ದಂತ ಶುಚಿತ್ವಕ್ಕೂ ಮಹತ್ವ ನೀಡಿ

| Published : Aug 05 2024, 12:39 AM IST

ಸಾರಾಂಶ

ನಗರದ ಸಿದ್ಧಾರ್ಥ ದಂತ ವೈದ್ಯಕೀಯ ಕಾಲೇಜು ವತಿಯಿಂದ ಜಿಲ್ಲೆಯ ಗುಬ್ಬಿ ತಾಲೂಕಿನ ಕೊಡುಗೇಹಳ್ಳಿ ಗ್ರಾಮದಲ್ಲಿ ದಂತ ತಪಾಸಣೆ ಮತ್ತು ದಂತ ರಕ್ಷಣೆ ಜಾಗೃತಿ ಶಿಬಿರ ಯಶಸ್ವಿಯಾಗಿ ಜರುಗಿತು.

ಕನ್ನಡಪ್ರಭ ವಾರ್ತೆ ತುಮಕೂರುನಗರದ ಸಿದ್ಧಾರ್ಥ ದಂತ ವೈದ್ಯಕೀಯ ಕಾಲೇಜು ವತಿಯಿಂದ ಜಿಲ್ಲೆಯ ಗುಬ್ಬಿ ತಾಲೂಕಿನ ಕೊಡುಗೇಹಳ್ಳಿ ಗ್ರಾಮದಲ್ಲಿ ದಂತ ತಪಾಸಣೆ ಮತ್ತು ದಂತ ರಕ್ಷಣೆ ಜಾಗೃತಿ ಶಿಬಿರ ಯಶಸ್ವಿಯಾಗಿ ಜರುಗಿತು.ಕೊಡುಗೇಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಾಲಾ ಮಕ್ಕಳಿಗೆ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಆಂದೋಲನದಲ್ಲಿ ಮಾತನಾಡಿದ ಶ್ರೀ ಸಿದ್ಧಾರ್ಥ ದಂತ ವೈದ್ಯಕೀಯ ಕಾಲೇಜಿನ ಸಮುದಾಯ ದಂತ ವೈದ್ಯಕೀಯ ವಿಭಾಗದ ರೀಡರ್ ಡಾ. ದರ್ಶನಾ ಬೆನ್ನಾಡಿ, ದೈಹಿಕ ಆರೋಗ್ಯದ ಬಗ್ಗೆ ಗಮನ ವಹಿಸುವ ನಾವು ಯಾವುದೇ ರೋಗಗಳಿಗೆ ವೈದ್ಯರ ಸಲಹೆ ಪಡೆಯುತ್ತೇವೆ ಎಂದರು.ಹಲ್ಲಿಗೆ ಸಂಬಂಧಿಸಿದ ನೋವುಗಳು ಉಲ್ಬಣಗೊಂಡಾಗ ಮಾತ್ರ ದಂತ ವೈದ್ಯರ ಬಳಿ ಹೋಗುತ್ತೇವೆ. ಇದು ನಾವು ಮಾಡುವ ಮೊದಲ ತಪ್ಪು. ದೇಹದ ಆರೋಗ್ಯ ಶುಚಿತ್ವಕ್ಕೆ ಮಹತ್ವ ಕೊಡುವ ನಾವು ದಂತ ಶುಚಿತ್ವಕ್ಕೂ ಮಹತ್ವ ಕೊಡಬೇಕು. ಪ್ರತಿ ಆರು ತಿಂಗಳಿಗೊಮ್ಮೆ ದಂತ ತಪಾಸಣೆಯನ್ನು ಮಾಡಿಸುವ ಮೂಲಕ ದಂತದ ಆರೋಗ್ಯವನ್ನು ಕಾಪಾಡಬೇಕು ಎಂದರು.ದಿನಕ್ಕೆರಡು ಬಾರಿ ಹಲ್ಲುಗಳನ್ನು ಶುಚಿಯಾಗಿಡುವ ಅಭ್ಯಾಸವನ್ನು ಮಕ್ಕಳಿಗೆ ಕಲಿಸಿ ಕೊಡುವ ಮೂಲಕ ಮಕ್ಕಳಲ್ಲಿ ದಂತ ಶುಚಿತ್ವ, ದಂತ ಆರೋಗ್ಯದ ಬಗ್ಗೆ ಬಾಲ್ಯದಲ್ಲೇ ಅರಿವು ಮೂಡಿಸುವ ಪ್ರಯತ್ನವನ್ನು ಪೋಷಕರು ಮಾಡಬೇಕು ಎಂದ ಅವರು, ಸಲಹೆ ನೀಡಿದರು. ಹೌಸ್ ಸರ್ಜನ್ ಸಾಯಿ ಅಕ್ಷಿತಾ, ನಿಲುಫಾ, ರಕ್ಷಿತಾ, ರಾಮಚಂದ್ರ, ರುತ್, ರೇಷ್ಮಾ ಹಾಗೂ ವಿದ್ಯಾರ್ಥಿಗಳು ಮತ್ತು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಕೀಯ ಸಿಬ್ಬಂದಿ ಭಾಗವಹಿಸಿದರು. ಕಾರ್ಯಾಗಾರದಲ್ಲಿ ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತ ತಪಾಸಣೆ ನೀಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರಿಗೂ ದಂತ ತಪಾಸಣೆ ನಡೆಸಿ, ಚಿಕಿತ್ಸೆ ನೀಡಲಾಯಿತು. ಸುಮಾರು 272 ಮಂದಿ ಗ್ರಾಮಸ್ಥರು ಶಿಬಿರದ ಪ್ರಯೋಜನ ಪಡೆದರು.