ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಿ

| Published : Nov 12 2025, 02:00 AM IST

ಸಾರಾಂಶ

ಜ್ಞಾನಾರ್ಜನೆಗಾಗಿ, ವ್ಯವಹಾರಕ್ಕಾಗಿ ಅನ್ಯಭಾಷೆಕಲಿಯುವ ಜೊತೆಗೆ ನಮ್ಮ ಹೖದಯ ಭಾಷೆಯಾದ ಕನ್ನಡಕ್ಕೆ ನಾವೆಲ್ಲರೂ ಹೆಚ್ಚಿನ ಆದ್ಯತೆ ನೀಡಬೇಕು. ಕನ್ನಡ ಎಂಬುದು ತಾಯಿ ಭಾಷೆ ಮಾತ್ರವಲ್ಲ ಇದೊಂದು ಕರುಳಿನ ಭಾಷೆ ಎಂದು ಸಾಹಿತಿ ಶಂಕನಪುರ ಮಹದೇವು ಹೇಳಿದರು.

ಕನ್ನಡಪ್ರಭವಾರ್ತೆ, ಕೊಳ್ಳೇಗಾಲ

ಜ್ಞಾನಾರ್ಜನೆಗಾಗಿ, ವ್ಯವಹಾರಕ್ಕಾಗಿ ಅನ್ಯಭಾಷೆಕಲಿಯುವ ಜೊತೆಗೆ ನಮ್ಮ ಹೖದಯ ಭಾಷೆಯಾದ ಕನ್ನಡಕ್ಕೆ ನಾವೆಲ್ಲರೂ ಹೆಚ್ಚಿನ ಆದ್ಯತೆ ನೀಡಬೇಕು. ಕನ್ನಡ ಎಂಬುದು ತಾಯಿ ಭಾಷೆ ಮಾತ್ರವಲ್ಲ ಇದೊಂದು ಕರುಳಿನ ಭಾಷೆ ಎಂದು ಸಾಹಿತಿ ಶಂಕನಪುರ ಮಹದೇವು ಹೇಳಿದರು.

ತಾಲೂಕಿನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿ, ದೇಶಕ್ಕೆ ಬುದ್ದ, ಬಸವ, ಅಂಬೇಡ್ಕರ್‌ರವರು ನೀಡಿದ ಕೊಡುಗೆ ಅಪಾರ. ಅವರಂತೆ ಸಾಧನೆ ಮಾಡಬೇಕು ಹಾಗೂ ಎಲ್ಲರೂ ನಮ್ಮ ಕನ್ನಡ ಭಾಷೆಯ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಕನ್ನಡ ನಾಡು ನುಡಿಯ ಉಳಿವಿಗಾಗಿ ನಾವೆಲ್ಲರೂ ಶ್ರಮಿಸಬೇಕು ಎಂದರು.

ಕೊಳ್ಳೇಗಾಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗರಾಜು ಎಸ್ ಕೊಂಗರಹಳ್ಳಿ ಮಾತನಾಡಿ, ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು ಸಾವಿರಾರು ವರುಷಗಳ ಐತಿಹ್ಯವುಳ್ಳ ಭಾಷೆಯಾಗಿದ್ದು ನಾವೆಲ್ಲರೂ ಭಾಷಾಭಿಮಾನಿಗಳಾಗಬೇಕು, ನೆಲ, ಜನ ಭಾಷೆ ವಿಚಾರದಲ್ಲಿ ಧಕ್ಕೆಯಾದಾಗ ಸೆಟೆದು ನಿಲ್ಲುವಂತಾಗಬೇಕು. ಪ್ರಾಂಶುಪಾಲ ಡಾ. ಹೆಚ್ ಎಸ್ ಕೊಂಗಳಪ್ಪ ಮಾತನಾಡಿ ಯುವ ಪೀಳಿಗೆ ಕನ್ನಡ ಉಳಿಸಿ ಬೆಳೆಸುವ ಜವಾಬ್ದಾರಿ ಅರಿಯಬೇಕು ಎಂದರು.