ಸಾರಾಂಶ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ದೇವಸ್ಥಾನ, ಮಸೀದಿಗಳಿಗೆ ಕೊಡುವಷ್ಟೇ ಪ್ರಾಮುಖ್ಯತೆ ಶಾಲೆಗಳಿಗೆ ಕೊಡಿ. ಸರ್ಕಾರ ಶಿಕ್ಷಣಕ್ಕೆ ಸಾಕಷ್ಟು ಮಹತ್ವ ನೀಡುತ್ತಿದೆ. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.ತಾಲೂಕಿನ ಪರ್ವತಿ ಗ್ರಾಮದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಅರ್ಐಡಿಎಫ್ ಯೋಜನೆಯಡಿ ₹1.60 ಕೋಟಿ ವೆಚ್ಚದಲ್ಲಿ ನಿರ್ಮಣಗೊಂಡ ಸರ್ಕಾರಿ ಆರ್ ಎಂ ಎಸ್ಎ ಪ್ರೌಢ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಪರ್ವತಿ ಗ್ರಾಪಂ ಅಧ್ಯಕ್ಷ ಆನಂದ ರಾಠೋಡ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ತಹಸೀಲ್ದಾರ ಎಸ್.ಎಫ್.ಬೊಮ್ಮಣ್ಣವರ್, ಡಿಡಿಪಿಐ ಎ.ಸಿ.ಮನ್ನಿಕೇರಿ, ಬಿಇಒ ಕೇಶವ ಪೆಟ್ಲರ್, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಪಿ. ದೊಡ್ಡಪ್ಪನವರ, ದೈಹಿಕ ಪರಿವೀಕ್ಷಕ ಬಿ.ಎಸ್.ಹಳಗೇರಿ, ಗುತ್ತಿಗೆದಾರ ಶಿವಯ್ಯ ಗಡಾದ, ಗ್ರಾಪಂ ಉಪಾಧ್ಯಕ್ಷೆ ಮಳಿಯಪ್ಪ ಹಾವಡಿ, ರಮೇಶ ಬೂದಿಹಾಳ, ಮಹಾಂತೇಶ ಸರ ಗಣಾಚಾರಿ, ಹನಮಂತ ಹುನಗುಂದ, ಸತ್ಯಪ್ಪ ಜೋಗಿನ, ಮುದಕಪ್ಪ ನರಿ, ಭೀಮಪ್ಪ ಮುಸೀಗೇರಿ, ಅಭಿಯಂತರ ಅಶೋಕ ತೋಪಲಕಟ್ಟಿ, ಪ್ರಮೋದ ಗೌಡರ, ಪಿಡಿಒ ರಾಜನಾಳ ಗ್ರಾಪಂ ಸದಸ್ಯರು ಇದ್ದರು. ರಾಘಾಪೂರ, ಹಂಸನೂರ, ತೆಗ್ಗಿ, ಕೆಲವಡಿ, ತಿಮ್ಮಸಾಗರ, ಲಿಂಗಾಪೂರ ಗ್ರಾಮಗಳಲ್ಲಿಯೂ ವಿವಿಧ ಕಾಮಗಾರಿಗಳಿಗೂ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಕೆಲ ಗ್ರಾಮಗಳಲ್ಲಿಯ ಗ್ರಾಮಸ್ಥರ ವೈಮನಸ್ಸಿನ ಭಿನ್ನಾಭಿಪ್ರಾಯಗಳಿಗೂ ಬುದ್ದಿ ಹೇಳಿದ ಪ್ರಸಂಗಗಳು ನಡೆದವು.
;Resize=(128,128))
;Resize=(128,128))
;Resize=(128,128))
;Resize=(128,128))