ಸಾರಾಂಶ
ಕಾಗವಾಡ: ಈ ಬಾರಿಯ ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ನಿಶ್ವಿತ ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಹೇಳಿದರು.
ಕನ್ನಡಪ್ರಭ ವಾರ್ತೆ ಕಾಗವಾಡ
ಈ ಬಾರಿಯ ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ನಿಶ್ವಿತ ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಹೇಳಿದರು.ಅಥಣಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮುರಗುಂಡಿ, ತಂಗಡಿ, ವಡ್ರಟ್ಟಿ, ಶಿನ್ನಾಳ ಗ್ರಾಮಗಳಲ್ಲಿ ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಕೈಗೊಂಡು ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಕಳೆದ 10 ವರ್ಷಗಳ ಆಡಳಿತಾವಧಿಯಲ್ಲಿ ದೇಶ ಅಧೋಗತಿಗೆ ತಂದಿದ್ದಾರೆ. ಹೀಗೆ ಬಿಟ್ಟರೆ ಅವರು ನಮ್ಮನ್ನೆಲ್ಲ ಗುಲಾಮಗಿರಿಗೆ ತಂದಿಡುತ್ತಾರೆ. ಅಧಿಕಾರದಿಂದ ಅವರನ್ನು ಕಿತ್ತೋಗೆದು ಮತ್ತೆ ಕಾಂಗ್ರೆಸ್‌ಗೆ ಅಧಿಕಾರ ಕೊಡಬೇಕು ಎಂದು ಕೋರಿದರು.ಚಿಕ್ಕೋಡಿ ಜಿಲ್ಲಾ ಮಾಧ್ಯಮ ವಕ್ತಾರ ರಾವಸಾಹೇಬ್ ಐಹೊಳಿ ಮಾತನಾಡಿ, ಮೋದಿಯವರು ಮಹಿಳೆಯರ, ಕಾರ್ಮಿಕರ, ದಲಿತರ, ಬಡವರ ಬಗ್ಗೆ ಒಂದೂ ಯೋಜನೆಗಳನ್ನು ಜಾರಿಗೆ ತರಲಿಲ್ಲ. ಇಂಥ ಭ್ರಷ್ಟ ಬಿಜೆಪಿ ಸರ್ಕಾರ ಬೇಕಾ? ಬಿಜೆಪಿ ಮತ್ತೆ ಅಧಿಕಾರ ಕೊಡಬೇಕಾ? ಇಂದಿರಾ ಗಾಂಧಿ ಕಾಲದಲ್ಲಿ ಉಳುವವನೇ ಒಡೆಯ ಎಂದು ಯೋಜನೆ ಜಾರಿಗೆ ತಂದವರರು ಇಂಥ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಮನವಿ ಮಾಡಿದರು.
ಬ್ಲಾಕ್ ಅಧ್ಯಕ್ಷ ಸಿದ್ದಾರ್ಥ ಶಿಂಘೆ ಮಾತನಾಡಿ, ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಸರಿಯಾಗಿ ಅರ್ಥ ಮಾಡಿಸಿ ಬಿಜೆಪಿಯ ಸುಳ್ಳುಗಳಿಗೆ ತಕ್ಕ ಉತ್ತರ ನೀಡಬೇಕು. ನಾವು ಕಳೆದ ಒಂದು ವಾರದಿಂದ ಕ್ಷೇತ್ರದ ತುಂಬ ಪ್ರಚಾರ ಕೈಗೊಂಡಿದ್ದು ಎಲ್ಲೆಡೆ ವ್ಯಾಪಕವಾದ ಬೆಂಬಲ ವ್ಯಕ್ತವಾಗುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ವೇಳೆ ಮುಖಂಡರಾದ ರಮೇಶ ಸಿಂದಗಿ, ಬಸವರಾಜ ಬುಟಾಳೆ, ಶ್ರೀಶೈಲ ನಾಯಿಕ, ಅರುಣ ಬಾಸಿಂಗೆ, ನೇಮಿನಾಥ ನಂದಗಾಂವ, ಬಸವರಾಜ ಗುಮಟೆ, ಉಮರ್ ಸೈಯ್ಯದ್, ಸುಶೀಲಕುಮಾರ ಪತ್ತಾರ, ಸಂಜು ಕಾಂಬಳೆ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))