ಸಾರಾಂಶ
ವೈಯಕ್ತಿಕ ಸ್ವಚ್ಛತೆಗೆ ಎಷ್ಟು ಮಹತ್ವ ನೀಡುತ್ತೇವೆಯೋ ಅಷ್ಟೇ ಮಹತ್ವವನ್ನು ಸುತ್ತಮುತ್ತಲಿನ ಪರಿಸರ ಸಂರಕ್ಷಣೆ, ಸ್ವಚ್ಛತೆಗೆ ಜಾಗೃತಿ ವಹಿಸಬೇಕೆಂದು ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಶ್ರೀಶೈಲ ಕೋಲಾರ ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ವೈಯಕ್ತಿಕ ಸ್ವಚ್ಛತೆಗೆ ಎಷ್ಟು ಮಹತ್ವ ನೀಡುತ್ತೇವೆಯೋ ಅಷ್ಟೇ ಮಹತ್ವವನ್ನು ಸುತ್ತಮುತ್ತಲಿನ ಪರಿಸರ ಸಂರಕ್ಷಣೆ, ಸ್ವಚ್ಛತೆಗೆ ಜಾಗೃತಿ ವಹಿಸಬೇಕೆಂದು ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಶ್ರೀಶೈಲ ಕೋಲಾರ ಹೇಳಿದರು.ಕೇರೂರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಶುಕ್ರವಾರ ಕೇಂದ್ರ ಸರ್ಕಾರದ ಸ್ವಚ್ಛತಾ ಹೀ ಸೇವಾ ಅಭಿಯಾನದಡಿ 7 ದಿನಗಳ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ಲಾಸ್ಟಿಕ್ ಬಳಕೆ ಸಾಧ್ಯವಾದಷ್ಟು ಕಡಿಮೆ ಮಾಡಬೇಕು, ಮಾರುಕಟ್ಟೆಗೆ ಹೋಗುವಾಗ ಕೈಚೀಲ ಒಯ್ಯುವುದನ್ನು ರೂಢಿಸಿಕೊಳ್ಳಬೇಕು. ಮನೆಯಲ್ಲಿನ ಹಸಿ ಕಸ, ಒಣ ಕಸವನ್ನು ವಿಂಗಡಿಸಿ ವಿಲೇವಾರಿ ಮಾಡುವುದನ್ನು ರೂಢಿಸಿಕೊಳ್ಳಬೇಕೆಂದರು.
ಗ್ರಾಮದಲ್ಲಿ ಡೊಳ್ಳಿನ ತಂಡದೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸ್ವಚ್ಛತೆಯ ಕುರಿತು ಘೋಷಣೆ ಕೂಗುತ್ತ, ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಹಾಗೂ ತಿಳಿವಳಿಕೆ ನೀಡಲಾಯಿತು. ಜಾಥಾದಲ್ಲಿ ಪ್ರಾಚಾರ್ಯ ಎಂ.ಆರ್. ಭಾಗಾಯಿ, ಎಸ್.ಎಂ. ತೇಲಿ, ಎಸ್.ಎಂ. ಕುಲಕರ್ಣಿ, ಎ.ಟಿ. ಬಾನೆ, ಅಮೂಲ ದಾನೋಳೆ, ಎಸ್.ಡಿ. ಮಾನೆ, ಗಣಪತಿ ಪಾಟೀಲ ಇದ್ದರು.