ಸಾರಾಂಶ
ಕನ್ನಡಪ್ರಭ ವಾರ್ತೆ ಆಳಂದ
ತಾಲೂಕಿನಲ್ಲಿ ಭಾನುವಾರ ಅಮಾವಾಸ್ಯೆದಂದು ಒಂದು ತಿಂಗಳ ಕಾಲ ಆರಂಭಗೊಂಡ ಶ್ರಾವಣ ಮಾಸವು ಧಾರ್ಮಿಕ ಆಚರಣೆ ಮತ್ತು ಸಾಂಪ್ರದಾಯಿಕ ಕಾರ್ಯಕ್ರಮಗಳಿಂದ ಎಂದಿನಂತೆ ಭಕ್ತಿ ಭಾವದ ಮಧ್ಯೆ ಆಚರಣೆ ಶರುವಾಗಿದೆ.ಮುಂಗಾರಿಗೆ ಸಕಾಲಕ್ಕೆ ಮಳೆಯಾಗಿ ಉತ್ತಮ ಬೆಳೆಯಿಂದಾಗಿ ಇಳುವರಿಯಲ್ಲಿರುವ ರೈತ ಸಮುದಾಯ ಸಂತಷದೊಂದಿಗೆ ಸಾಂಪ್ರದಾಯಿಕ ಆಚರಣೆಗಳಿಗೆ ಮುಂದಾಗಿದೆ. ದೇವಸ್ಥಾನ, ಮಠ, ಮತ್ತು ಮಂದಿರಗಳಲ್ಲಿ ಪುರಾಣ ಪ್ರವಚನ, ಉಪನ್ಯಾಸ, ಮತ್ತು ದೇವರುಗಳಿಗೆ ರುದ್ರಾಭಿಷೇಕ ಸಹಸ್ರ ಬಿಲ್ವಾರ್ಚನೆ, ಭಜನೆ ಸೇರಿ ವಿವಿಧ ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ಭಕ್ತರು ಸಾಂಪ್ರದಾಯಿಕ ಹಾಡುಗಳೊಂದಿಗೆ ಶಿವನಾಮ ಸ್ಮರಣೆಯಲ್ಲಿ ಭಾಗವಹಿಸುವುದು ಸಾಮಾನ್ಯವಿದೆ. ಬೆಳಗಿನ ಜಾವ ಭಕ್ತರು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ.ಶ್ರಾವಣ ಮಾಸ ಹಬ್ಬದ ವಾತಾವರಣದಿಂದ ಊರಿನ ಜನರು ಪರಸ್ಪರ ಸಹಕಾರ ಮತ್ತು ಸಂತೋಷವನ್ನು ಅನುಭವಿಸುತ್ತಾರೆ. ದೇವಸ್ಥಾನಗಳಲ್ಲಿನ ಧಾರ್ಮಿಕ ಕಾರ್ಯಕ್ರಮಗಳು, ಪ್ರಸಾದ ವಿತರಣೆ, ಹಾಗೂ ಜಾತ್ರೆಗಳು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕನಡೆಯುತ್ತಿವೆ.
ಆಳಂದ ಪಟ್ಟಣದಲ್ಲಿ ಶರಣಮಂಟಪ, ಮಾಲ್ಗಣಾಧಿಶ್ವರ, ಭಕ್ತಮಾರ್ಕಂಡೆಯ, ತಿಂಥಣಿಯ ಮೌನೇಶ್ವರ ದೇಗುಲ, ಭಾರತ ನಗರದಲ್ಲಿನ ಶ್ರೀ ಸಿದ್ಧರೂಢರ ಮಠದಲ್ಲಿ ಕಾರ್ಯಕ್ರಮ ಹಾಗೂ ಶರಣ ಏಕಾಂತರಾಮಯ್ಯನ ಮಂದಿರದಲ್ಲಿ ಶ್ರಾವಣ ಸಂಜೆ ಉಪನ್ಯಾಸ ಕಾರ್ಯಕ್ರಮ ಮತ್ತು ಇನ್ನುಳಿದ ಮಹಾದೇವ ಮಂದಿರ, ಬಾಳನಕೇರಿ, ಸುಲ್ತಾನಪೂರಗಲಿ, ಕರ್ಪ್ಯೂರಲಿಂಗ, ಹನುಮಾನ ದೇವಸ್ಥಾನ, ಸಿದ್ಧೇಶ್ವರ ಮಠ, ನಗರೇಶ್ವರ ರಾಮಮಂದಿರ, ಶ್ರೀ ಏಕನಾಥ ಮಹಾರಾಜ್ ಮಂದಿರ, ರೇವಣಸಿದ್ಧೇಶ್ವರ ಕಾಲೋನಿಯ ರೇವಣಾಸಿದ್ಧೇಶ್ವರ ಗುಡಿ ಸೇರಿ ಇನ್ನಿತರ ದೇಗುಲಗಳಲ್ಲಿ ತಿಂಗಳ ಕಾಲ ಸಂಜೆ ಭಜನೆ ಕೈಗೊಂಡ ಶ್ರಾವಣ ಸಂಪನ್ನದಲ್ಲಿ ಖಾಂಡ್ ನೆರವೇರಲಿವೆ.ತಾಲೂಕಿನ ಜಿಡಗಾ ನವಕಲ್ಯಾಣ ಮಠ, ಮಾದನಹಿಪ್ಪರಗಾ ಶ್ರೀ ಶಿವಲಿಂಗೇಶ್ವರ ವಿರಕ್ತ ಮಠ, ಖಜೂರಿ ಶ್ರೀ ಕೋರಣೇಶ್ವರ ಮಠ, ನರೋಣಾದ ಶ್ರೀ ಕ್ಷೇಮಲಿಂಗೇಶ್ವರ ದೇವಸ್ಥಾನ, ಸಾಲೇಗಾಂವ ಮಹಾದೇವಲಿಂಗ, ಖಂಡಾಳ ರಾಮಲಿಂಗೇಶ್ವರ ದೇವಸ್ಥಾನ, ನಿಂಬರಗಾದ ಶ್ರೀ ಶರಣಬಸವೇಶ್ವರ ದೇವಸ್ಥಾನ, ರುದ್ರವಾಡಿ ಮಲ್ಲಿಕಾರ್ಜುನ ದೇವಸ್ಥಾನ, ಮಾಡಿಯಾಳ ಮಲ್ಲಯ್ಯನ ದೇವಸ್ಥಾನ ತಡಕಲ್‌ದ ಮಲ್ಲಯ್ಯನ ದೇವಸ್ಥಾನ, ಬಸವಣ್ಣ ಸಂಗೋಳಗಿ ಬಸವಣ್ಣದೇವರು, ಯಳಸಂಗಿ ಸಿದ್ಧರೋಢ ಮಠ, ಗುರುಪಾದಲಿಂಗೇಶ್ವರ ಮಠದಲ್ಲಿ, ಧುತ್ತರಗಾಂವ ಶ್ರೀ ವಿರೇಶ್ವರ ದೇವಸ್ಥಾನ, ಕಡಗಂಚಿ ಶ್ರೀ ಶಾಂತಲಿಂಗೇಶ್ವರ, ಮುನ್ನೊಹಳ್ಳಿಯ ಶ್ರೀ ಗಜೇಶ ಮಸಣ್ಣಯ್ಯ ದೇವಸ್ಥಾನ, ಹಿರೋಳಿಯ ಸೋಮೇಶ್ವರ ದೇವಸ್ಥಾನ, ಜಾವಳಿ ಡಿ ಗ್ರಾಮದ ಶ್ರೀ ಪ್ರಭುಲಿಂಗೇಶ್ವರ, ಭೂಸನೂರ ಮಠ, ನಿಂಬಾಳದ ಜಡೆಯ ಶಾಂತಲಿಂಗೇಶ್ವರ ಮಠ, ಹೀಗೆ ಹಲವು ಗ್ರಾಮಗಳಲ್ಲಿ ದೇವಸ್ಥಾನ ಮಠಗಳಲ್ಲಿ ಶ್ರಾವಣ ಮಾಸದಂಗವಾಗಿ ರುದ್ರಾಭಿಷೇಕ ಸಹಸ್ರ ಬಿಲ್ವಾರ್ಚನೆ, ಪೂಜೆ ಭಕ್ತಾದಿಗಳು ನೆರವೇರಿಸುವರು.