ಸಾರಾಂಶ
ಗ್ರಾಪಂ ಆಡಳಿತ ಮಂಡಳಿ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡದೆ ಹೊಂದಾಣಿಕೆ ಮಾಡಿಕೊಂಡರೇ ಗ್ರಾಮಗಳ ಅಭಿವೃದ್ಧಿಯಾಗಲಿವೆ. ನಾನು ಕೂಡ ಅನುದಾನ ತರಲು ನೆರವಾಗಲಿದ್ದು, ಅದನ್ನು ಸಮರ್ಪಕವಾಗಿ ಬಳಸಿ ಕೊಳ್ಳುವ ಮೂಲಕ ಗ್ರಾಮಗಳಿಗೆ ಕುಡಿಯುವ ನೀರು, ಶೌಚಾಲಯ, ಚರಂಡಿ ಸೇರಿದಂತೆ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಸಹಕರಿಸಬೇಕು.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಪಂಚಾಯ್ತಿ ವ್ಯಾಪ್ತಿ ಗ್ರಾಮಗಳ ಅಭಿವೃದ್ಧಿಯೊಂದಿಗೆ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಸಲಹೆ ನೀಡಿದರು.ಭಾರತೀ ವಿದ್ಯಾ ಸಂಸ್ಥೆಯ ಆಡಳಿತ ಕಚೇರಿಯಲ್ಲಿ ಮೆಣಸಗೆರೆ ಗ್ರಾಪಂ ನೂತನ ಅಧ್ಯಕ್ಷೆ ಪಾರ್ವತಮ್ಮ ಅವರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಗ್ರಾಮಗಳ ಅಭಿವೃದ್ಧಿಗೆ ಗ್ರಾಪಂ ಸುಪ್ರೀಂ ಆಗಿದೆ. ಮೊದಲು ಮೂಲ ಸೌರ್ಕಯ ಕಲ್ಪಿಸಲು ನೆರವಾಗಿ ಎಂದರು.
ಗ್ರಾಪಂ ಆಡಳಿತ ಮಂಡಳಿ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡದೆ ಹೊಂದಾಣಿಕೆ ಮಾಡಿಕೊಂಡರೇ ಗ್ರಾಮಗಳ ಅಭಿವೃದ್ಧಿಯಾಗಲಿವೆ. ನಾನು ಕೂಡ ಅನುದಾನ ತರಲು ನೆರವಾಗಲಿದ್ದು, ಅದನ್ನು ಸಮರ್ಪಕವಾಗಿ ಬಳಸಿ ಕೊಳ್ಳುವ ಮೂಲಕ ಗ್ರಾಮಗಳಿಗೆ ಕುಡಿಯುವ ನೀರು, ಶೌಚಾಲಯ, ಚರಂಡಿ ಸೇರಿದಂತೆ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.ಗ್ರಾಪಂ ಅಧ್ಯಕ್ಷೆ ಪಾರ್ವತಮ್ಮ ಮಾತನಾಡಿ, ನಾನು ಅಧ್ಯಕ್ಷನಾಗಿ ಮಾಡಲು ಸಹಕರಿಸಿದ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳ ಸದಸ್ಯರು, ಜನರಿಗೆ ನಾನು ಚಿರಋಣಿಯಾಗಿದ್ದೇನೆ. ನನ್ನ ಸ್ಥಾನಕ್ಕೆ ಕಳಂಕ ಬರದಂತೆ ಕಾರ್ಯನಿರ್ವಾಹಿಸುತ್ತೇನೆ. ಗ್ರಾಮಗಳ ಅಭಿವೃದ್ಧಿಗೆ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ಶ್ರಮಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ಬಿ.ಗಿರೀಶ್, ಮಾಜಿ ಅಧ್ಯಕ್ಷರಾದ ಎಂ.ಕೆ.ಮಹದೇವು, ಫಾರಂ ರಾಜು, ಉಪಾಧ್ಯಕ್ಷ ಮಡೇನಹಳ್ಳಿ ಸ್ವಾಮಿ, ಸದಸ್ಯರಾದ ಬೊಪ್ಪಸಮುದ್ರ ಅಜಯ್, ಪುಷ್ಪ ಗಿರೀಶ್ ಮುಖಂಡರಾದ ದೇವೇಗೌಡನದೊಡ್ಡಿ ನಾಡಗೌಡ ಸೋಮು, ಪ್ರಮೋದ್, ರಾಜಣ್ಣ, ಆಲೂರಯ್ಯ, ಮಂಜು, ಬೊಪ್ಪಸಮುದ್ರ ಸ್ವಾಮಿ, ತೊರೆಬೊಮ್ಮನಹಳ್ಳಿ ರಮೇಶ್ ಸೇರಿದಂತೆ ಮತಿತ್ತರಿದ್ದರು.