ಶ್ರೀನಿಧಿ ಸಂಘದ ಬೆಳ್ಳಿ ಹಬ್ಬ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ

ಕನ್ನಡಪ್ರಭ ವಾರ್ತೆ ಹೊನ್ನಾವರ

ಪ್ರತಿಭೆಗಳಿಗೆ ಸಮಾಜದವರು ಪೋತ್ಸಾಹ ನೀಡಿದರೆ ಮಾತ್ರ ಇನ್ನಷ್ಟು ಸಾಧನೆ ಮಾಡಲು ಸಾಧ್ಯ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.ಶ್ರೀನಿಧಿ ಸೇವಾವಾಹಿನಿಯ ವತಿಯಿಂದ ಬಾಳೆಗದ್ದೆ ವೆಂಕಟ್ರಮಣ ಸಭಾಭವನದಲ್ಲಿ ಜರುಗಿದ ಶ್ರೀನಿಧಿ ಸಂಘದ ಬೆಳ್ಳಿ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸುಶಿಕ್ಷಿತ ಸಮಾಜದ ಅಭಿವೃದ್ಧಿಗೆ ಶಿಕ್ಷಣವು ಪ್ರಮುಖ ಪಾತ್ರ ವಹಿಸಲಿದ್ದು, ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವಂತೆ ಸಲಹೆ ನೀಡಿದರು.‌ ಚಿಕ್ಕ ಸಮಾಜವಾದ ಗಾಣಿಗ ಸಮಾಜದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕಳೆದ ೨೫ ವರ್ಷದಿಂದ ಪ್ರತಿಭಾ ಪುರಸ್ಕಾರದ ಶೈಕ್ಷಣಿಕ ಸಲಕರಣೆ ನೀಡುವ ಕಾರ್ಯಕ್ರಮ ಯಶ್ವಸಿಯಾಗಿ ಮಾಡುತ್ತಾ ಬಂದಿರುವುದು ಪ್ರಶಂಸಾರ್ಹವಾಗಿದೆ. ಉತ್ತಮವಾಗಿ ಸಂಘಟನೆ ಮಾಡಿಕೊಂಡು ನಮ್ಮ ಸಮಾಜದ ಇತರೆ ತಾಲೂಕಿಗೆ ಮಾದರಿಯಾಗಿದೆ ಎಂದರು.

ಯದುವೀರ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ನಾಯ್ಕ ಮಾತನಾಡಿ, ಗಾಣಿಗ ಸಮಾಜ ಸಣ್ಣದಾದರೂ ವಿವಿಧ ರಂಗದಲ್ಲಿ ಸಾಧನೆ ಮಾಡಿದ್ದಾರೆ. ಶಿಕ್ಷಣ, ಕಲೆ, ಕ್ರೀಡಾ ಕ್ಷೇತ್ರದಲ್ಲಿ ಹಲವು ಅವಕಾಶವಿದ್ದು, ಯುವ ಸಮುದಾಯ ದೊರೆತ ಅವಕಾಶ ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.


ಶಿವಮೊಗ್ಗ ಜಿಲ್ಲಾ ನೋಂದಣಾಧಿಕಾರಿ ನಾಗಭೂಷಣ ಚಂದ್ರಶೇಖರ ಕಲ್ಮನೆ, ಭಟ್ಕಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಧ್ಯಕ್ಷ ಪ್ರೊ. ನಾಗೇಶ ಶೆಟ್ಟಿ ಮಾತನಾಡಿದರು.

ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶ್ರೀನಿಧಿ ಸೇವಾ ವಾಹಿನಿ ಅಧ್ಯಕ್ಷ ಕೇಶವ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು‌.

ಹೊಸಾಕುಳಿ ವಿ.ಎಸ್.ಎಸ್. ಅಧ್ಯಕ್ಷ ಸುರೇಶ ಶೆಟ್ಟಿ, ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷ ಗಜಾನನ ಶೆಟ್ಟಿ, ವೆಂಕಟ್ರಮಣ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಕೆ. ಶೆಟ್ಟಿ, ಜಯ ರ‍್ನಾಟಕ ಸಂಘದ ಉಪಾಧ್ಯಕ್ಷ ಪ್ರದೀಪ ಶೆಟ್ಟಿ, ನಿವೃತ್ತ ತಾಲೂಕಾ ಎಲ್.ಎಚ್.ಪಿ. ಸುನಂದಾ ಶೆಟ್ಟಿ, ಉದ್ಯಮಿ ನರಸಿಂಹ ಶೆಟ್ಟಿ ಕಡತೋಕಾ, ಸಿವಿಲ್ ಎಂಜಿನಿಯರ್ ಸದಾನಂದ ಕೇಶವ ಶೆಟ್ಟಿ, ಗುತ್ತಿಗೆದಾರ ಸಂದೇಶ ಶೆಟ್ಟಿ ಇತರರಿದ್ದರು.

ಸಂಘದ ಸದಸ್ಯ ಮಂಜುನಾಥ ಶೆಟ್ಟಿ ಸ್ವಾಗತಿಸಿ, ಆರ್.ಬಿ. ಶೆಟ್ಟಿ ಮತ್ತು ಜಿ.ಆರ್. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಮಹೇಶ ಶೆಟ್ಟಿ ವಂದಿಸಿದರು.