ಸಾರಾಂಶ
ಕನಕಪುರ: ಸರ್ಕಾರಿ ನೌಕರರು ಒತ್ತಡದಲ್ಲೇ ಕೆಲಸ ಮಾಡುತ್ತಿದ್ದು ಅವರ ಸಮಸ್ಯೆಗಳಿಗೆ ಧ್ವನಿಯಾಗಿ ನೌಕರರ ಹಿತ ಕಾಯುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಎಡಿಎಲ್‌ಆರ್ ನಂದೀಶ್ ತಿಳಿಸಿದರು.
ಕನಕಪುರ: ಸರ್ಕಾರಿ ನೌಕರರು ಒತ್ತಡದಲ್ಲೇ ಕೆಲಸ ಮಾಡುತ್ತಿದ್ದು ಅವರ ಸಮಸ್ಯೆಗಳಿಗೆ ಧ್ವನಿಯಾಗಿ ನೌಕರರ ಹಿತ ಕಾಯುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಎಡಿಎಲ್‌ಆರ್ ನಂದೀಶ್ ತಿಳಿಸಿದರು. ನಗರದ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ತಾಲೂಕು ಘಟಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಸರ್ವೆ ಇಲಾಖೆಯಲ್ಲಿ ಸಾಕಷ್ಟು ಕೆಲಸದ ಒತ್ತಡ ಇದೆ. ಹಾಗೆಯೇ ಎಲ್ಲಾ ಇಲಾಖೆಗಳಲ್ಲಿ ನೌಕರರು ಒತ್ತಡದಲ್ಲೇ ಕೆಲಸ ಮಾಡುತ್ತಿದ್ದಾರೆ. ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ತಾಲೂಕಿನಲ್ಲಿ ಸರ್ಕಾರಿ ನೌಕರರ ಸಂಘದ ಭವನ ನಿರ್ಮಾಣಕ್ಕೆ ಪ್ರಯತ್ನ ಮಾಡುತ್ತೇನೆ. ಜೊತೆಗೆ ಸರ್ಕಾರಿ ನೌಕರರ ಸಂಘದಿಂದ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಪರಿಸರ ಸಂರಕ್ಷಣೆ ಹಾಗೂ ಗಿಡ ನೆಡುವ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.ಮಾಜಿ ಅಧ್ಯಕ್ಷ ಶಿವಲಿಂಗೇಗೌಡ ಮಾತನಾಡಿ, ನೂತನ ಅಧ್ಯಕ್ಷರೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಮತ್ತು ನೌಕರರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡಲಿ, ಅವರಿಗೆ ನಮ್ಮ ಸಂಪೂರ್ಣ ಸಹಕಾರ ಇದೆ ಎಂದರು.
ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ರೇಷ್ಮೆ ಇಲಾಖೆ ನಿವೃತ್ತ ನೌಕರ ಚಿಕ್ಕೆಂಪೇಗೌಡ ನೂತನ ನಿರ್ದೇಶಕರಿಗೆ ಪ್ರತಿಜ್ಞಾ ವಿಧಿ ಭೋಧಿಸಿದರು, ಸಹಾಯಕ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ಗಂಗಾಧರ್ ನೂತನ ನಿರ್ದೇಶಕರಿಗೆ ಪ್ರಮಾಣ ಪತ್ರ ವಿತರಿಸಿದರು.ನೂತನ ನಿರ್ದೇಶಕರು:
ಕೃಷಿ ಇಲಾಖೆ ರಘು.ಟಿ.ಎನ್, ಪಶುಪಾಲನಾ ಇಲಾಖೆ ಡಾ. ಗಿರೀಶ್.ಎಸ್, ಕಂದಾಯ ಇಲಾಖೆ ಚೇತನ್.ವಿ, ಚಂದ್ರೇಗೌಡ, ಲೋಕಪಯೋಗಿ ಇಲಾಖೆ ಎಂ.ಎನ್.ಶಶಿಧರ್, ಪಂಚಾಯತ್ ರಾಜ್ ಇಲಾಖೆ ಎಂ.ಕೆ.ಶೇಖರ್, ಪ್ರಾಥಮಿಕ ಶಿಕ್ಷಣ ಇಲಾಖೆ ಎಚ್.ವಿ.ಚಂದ್ರಶೇಖರ್, ಎಸ್.ರಾಘವೇಂದ್ರ ಸ್ವಾಮಿ, ಶ್ರೀನಾಥ್.ಟಿ, ಪ್ರೌಢ ಶಿಕ್ಷಣ ಇಲಾಖೆ ಎಂ.ಎನ್.ಪ್ರಸನ್ನ ಕುಮಾರ್, ಬಿಇಒ ಕಚೇರಿ ಬಿ.ಪಿ.ಮಧು, ಪದವಿ ಮತ್ತು ಪದವಿಪೂರ್ವ ಕಾಲೇಜು ಕೆ.ತಮ್ಮಣ್ಣ, ಹಿಂದುಳಿದ ವರ್ಗಗಳ ಇಲಾಖೆ ರುಕ್ಮಾಂಗದ.ವಿ, ಅರಣ್ಯ ಇಲಾಖೆ ರಮೇಶ್ ಎಂ.ಯಂಕಂಚಿ, ಆರೋಗ್ಯ ಇಲಾಖೆ ಎಚ್. ಶಿವಕೆಂಪೇಗೌಡ, ಪುಟ್ಟಗೌರಮ್ಮ,ಜಯಣ್ಣ.ಎಂ, ಉದಯ ಕುಮಾರ್, ರೇಷ್ಮೆ ಇಲಾಖೆ ಕುಮಾರ್ ಖಜಾನೆ ಇಲಾಖೆ ಎಸ್.ಗಿರೀಶ್,ಭೂಮಾಪನ ಇಲಾಖೆಯ ನಂದೀಶ್, ನ್ಯಾಯಾಂಗ ಇಲಾಖೆ ವಿಜಯಕುಮಾರ್.ಎಲ್, ಗ್ರಾಮೀಣಾಭಿವೃದ್ಧಿ ಇಲಾಖೆ ಮೋಹನ್ ಬಾಬು, ಶಿವಲಿಂಗೇಗೌಡ, ಸಹಕಾರ ಇಲಾಖೆ ಆಶಾ.ಸಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಂತೋಷ್, ಅಬಕಾರಿ ಇಲಾಖೆ ಶ್ರೀನಿವಾಸ್ ಆಯ್ಕೆಯಾದರು.ಕೆ ಕೆ ಪಿ ಸುದ್ದಿ 02:
ಕನಕಪುರದ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ನಂದೀಶ್ ಅಧಿಕಾರ ಸ್ವೀಕಾರ ಮಾಡಿದರು.