ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸದೃಢವಾಗಿದೆ. ವಿರೋಧ ಪಕ್ಷದವರಿಗೆ ನಾವೇಕೆ ಆಫರ್ ಕೊಡಬೇಕು. ಇದೆಲ್ಲ ಸುದ್ಧ ಸುಳ್ಳು ಎಂದು ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಾರೆ. ಈ ಮೂಲಕ ಕೃಷ್ಣಪ್ಪ ಅವರಿಗೆ ಸಿಎಂ ₹ 500 ಕೋಟಿ ಆಫರ್ ನೀಡಿದ್ದಾರೆ.

ಧಾರವಾಡ:ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸದೃಢವಾಗಿದೆ. ವಿರೋಧ ಪಕ್ಷದವರಿಗೆ ನಾವೇಕೆ ಆಫರ್ ಕೊಡಬೇಕು. ಇದೆಲ್ಲ ಸುದ್ಧ ಸುಳ್ಳು ಎಂದು ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಾರೆ. ಈ ಮೂಲಕ ಕೃಷ್ಣಪ್ಪ ಅವರಿಗೆ ಸಿಎಂ ₹ 500 ಕೋಟಿ ಆಫರ್ ನೀಡಿದ್ದಾರೆ ಎಂಬ ವಿಚಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಯಾವುದೇ ರೀತಿಯಲ್ಲಿ ಅಲುಗಾಡುವ ಸ್ಥಿತಿಯಲ್ಲಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಎಲ್ಲ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಮುಜುಗರ ತರಲು ವಿರೋಧ ಪಕ್ಷಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಕೇಂದ್ರ ಸಚಿವರು ಸಣ್ಣ ಮಕ್ಕಳ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ವಿರೋಧ ಪಕ್ಷದವರಿಗೆ ನೂರಾರು ಕೋಟಿ ರೂಪಾಯಿ ಆಫರ್ ಯಾವುದಕ್ಕೆ ಕೊಡಬೇಕು? ಆಫರ್ ಕೊಡುವುದಕ್ಕೆ ಇದೇನು ಆಪರೇಷನ್ ಕಮಲನಾ? ರಾಜಕಾರಣದಲ್ಲಿ ನಾವು ಬಿಜೆಪಿಯಿಂದ ಪಾಠ ಕಲಿಯಬೇಕಿಲ್ಲ ಎಂದು ಕುಟುಕಿದರು.ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಾಧಿಕಾರಿ, ಜನರಿಗೆ ಸುಳ್ಳು ಭರವಸೆ ನೀಡಿದವರು, ಮನ್ ಕಿ ಬಾತ್‌ನಲ್ಲೂ ಸುಳ್ಳು ಹೇಳುತ್ತಾರೆ. ದೇಶದ ಜನರಿಗೆ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂದು ಅವರು, ರಾಹುಲ್ ಗಾಂಧಿ ಅವರ ಪೋನ್ ಟ್ಯಾಪಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದರು. ಈ ಬಗ್ಗೆ ಮೋದಿ ಅವರು ಸಾರ್ವಜನಿಕವಾಗಿ ಬಂದು ಚರ್ಚೆ ಮಾಡಿದ್ದಾರಾ? ಎಂದು ಪ್ರಶ್ನಿಸಿದರು.ಮನ್ ಕೀ ಬಾತ್ ಯಾರಿಗೆ ಅರ್ಥ ಆಗುತ್ತಿದೆ? ಮೋದಿ ಅವರಿಗೆ ಇಷ್ಟ ಬಂದಿದ್ದನ್ನು ನಾವು ಕೇಳಬೇಕಾ? ನನ್ನ ಅನುಮಾನಕ್ಕೆ ಯಾರು ಉತ್ತರ ಕೊಡ್ತಾರೆ? ಇವರನ್ನು ನಮ್ಮ ಪ್ರಧಾನಿ ಎಂದು ನಾವೆಲ್ಲರೂ ಹೆಮ್ಮೆ ಪಡುತ್ತೇವೆ. ಆದರೆ, ಅದರಂತೆ ಅವರಿಲ್ಲ ಎಂದಿದ್ದಾರೆ. ಹೀಗಾಗಿ ಮೋದಿ ಅವರದ್ದು ಡಿಕ್ಟೇಟರ್‌ಶಿಪ್ ಅಂತ ನಾವು ಹೇಳಬೇಕಲ್ಲವೇ? ಅವರು ಪ್ರಜಾಪ್ರಭುತ್ವ ವ್ಯವಸ್ಥೆ ಧಿಕ್ಕರಿಸಿ ನಿಂತಿದ್ದಾರೆ. ಅಂಥವರಿಗೆ ಏನು ಹೇಳಬೇಕು? ಎಂದು ಛೇಡಿಸಿದರು.ಕಾಂಗ್ರೆಸ್ ಮಾಡಿದ ಸಾಧನೆಗಳ ಮೇಲೆಯೇ ಸವಾರಿ ಮಾಡುತ್ತಿರುವ ಬಿಜೆಪಿ ಕಾಂಗ್ರೆಸ್ ಸಂಪಾದನೆ ಮೇಲೆ ಸರ್ಕಾರ ನಡೆಸುತ್ತಿದೆ. ಎಸ್‌ಐಆರ್ ಬಗ್ಗೆ ರಾಹುಲ್ ಗಾಂಧಿ ಮೊದಲನೇ ದಿನ ಮಾತಾಡಿದಾಗ ಎಲ್ಲರೂ ಅಪಹಾಸ್ಯ ಮಾಡಿದ್ದರು. ಈಗ ಉತ್ತರ ಪ್ರದೇಶದಲ್ಲಿರುವ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳೇ ಈ ಬಗ್ಗೆ ಹೇಳಿದ್ದಾರೆ. ಇದಕ್ಕೆ ಬಿಜೆಪಿ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.ಸುವರ್ಣಸೌಧ ವಿದ್ಯುತ್‌ ಬಿಲ್ ಬಾಕಿ; ಸಿಡಿಮಿಡಿ

ಬೆಳಗಾವಿ ಸುವರ್ಣಸೌಧದ ಕರೆಂಟ್ ಬಿಲ್ ಬಾಕಿ ಇದೆಯಲ್ಲ ಎಂಬ ಪ್ರಶ್ನೆಗೆ ಸಿಡಿಮಿಡಿಗೊಂಡ ಸಚಿವ ನರೇಂದ್ರಸ್ವಾಮಿ, ಈ ವಿಚಾರ ನಿಮಗೇಕೆ? ನಮ್ಮ ಹತ್ತಿರ ದುಡ್ಡಿಲ್ಲವೆಂದು ನಾವು ಯಾರನ್ನಾದರೂ ಕೇಳಿದ್ದೇವಾ? ಎಂದು ಮರುಪ್ರಶ್ನೆ ಹಾಕಿದರು. ರಾಜ್ಯಕ್ಕೆ ಕೇಂದ್ರ ಎಷ್ಟು ಜಿಎಸ್‌ಟಿ ಅನುದಾನ ಕೊಟ್ಟಿದೆ ಕೇಳಿ. ನಮಗೆ ಕರೆಂಟ್ ಬಿಲ್ ಕಟ್ಟುವುದು ಗೊತ್ತಿದೆ ಎಂದರು.

ಯಾವ ಗ್ಯಾರಂಟಿಯನ್ನು ನಾವು ನಿಲ್ಲಿಸಿಲ್ಲ, ನಿಲ್ಲಿಸುವುದೂ ಇಲ್ಲ. ಪ್ರತಿಪಕ್ಷದವರು ಹಾಲಿನ ದರದ ಬಗ್ಗೆ ಮಾತನಾಡುತ್ತಾರೆ. ಆದರೆ, ಹಸು ಸಾಕುವುದು ರೈತರಿಗೆ ಎಷ್ಟು ಕಷ್ಟ ಅಂತ ಯಾರೂ ಕೇಳುತ್ತಿಲ್ಲ. ಕೇಂದ್ರ ಸರಕಾರ ನಮ್ಮಿಂದ ಹೊರತಾಗಿದೆಯೇ? ನಮ್ಮ ಬವಣೆ ಅವರಿಗೆ ಬೇಕಾಗಿಲ್ಲವೇ? ಪೆಟ್ರೋಲ್ ದರವನ್ನು ಇಲ್ಲಿಯವರೆಗೆ ಎಷ್ಟು ಹೆಚ್ಚಳ ಮಾಡಲಾಗಿದೆ? ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ದರ ಇಳಿದಾಗ ಇಲ್ಲಿ ಏಕೆ ಇಳಿಸಿಲ್ಲ? ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿದರು.