ವಿಶೇಷಚೇತನ ಮಕ್ಕಳ ಮೇಲೆ ಅನುಕಂಪ ತೋರಿಸುವದಕ್ಕಿಂತ ಅವಕಾಶ ನೀಡುವ ಮೂಲಕ ಸಾಧನೆಗೆ ಪ್ರೇರೇಪಿಸಬೇಕು

ಕುಷ್ಟಗಿ: ಪಟ್ಟಣದ ವಿದ್ಯಾನಗರದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಸಾಲಿನ ವಿಶೇಷಚೇತನರ ಮಕ್ಕಳಿಗಾಗಿ ಉಚಿತ ವೈದ್ಯಕೀಯ ತಪಾಸಣಾ ಹಾಗೂ ಮೌಲ್ಯಾಂಕನ ಶಿಬಿರ ನಡೆಯಿತು.

ಬಿಇಒ ಉಮಾದೇವಿ ಬಸಾಪೂರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿಶೇಷಚೇತನ ಮಕ್ಕಳ ಮೇಲೆ ಅನುಕಂಪ ತೋರಿಸುವದಕ್ಕಿಂತ ಅವಕಾಶ ನೀಡುವ ಮೂಲಕ ಸಾಧನೆಗೆ ಪ್ರೇರೇಪಿಸಬೇಕು ಎಂದು ತಿಳಿಸಿದರು.

ಕ್ಷೇತ್ರ ಸಮನ್ವಯಾಧಿಕಾರಿ ಜಗದೀಶಪ್ಪ ಮೆಣೆದಾಳ ಮಾತನಾಡಿದರು. ಶಾಲಾ ಮುಖ್ಯಶಿಕ್ಷಕಿ ಮರಿಯವ್ವ ಹಿರೇಮನಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಿಂಗಪ್ಪ ಗುನ್ನಾಳ, ಸಿದ್ರಾಮಪ್ಪ ಅಮರಾವತಿ ಮಾತನಾಡಿದರು.

ಈ ಸಂದರ್ಭದಲ್ಲಿ ದೈಹಿಕ ಪರಿವೀಕ್ಷಕ ನಾಗಪ್ಪ ಬಿಳಿಯಪ್ಪನವರ, ಅಲ್ತಾಫ್ ಹುಸೇನ್, ಮುಕ್ಕಣ್ಣ ಹುಬ್ಬಳ್ಳಿ, ಬಸೆಟ್ಟೆಪ್ಪ ಶಿಳ್ಳಿನ, ಚಂದ್ರಶೇಖರ, ಶರಣಪ್ಪ ಹವಾಲ್ದಾರ, ಶರಣಪ್ಪ ಹೆಬ್ಬುಲಿ, ಎಂ. ಲೀಲಾವತಿ, ಶ್ರೀನಿವಾಸ ದೇಸಾಯಿ, ಜೀವನಸಾಬ್ ಬಿನ್ನಾಳ ಇತರರು ಇದ್ದರು.

ವೈದ್ಯರಾದ ಡಾ.ಚಿರಂಜೀವಿ, ಡಾ. ಗೌರವ ರಾಣಾ, ಡಾ. ಸುಂದರಂ ತಿವಾರಿ, ಡಾ. ಗುರುದೇವಿ, ಡಾ.ಸುಮಾ ದಂಡಿನ, ಡಾ.ವಿಜಯಲಕ್ಷ್ಮಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದರು.