ಭಾರತ ದೇಶವು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಒಂದಾಗಿದೆ. ಇನ್ನಷ್ಟು ಸದೃಢವಾದ ದೇಶವನ್ನು ಕಟ್ಟಲು ಇಂದಿನ ಯುವಜನತೆ ಮಾದಕ ವಸ್ತುಗಳಿಗೆ ಬಲಿಯಾಗದೇ ಉತ್ತಮ ಆರೋಗ್ಯವನ್ನು ಹೊಂದಿ ಸಾಧನೆಗಳಲ್ಲಿ ತೊಡಗಬೇಕಿದೆ ಎಂದು ಸ್ಥಳೀಯ ಜೆ.ಎಂ.ಎಫ್.ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ ಸೌಭಾಗ್ಯ ಭೂಷೇರ್ ಹೇಳಿದ್ದಾರೆ.
- ಮ್ಯಾರಥಾನ್ ಓಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನ್ಯಾಯಾಧೀಶೆ ಸೌಭಾಗ್ಯ ಭೂಷೇರ್
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ಭಾರತ ದೇಶವು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಒಂದಾಗಿದೆ. ಇನ್ನಷ್ಟು ಸದೃಢವಾದ ದೇಶವನ್ನು ಕಟ್ಟಲು ಇಂದಿನ ಯುವಜನತೆ ಮಾದಕ ವಸ್ತುಗಳಿಗೆ ಬಲಿಯಾಗದೇ ಉತ್ತಮ ಆರೋಗ್ಯವನ್ನು ಹೊಂದಿ ಸಾಧನೆಗಳಲ್ಲಿ ತೊಡಗಬೇಕಿದೆ ಎಂದು ಸ್ಥಳೀಯ ಜೆ.ಎಂ.ಎಫ್.ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ ಸೌಭಾಗ್ಯ ಭೂಷೇರ್ ಹೇಳಿದರು.ಶನಿವಾರ ಇಲ್ಲಿನ ನ್ಯಾಯಾಲಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ಆಡಳಿತ, ವಕೀಲರ ಸಂಘ, ಪೊಲೀಸ್ ಇಲಾಖೆ, ಶಾಲಾ ಶಿಕ್ಷಣ, ಸಾಕ್ಷರತೆ ಇಲಾಖೆ, ಸಿಡಿಪಿಒ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಮಾದಕ ವ್ಯಸನಮುಕ್ತ ಭಾರತದತ್ತ ದಿಟ್ಟ ಹೆಜ್ಜೆ ಮಕ್ಕಳ ಸುರಕ್ಷತೆ ಮತ್ತು ಭದ್ರತೆಗಾಗಿ ಜಾಗೃತಿ ಅಭಿಯಾನ ಮತ್ತು ಮ್ಯಾರಥಾನ್ ಓಟ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ಉತ್ತಮ ಆರೋಗ್ಯ, ಸದೃಢ ದೇಶದ ಅಗತ್ಯದ ವಿಷಯಗಳನ್ನು ನಾಗರೀಕರಿಗೆ ತಿಳಿಯಪಡಿಸುವ ಉದ್ದೇಶದಿಂದ ನವೆಂಬರ್ 14ರಿಂದ 27ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಸಾರ್ವಜನಿಕರು ಭಾಗವಹಿಸಬೇಕು ಎಂದು ಹೇಳಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ಪ ಮಾತನಾಡಿ, ಇಂದಿನ ಯುವಜನತೆ ಮಾದಕ ವಸ್ತುಗಳ ಸೇವನೆಯಿಂದ ತಮ್ಮ ಆರೋಗ್ಯ ಕಾಪಾಡಿಕೊಳ್ಳದೇ ತಮ್ಮ ಜೀವನದ ಅವಧಿಗಳಲ್ಲಿ ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆರೋಗ್ಯಯುತ ಸಮಾಜ ನಮ್ಮದಾಗಬೇಕಾದರೆ ಕೆಟ್ಟ ಹವ್ಯಾಸಗಳಿಂದ ದೂರವಿರಬೇಕು. ಯುವಜನತೆ ಸದೃಡವಾಗಿದ್ದರೆ ಶಕ್ತಿಯುತ ದೇಶ ನಮ್ಮದಾಗುವುದು ಎಂದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಾಲೂಕುಮಟ್ಟದ ಅಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮ್ಯಾರಥಾನ್ ಓಟದ ಮೂಲಕ ಮಕ್ಕಳ ಸುರಕ್ಷತೆ ಮತ್ತು ಮಾದಕ ವ್ಯಸನ ಮುಕ್ತದ ಬಗ್ಗೆ ಜಾಗೃತಿ ಮೂಡಿಸಿದರು.ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಚ್.ಮೋಹನ್, ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ.ಪಿ.ಸಿದ್ದಪ್ಪಾಜಿ, ಕೆಂಚನಗೌಡ ಪಾಟೀಲ್, ಸರ್ಕಾರಿ ಅಭಿಯೋಜಕಿ ಸರಿತಾ, ತಾಪಂ ಇಒ ಪ್ರಕಾಶ್, ಡಾ.ರುದ್ರೇಶ್, ವಕೀಲರ ಸಂಘದ ಉಪಾಧ್ಯಕ್ಷ ತಿಪ್ಪೇಶ್, ಅಂಗನವಾಡಿ ಮೇಲ್ವಿಚಾರಕಿ ಪ್ರೇಮಾ, ಹಿರಿಯ ಆರೋಗ್ಯ ನಿರೀಕ್ಷಕ ಟಿ.ಲೋಕೇಶ್, ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಶಾಲಾ ಮಕ್ಕಳು ಭಾಗವಹಿಸಿದ್ದರು.
- - --14ಕೆಸಿಎನ್ಜಿ1:
ಜಾಗೃತಿ ಜಾಥಾಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶೆ ಸೌಭಾಗ್ಯ ಭೂಷೇರ್ ಚಾಲನೆ ನೀಡಿದರು.