ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡಿ: ಸಂಸದ ಬಚ್ಚೇಗೌಡ

| Published : Jul 20 2024, 12:46 AM IST

ಸಾರಾಂಶ

ನಗರದಲ್ಲಿ ೮ ಸಾವಿರಕ್ಕೂ ಅಧಿಕ ವಕ್ಕಲಿಗ ಸಮುದಾಯವಿದೆ. ನಾಡಪ್ರಭು ಕೆಂಪೇಗೌಡರ ಸ್ಮರಣಾರ್ಥ ಉತ್ತಮ ಕೆಲಸ ಮಾಡಲಾಗುತ್ತಿದೆ. ವಕ್ಕಲಿಗರು ಯಾವುದೇ ವೃತ್ತಿ ಮಾಡಲಿ ಮೊದಲಿಗೆ ವಿದ್ಯಾವಂತರಾಗಬೇಕು, ಸಂಸ್ಕಾರ ಕಲಿಯಬೇಕು. 2023-24ನೇ ಸಾಲಿನಲ್ಲಿ ರಾಜ್ಯದಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ತೋರುತ್ತಿದೆ.

ಹೊಸಕೋಟೆ: ಟೌನ್ ವಕ್ಕಲಿಗ ಸಂಘ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದರು.

ನಗರದ ಶ್ರೀವಾರಿ ಕಲ್ಯಾಣ ಮಂಟಪದಲ್ಲಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಇಂದಿಗೂ ಶಿಕ್ಷಕರ ಕೊರತೆ ಇದೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಮನ ಹರಿಸಿ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಕಾಳಜಿ ವಹಿಸಬೇಕು ಎಂದರು.

ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ನಗರದಲ್ಲಿ ೮ ಸಾವಿರಕ್ಕೂ ಅಧಿಕ ವಕ್ಕಲಿಗ ಸಮುದಾಯವಿದೆ. ನಾಡಪ್ರಭು ಕೆಂಪೇಗೌಡರ ಸ್ಮರಣಾರ್ಥ ಉತ್ತಮ ಕೆಲಸ ಮಾಡಲಾಗುತ್ತಿದೆ. ವಕ್ಕಲಿಗರು ಯಾವುದೇ ವೃತ್ತಿ ಮಾಡಲಿ ಮೊದಲಿಗೆ ವಿದ್ಯಾವಂತರಾಗಬೇಕು, ಸಂಸ್ಕಾರ ಕಲಿಯಬೇಕು. 2023-24ನೇ ಸಾಲಿನಲ್ಲಿ ರಾಜ್ಯದಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ತೋರುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ವಕ್ಕಲಿಗ ಸಂಘದ ನಿರ್ದೇಶಕರಾದ ರಾಜಶೇಕರ್ ಗೌಡ, ಕೋಡಿಹಳ್ಳಿ ಸುರೇಶ್, ಉದ್ಯಮಿ ಬಿ.ವಿ. ಬೈರೇಗೌಡ, ತಹಸೀಲ್ದಾರ್ ವಿಜಯ್ ಕುಮಾರ್, ಭಾರತೀಯ ಮೆಡಿಕಲ್ ಅಸೋಷಿಯೇಷನ್ ತಾಲೂಕು ಮಾಜಿ ಅಧ್ಯಕ್ಷ ಡಾ.ನಾಗರಾಜ್‌, ತಾಪಂ ಇಒ ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ್, ಉಮಾ ಬಚ್ಚೇಗೌಡ, ಪ್ರತಿಭಾ ಶರತ್ ಬಚೇಗೌಡ, ಟೌನ್ ವಕ್ಕಲಿಗರ ಸಂಘದ ಪದಾಧಿಕಾರಿಗಳಾದ ಸೋಮಶೇಖರ್, ನಂಜೇಗೌಡ, ಬಚ್ಚಣ್ಣ, ಲಕ್ಷ್ಮಣಗೌಡ ಇತರರಿದ್ದರು.