ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ದಲಿತ ಎಂಬ ಪದವನ್ನು ಅರ್ಥೈಸಿಕೊಂಡು ಕೀಳರಿಮೆ ಭಾವನೆಯಿಂದ ನಡೆದರೇ ಅಂಥವರಿಗೆ ಇನ್ನುಮುಂದೆ ತಕ್ಕಪಾಠ ಕಲಿಸಬೇಕಾದಿತು ಎಂದು ತಾಳಿಕೋಟೆಯ ವಿವಿಧ ದಲಿತಪರ ಸಂಘಟನೆಯ ಉಪಾಧ್ಯಕ್ಷ ಬಸವರಾಜ ಕಟ್ಟಿಮನಿ ಎಚ್ಚರಿಕೆ ನೀಡಿದರು.ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಧಿಕಾರಿಗಳ ಕಿರುಕುಳದಿಂದ ನೆಣಿಗೆ ಶರಣಾದ ಸ್ಟಾಪ್‌ನರ್ಸ್ ಕಾರ್ಮಿಕ ಶಶಿಕಾಂತ ಬೆನ್ನೂರ ಅವರ ಕುಟುಂಬಕ್ಕೆ ನ್ಯಾಯ ದೊರಿಕಿಸಿ ಕೊಡುವುದರ ಕುರಿತು ಶುಕ್ರವಾರ ತಾಳಿಕೋಟೆಯ ವಿವಿಧ ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ಆಯೋಜಿಸಲಾದ ಬೃಹತ್ ಪ್ರತಿಭಟನೆ ಹಾಗೂ ತಾಳಿಕೋಟೆ ಬಂದ್ ಕರೆ ನೀಡಿದರ ಹಿನ್ನೆಲೆಯಲ್ಲಿ ಸಂಘಟನೆಗಳ ಮುಖಂಡರನ್ನು ಹಾಗೂ ಸಾರ್ವಜನಿಕರನ್ನು ಮತ್ತು ಸಂಘಟನೆಯ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ಟಾಪ್‌ನರ್ಸ್ ಶಶಿಕಾಂತ ಬೆನ್ನೂರ ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆಯೇ ಕೆಲವು ಅಧಿಕಾರಿ ವರ್ಗದವರ ಹಾಗೂ ಒಳಕಾರ್ಮಿಕರ ಹೆಸರನ್ನು ಬರೆದಿಟ್ಟು ಸಂಘಟಿಕರಿಗೆ ಹಾಗೂ ತನ್ನ ಮಿತ್ರರಿಗೆ ರವಾನೆ ಮಾಡಿದ್ದಾನೆ. ಅವನು ನೇಣಿಗೆ ಶರಣಾಗಬೇಕಾದರೇ ಅವನಿಗೆ ಎಂತಹ ತೊಂದರೆ ಕೊಟ್ಟರಬಹುದೆಂಬುವುದು ನೀವೇ ಅವಲೋಕನ ಮಾಡಿಕೊಳ್ಳಿ. ಶಶಿಕಾಂತ ಬೆನ್ನೂರ ಅವರು ನೇಣಿಗೆ ಶರಣಾಗುವಂತಹ ಮಾನಸಿಕ ಹಿಂಸೆ ನೀಡಿದವರನ್ನು ಕೂಡಲೇ ಬಂದಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಸಂಘಟನಾ ಸಂಚಾಲಕರಾದ ರಾಹುಲ್ ತಳಕೇರಿ, ಬೆಳಗಾವಿ ವಿಭಾಗದ ಸಂಘಟನಾ ಸಂಚಾಲಕ ದೇವೇಂದ್ರ ಹಾದಿಮನಿ, ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಗುರು ಗುಡಿಮನಿ, ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಹುಲಗಪ್ಪ ಚಲವಾದಿ, ಮಹೇಶ ಚಲವಾದಿ ಸೇರಿದಂತೆ ವಿವಿಧ ದಲಿತಪರ ಮುಖಂಡರುಗಳು ಉಪಸ್ಥಿತಿಯಲ್ಲಿ ಮುದ್ದೇಬಿಹಾಳ ತಹಸೀಲ್ದಾರ್ ಬಲರಾಮ ಕಟ್ಟಿಮನಿ ಅವರಿಗೆ ಮನವಿ ಸಲ್ಲಿಸಲಾಯಿತು.ವಿವಿಧ ದಲಿತಪರ ಸಂಘಟನೆಗಳ ಮುಖಂಡರುಗಳು ಪದಾಧಿಕಾರಿಗಳು, ಸಮಸ್ತ ದಲಿತಪರ ಸಂಘಟಿಕರನ್ನೊಳಗೊಂಡ ಪ್ರತಿಭಟನಾ ಮೆರವಣಿಗೆಯು ಡಾ.ಬಾಬಾಸಾಹೇಬ ಅಂಬೇಡ್ಕರ್ ಭವನದಿಂದ ಪ್ರಾರಂಭಗೊಂಡು ಅಂಬೇಡ್ಕರ್ ಸರ್ಕಲ್ ಮೂಲಕ, ಕತ್ರಿ ಬಜಾರ, ವಿಠ್ಠಲ ಮಂದಿರ ರಸ್ತೆ, ಬಸ್ ನಿಲ್ದಾಣ ರಸ್ತೆಗುಂಟಾ ಹಾಯ್ದು ಮರಳಿ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ನಿರ್ಮಿಸಿ ಕೆಲಹೊತ್ತು ಧರಣಿ ನಡೆಸಿದರು.ಪ್ರತಿಭಟನಾ ಕಾರ್ಯಕ್ರಮದ ನೇತೃತ್ವವನ್ನು ವಿವಿಧ ದಲಿತಪರ ಸಂಘಟನೆಯ ಗೌರವಾಧ್ಯಕ್ಷ ಎಸ್.ಬಿ.ಕಟ್ಟಿಮನಿ, ಅಧ್ಯಕ್ಷ ಮುತ್ತಪ್ಪಣ್ಣ ಚಮಲಾಪೂರ, ಉಪಾಧ್ಯಕ್ಷ ಬಸವರಾಜ ಕಟ್ಟಿಮನಿ, ಹಿರಿಯರಾದ ಶಾಂತಪ್ಪ ಚಲವಾದಿ, ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ನಾಗೇಶ ಕಟ್ಟಿಮನಿ, ಕಾಶಿನಾಥ ಕಾರಗನೂರ, ಶಿವಶಂಕರ ಕಟ್ಟಿಮನಿ, ಮಾಳಪ್ಪ ಮಾಳಳ್ಳಿ, ಹುಲಗಪ್ಪ ಚಲವಾದಿ, ಮಹಾಂತೇಶ ಕಟ್ಟಿಮನಿ, ಗೌತಮ್ಮ ಪತ್ತೇಪೂರ, ಬಸವರಾಜ ಬಳಗಾನೂರ, ಬಸವರಾಜ ಬಡಿಗೇರ, ವಿಶ್ವನಾಥ ಚಲವಾದಿ, ಗೋಪಾಲ ಕಟ್ಟಿಮನಿ, ಗುರುಪ್ರಸಾದ ಬಿ.ಜಿ, ಪರಶುರಾಮ ಕಟ್ಟಿಮನಿ, ಸಿದ್ದು ಬಾರಿಗಿಡದ, ದೇವು ಗೊಟಗುಣಕಿ, ಸಾಯಬಣ್ಣ ಗುಂಡಕನಾಳ, ಬಸವರಾಜ ಬೀಸನಾಳ, ತಿಮ್ಮಣ್ಣ ಚಮಲಾಪೂರ, ರಾಘು ಪಡಸಾಲಿ, ಮುತ್ತು ಕರಡಿ, ನಾನೇಶ್ವರ ಹಿಂಗಮೋರೆ, ಜೈಭೀಮ ಮುತ್ತಗಿ, ಪರಶುರಾಮ ಬೋಳವಾಡ, ಶ್ರೀಶೈಲ ಹೊಸಮನಿ, ಆಕಾಶ ಬಸರಿಕಟ್ಟಿ, ನೀಲಕಂಠ ದೊಡಮನಿ, ರಾಘು ಚಮಲಾಪೂರ, ದಾಮು ದೊಡಮನಿ, ಜುಮ್ಮಣ್ಣ ದಂಡಿನ, ಕಾಶಿನಾಥ ಮಡಿಕೇಶ್ವರ, ಚಂದ್ರು ತುಂಬಗಿ, ಶರಣು ರಕ್ಕಸಗಿ, ಭೀಮರಾವ ರತ್ನಾಕರ, ಭೀಮು ಬೊಮ್ಮನಹಳ್ಳಿ, ಶಿವಕುಮಾರ ದೇಶಮಾನೆ, ಬಸವರಾಜ ಗುಂಡಕನಾಳ, ರಾಜು ಗೊಟಗುಣಕಿ, ಕಾಶಿನಾಥ ಕಾರಗನೂರ, ಮೊದಲಾದವರು ವಹಿಸಿದ್ದರು.