ಮಕ್ಕಳಿಗೆ ಸಂಸ್ಕಾರ ನೀಡಿ: ಚಿಕ್ಕಮಗಳೂರು ಗೌರಿಗದ್ದೆ ಸ್ವರ್ಣ ಪೀಠಾಕಾಪುರದ ವಿನಯ ಗುರೂಜಿ

| Published : Jan 11 2025, 12:49 AM IST / Updated: Jan 11 2025, 12:10 PM IST

ಮಕ್ಕಳಿಗೆ ಸಂಸ್ಕಾರ ನೀಡಿ: ಚಿಕ್ಕಮಗಳೂರು ಗೌರಿಗದ್ದೆ ಸ್ವರ್ಣ ಪೀಠಾಕಾಪುರದ ವಿನಯ ಗುರೂಜಿ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಲ್ಲಿ ಧ್ಯಾನ, ಯೋಗ, ಸತ್ಸಂಗ ಹಾಗೂ ದೇಶ ಭಕ್ತಿ ಮೂಡಿಸುವ ಚಟುವಟಿಕೆ ಹಮ್ಮಿಕೊಳ್ಳಬೇಕು. ಇದರೊಂದಿಗೆ ಉತ್ತಮ ಸಂಸ್ಕಾರ ನೀಡುವತ್ತ ಒತ್ತು ನೀಡುವ ಅಗತ್ಯವಿದೆ ಎಂದು ಚಿಕ್ಕಮಗಳೂರು ಗೌರಿಗದ್ದೆ ಸ್ವರ್ಣ ಪೀಠಾಕಾಪುರದ ವಿನಯ ಗುರೂಜಿ ಅಭಿಪ್ರಾಯಪಟ್ಟರು.

  ಹುಕ್ಕೇರಿ : ಮಕ್ಕಳಲ್ಲಿ ಧ್ಯಾನ, ಯೋಗ, ಸತ್ಸಂಗ ಹಾಗೂ ದೇಶ ಭಕ್ತಿ ಮೂಡಿಸುವ ಚಟುವಟಿಕೆ ಹಮ್ಮಿಕೊಳ್ಳಬೇಕು. ಇದರೊಂದಿಗೆ ಉತ್ತಮ ಸಂಸ್ಕಾರ ನೀಡುವತ್ತ ಒತ್ತು ನೀಡುವ ಅಗತ್ಯವಿದೆ ಎಂದು ಚಿಕ್ಕಮಗಳೂರು ಗೌರಿಗದ್ದೆ ಸ್ವರ್ಣ ಪೀಠಾಕಾಪುರದ ವಿನಯ ಗುರೂಜಿ ಅಭಿಪ್ರಾಯಪಟ್ಟರು.

ಪಟ್ಟಣದ ಮಹಾವೀರ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ ಪ್ರಸಕ್ತ ಸಾಲಿನ ವಸಂತೋತ್ಸವ ಹಾಗೂ ಮಕ್ಕಳ ಹಬ್ಬ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳನ್ನು ದೇಶದ ಸತ್ಪ್ರಜೆಗಳನ್ನಾಗಿ ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದು ಅಭಿಪ್ರಾಯಪಟ್ಟರು.

ಜೈನ ತೀರ್ಥಂಕರ ಹೆಸರಿನಲ್ಲಿ ಸ್ಥಾಪಿತಗೊಂಡ ಮಹಾವೀರ ಶಿಕ್ಷಣ ಸಂಸ್ಥೆ ಈ ಭಾಗದ ಎಲ್ಲ ವರ್ಗದವರ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ. ಜೊತೆಗೆ ಸಂಸ್ಕಾರ, ಗೋಪಾಲನೆ ನೀಡುವಲ್ಲೂ ತನ್ನನ್ನು ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಚಾರ ಎಂದವರು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಶ್ರೀರಂಗಪಟ್ಟಣ ಚಂದ್ರವನ ಆಶ್ರಮದ ಡಾ.ತ್ರೀನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಮಕ್ಕಳಲ್ಲಿ ಧೈರ್ಯ, ಭರವಸೆ, ನಂಬಿಕೆ ಮನೋಭಾವನೆಯಿದ್ದರೆ ಮಾತ್ರ ಗುರಿ ತಲುಪಲು ಸಾಧ್ಯವಿದೆ. ಸಮಾಜದಲ್ಲಿ ಸಾಧಕನಾಗಲು ಅವಿರತ ಶ್ರಮ ಅಗತ್ಯ ಎಂದರು.

ಮಹಾವೀರ ಉದ್ಯೋಗ ಸಮೂಹ ಸಂಸ್ಥೆಯ ಅಧ್ಯಕ್ಷರೂ ಆದ ಪುರಸಭೆ ಹಿರಿಯ ಸದಸ್ಯ ಮಹಾವೀರ ನಿಲಜಗಿ ಅಧ್ಯಕ್ಷತೆ ವಹಿಸಿದ್ದರು. ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಪ್ರಜ್ವಲ ನಿಲಜಗಿ, ಕಾರ್ಯದರ್ಶಿ ಸಂಜಯ ನಿಲಜಗಿ, ಮುಖಂಡರಾದ ಅಶೋಕ ಪಾಟೀಲ, ರೋಹಿತ ಚೌಗಲಾ, ಬಾಹುಬಲಿ ಸೊಲ್ಲಾಪುರೆ, ರಾಜು ಕುಲಕರ್ಣಿ, ಅನಿಲ ಶೆಟ್ಟಿ, ಪದ್ಮಶ್ರೀ ನಿಲಜಗಿ ಮತ್ತಿತರರು ಉಪಸ್ಥಿತರಿದ್ದರು.