ಮದ್ಯ ತ್ಯಜಿಸಿ ಸುಖಕರ ಜೀವನ ನಡೆಸಿ

| Published : Jun 09 2024, 01:31 AM IST

ಸಾರಾಂಶ

ಮದ್ಯ ವ್ಯಸನಿಗಳು ತಮ್ಮ ಮನಸನ್ನು ನಿಯಂತ್ರಿಸಿಕೊಂಡು ಮದ್ಯ ತ್ಯಜಿಸಿ ತಮ್ಮ ಕುಟುಂಬದೊಂದಿಗೆ ಸುಖಕರ ಜೀವನ ನಡೆಸಿ, ಸಮಾಜದಲ್ಲಿ ಒಳ್ಳೆ ವ್ಯಕ್ತಿಯಾಗಿ ಬಾಳಬೇಕು ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ, ಯುವ ನಾಯಕ ಸದಾಶಿವ ದೇಶಿಂಗೆ ಹೇಳಿದರು.

ಕನ್ನಡಪ್ರಭ ವಾರ್ತೆ ರಾಯಬಾಗಮದ್ಯ ವ್ಯಸನಿಗಳು ತಮ್ಮ ಮನಸನ್ನು ನಿಯಂತ್ರಿಸಿಕೊಂಡು ಮದ್ಯ ತ್ಯಜಿಸಿ ತಮ್ಮ ಕುಟುಂಬದೊಂದಿಗೆ ಸುಖಕರ ಜೀವನ ನಡೆಸಿ, ಸಮಾಜದಲ್ಲಿ ಒಳ್ಳೆ ವ್ಯಕ್ತಿಯಾಗಿ ಬಾಳಬೇಕು ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ, ಯುವ ನಾಯಕ ಸದಾಶಿವ ದೇಶಿಂಗೆ ಹೇಳಿದರು. ತಾಲೂಕಿನ ಭಿರಡಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಗ್ರಾಮ ಪಂಚಾಯತಿ ಭಿರಡಿ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ 1797ನೇ ಮದ್ಯವರ್ಜನ ಶಿಬಿರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆಯವರು ರಾಜ್ಯಾದ್ಯಾಂತ ಮದ್ಯವರ್ಜನ ಶಿಬಿರದ ಮೂಲಕ ಮದ್ಯವ್ಯಸನಿಗಳಿಗೆ ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಪ್ರೇರಣೆ ನೀಡುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಚಿಕ್ಕೋಡಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಸಂಜಯ ನಾಡಗೌಡರ ಮಾತನಾಡಿ, ಧರ್ಮಸ್ಥಳ ಸಂಘವು ಸಮಾಜದ ಕಟ್ಟಕಡೆಯ ಮಹಿಳೆಯರನ್ನು ಆರ್ಥಿಕವಾಗಿ ಸದೃಢರಾಗಲು ಹಾಗೂ ಅವರ ಕುಟುಂಬ ನೆಮ್ಮದಿಯಿಂದ ಜೀವನ ನಡೆಸಲು ಆರ್ಥಿಕ ಶಕ್ತಿಯಾಗಿ ನಿಂತಿದೆ. ಸಮಾಜ ದುಶ್ಚಟಗಳ ವ್ಯಕ್ತಿಗಳಿಂದ ಮುಕ್ತರಾಗಿಸಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಕೋರಿದರು.ಬಾವನಸೌಂದತ್ತಿ ಓಂಕಾರ ಆಶ್ರಮದ ಶಿವಶಂಕರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಜಿಲ್ಲಾ ನಿರ್ದೇಶಕ ವಿಠಲ ಸಾಲಿಯಾನ, ಡಾ.ಬಾಹುಬಲಿ ಕಾಸರ, ಮಲ್ಲಪ್ಪ ನಿಶಾನದಾರ, ಅಣ್ಣಾಸಾಬ ನಿಶಾನದಾರ, ವಸಂತ ಹೊಸಮನಿ, ವಿದ್ಯಾ ಪೂಜಾರಿ, ಅಜೀತ ಗಸ್ತೆ, ಭಾಸ್ಕರ್ ಎನ್, ಗಿರೀಶಗೌಡ ಪಾಟೀಲ ಸೇರಿ ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯರು, ಮದ್ಯವ್ಯಸನಿಗಳು ಇದ್ದರು. ಶ್ರೀ.ಕ್ಷೇ.ಧ.ಗ್ರಾ.ತಾಲೂಕು ಯೋಜನಾಧಿಕಾರಿ ಸಚಿನಕುಮಾರ ಬಿ.ಸ್ವಾಗತಿಸಿದರು, ವೆಂಕಟೇಶಗೌಡ ನಿರೂಪಿಸಿದರು.