ಸಾರಾಂಶ
ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತುರುವನೂರು ಗ್ರಾಮದ ಪೊಲೀಸ್ ಠಾಣೆಯ ಪಕ್ಕದ ಸುಮಾರು 5 ಎಕರೆ ಜಮೀನಿನಲ್ಲಿ ಬೆಂಗಳೂರಿನ ಶ್ರೀಸಾಯಿಕ್ಯಾಡ್ ಸಂಸ್ಥೆ ರಚಿಸಿದ ಶ್ರೀಆಂಜನೇಯಸ್ವಾಮಿಯ ರೇಖಾಚಿತ್ರ ಗ್ಲೋಬಲ್ ವರ್ಲ್ಡ್ ರೆಕಾರ್ಡ್‌ಗೆ ಸೇರ್ಪಡೆಯಾಗಿದೆ.
ಸಿಎಂಗೆ ಅಬಿನಂದನೆ । ಬೆಂಗಳೂರು ಸಂಸ್ಥೆಯಿಂದ ನಿರ್ಮಾಣ
ಚಳ್ಳಕೆರೆ: ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತುರುವನೂರು ಗ್ರಾಮದ ಪೊಲೀಸ್ ಠಾಣೆಯ ಪಕ್ಕದ ಸುಮಾರು 5 ಎಕರೆ ಜಮೀನಿನಲ್ಲಿ ಬೆಂಗಳೂರಿನ ಶ್ರೀಸಾಯಿಕ್ಯಾಡ್ ಸಂಸ್ಥೆ ರಚಿಸಿದ ಶ್ರೀಆಂಜನೇಯಸ್ವಾಮಿಯ ರೇಖಾಚಿತ್ರ ಗ್ಲೋಬಲ್ ವರ್ಲ್ಡ್ ರೆಕಾರ್ಡ್‌ಗೆ ಸೇರ್ಪಡೆಯಾಗಿದೆ.ಈ ಹಿನ್ನೆಲೆ ಸಾಯಿ ಕ್ಯಾಡ್ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕ ಟಿ.ರಘುಮೂರ್ತಿಯವರನ್ನು ಮುಖ್ಯಮಂತ್ರಿಗಳ ನಿವಾಸದಲ್ಲಿ ಅಭಿನಂದಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶ್ರೀಸಾಯಿಕ್ಯಾಡ್ ಸಂಸ್ಥೆ ತುರುವನೂರಿನ ಐದು ಎಕರೆ ಪ್ರದೇಶದಲ್ಲಿ ಆಂಜನೇಯಸ್ವಾಮಿಯ ರೇಖಾಚಿತ್ರವನ್ನು ಬಿಡಿಸಿ ಗ್ಲೋಬಲ್ ವರ್ಲ್ಡ್ ರೆಕಾರ್ಡ್‌ಗೆ ಸೇರ್ಪಡೆಯಾಗಿದ್ದೀರಿ, ಗ್ರಾಮೀಣ ಭಾಗದಲ್ಲಿ ಇಂತಹ ಸಾಧನೆಗಳನ್ನು ಗುರುತಿಸುವುದು ಅಪರೂಪವಾದ ಕಾಲದಲ್ಲಿ ಸಂಸ್ಥೆ ಮಾಡಿರುವ ಕಾರ್ಯ ಶ್ಲಾಘನೀಯವೆಂದರು.ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ, ನಮ್ಮ ಜಿಲ್ಲೆಯಲ್ಲಿ ಶಾಸಕ ರಘುಮೂರ್ತಿ ಕ್ಷೇತ್ರದಲ್ಲಿ ಇಂತಹ ಮಹಾನ್ ಸಾಧನೆ ಮಾಡಿದ ಸಾಯಿಕ್ಯಾಡ್ ಸಂಸ್ಥೆ ಕಾರ್ಯದಿಂದ ರಾಜ್ಯಕ್ಕೂ ಜಿಲ್ಲೆಗೂ ಕೀರ್ತಿ ತಂದಿದ್ದೀರಿ ಎಂದು ಅಭಿನಂದಿಸಿದರು.
ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ಮಾತನಾಡಿ, ತುರುವನೂರಿನ ರೇಖಾಚಿತ್ರ ಸಾಯಿಕ್ಯಾಡ್ ಸಂಸ್ಥೆಯ ಸಂಸ್ಥಾಪಕ ಮಂಜುನಾಥರೆಡ್ಡಿ, ಪತ್ನಿಪ್ರತಿಮಾರೆಡ್ಡಿ ಹಾಗೂ ತಂಡ ಈ ಕಾರ್ಯವನ್ನು ಅಚ್ಚುಕಟ್ಟಾಗಿ ನೆರವೇರಿಸುವ ಮೂಲಕ ನೂತನ ದಾಖಲೆಯನ್ನು ನಿರೂಪಿಸಿದ್ಧಾರೆ. ನಿಮ್ಮ ಸಾಧನೆ ಗ್ಲೋಬಲ್ ವರ್ಲ್ಡ್ ರೆಕಾರ್ಡ್‌ಗೆ ದಾಖಲಾಗಿರುವುದು ಸಂತಸ ತಂದಿದೆ. ನಿಮ್ಮ ಕಾರ್ಯಕ್ಕೆ ಉತ್ತಮ ಪ್ರತಿಫಲ ದೊರಕಿದೆ. ನಿಮ್ಮ ಕಾರ್ಯದಿಂದ ನಮ್ಮ ಕ್ಷೇತ್ರಕ್ಕೂ ಹಾಗೂ ಜಿಲ್ಲೆಗೂ ಉತ್ತಮ ಗೌರವ ದೊರೆತಿದೆ ಎಂದರು.