತಿತ್ತು ತೆಂಗು ಸೇರಿದಂತೆ ಇತರೆ ಬೆಳೆಗಳಿಗೆ ಹೆಚ್ಚಿನ ಅನುಕೂಲವಾಗಿದೆ ಎಂದು ತಿಳಿಸಿದರು. ಧಾರ್ಮಿಕ ಕಾರ್ಯಕ್ರಮದಲ್ಲಿ ಟಿ ಎಪಿಎಂಎಸ್ ನಿರ್ದೇಶಕ ತೋಟಿ ನಾಗರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಮಾಜಿ ಗ್ರಾಪಂ ಅಧ್ಯಕ್ಷ ವಿಠ್ಠಲ್ ಕುಮಾರ್‌, ಮಾಜಿ ಕೃಷಿ ಪತ್ತಿನ ಅಧ್ಯಕ್ಷಗಳಾದ ಎಚ್ ಬಿ ರಂಗಸ್ವಾಮಿ, ಹುಲಿಕೆರೆ ಸಂಪತ್ ಕುಮಾರ್‌, ವೀರಶೈವ ಮುಖಂಡ ಎಂ ಎಸ್ ಸುರೇಶ್, ಡಾ. ನಾಗೇಶ್, ಶುಗರ್‌ ಫ್ಯಾಕ್ಟರಿ ರಮೇಶ್, ಮುಖಂಡರಾದ ಮುರಳಿ, ಮಾಸ್ತಿಗೌಡ, ಜೆಸಿಬಿ ಶೇಖರ್, ಒಂಟಿ ಮಾವಿನಹಳ್ಳಿ ಜಯರಾಮ್, ಎನ್ಎಸ್ ಮಂಜುನಾಥ್ , ಬಸವನಪುರ ಪ್ರಕಾಶ್, ಗುಡಿ ಗೌಡ್ರು ಮಾಳಿಂಗಯ್ಯ, ಅಧ್ಯಕ್ಷ ರಮೇಶ್( ದೊಡ್ಡಯ್ಯ) ಉಪಾಧ್ಯಕ್ಷ ಕೃಷ್ಣಮೂರ್ತಿ, ಖಜಾಂಚಿ ಮಂಜುನಾಥ್ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ಹಾಗೂ ಗ್ರಾಮಸ್ಥರು ಹಾಜರಿದ್ದರು.