ಸಾರಾಂಶ
ಅಜ್ಜಿಯ ಮನೆಗಳು ಕಣ್ಮರೆಯಾಗಿರುವ ಇಂದಿನ ದಿನಗಳಲ್ಲಿ ಬೇಸಿಗೆ ಶಿಬಿರಗಳು ಮಕ್ಕಳ ಕ್ರಿಯಾಶೀಲ ಚಟುವಟಿಗಳನ್ನು ಉತ್ತೇಜಿಸುತ್ತಿವೆ. ಮಕ್ಕಳು ಕಲಿಕಾ ಒತ್ತಡದಿಂದ ಹೊರಬಂದು ಹಾಡು, ನೃತ್ಯ ಮತ್ತಿತರ ಸೃಜನಶೀಲ ಚಟುವಟಿಕೆಗಳು ಮತ್ತು ಆಟೋಟಗಳಲ್ಲಿ ಭಾಗವಹಿಸಿ ತಮ್ಮ ಅಂತಸತ್ವ ಹೆಚ್ಚಿಸಿಕೊಳ್ಳಲು ಇತಂಹ ಶಿಬಿರಗಳು ಸಹಕಾರಿಯಾಗಿವೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಜಾಗತೀಕರಣದಿಂದ ಶಿಕ್ಷಣ ಕ್ಷೇತ್ರದ ಮೇಲೆ ಉಂಟಾಗಿರುವ ಎಲ್ಲಾ ಪರಿಣಾಮಗಳನ್ನು ಪೋಷಕರು ಮತ್ತು ಶಿಕ್ಷಕ ವೃಂದ ಸಮರ್ಥವಾಗಿ ಎದುರಿಸಬೇಕು ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಕರೆ ನೀಡಿದರು.ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಧಾರ್ಮಿಕ ಕೇಂದ್ರವಾಗಿದ್ದ ಆದಿ ಚುಂಚನಗಿರಿ ಶ್ರೀ ಮಠ ಶೈಕ್ಷಣಿಕವಾಗಿ ಕಟ್ಟಿ ಬೆಳೆಸಿದ ಕೀರ್ತಿ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳಿಗೆ ಸಲ್ಲುತ್ತದೆ ಎಂದರು.
ಶ್ರೀಮಠದ ಇಂದಿನ ಮಹಾಸ್ವಾಮೀಜಿಗಳಾದ ಡಾ.ನಿರ್ಮಲಾನಂದನಾಥರು ಮತ್ತು ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡರ ಸೇವಾ ಪರಿಕಲ್ಪನೆ ಇದಕ್ಕೆ ಪ್ರಮುಖ ಕಾರಣ ಎಂದರು.ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಅಜ್ಜಿಯ ಮನೆಗಳು ಕಣ್ಮರೆಯಾಗಿರುವ ಇಂದಿನ ದಿನಗಳಲ್ಲಿ ಬೇಸಿಗೆ ಶಿಬಿರಗಳು ಮಕ್ಕಳ ಕ್ರಿಯಾಶೀಲ ಚಟುವಟಿಗಳನ್ನು ಉತ್ತೇಜಿಸುತ್ತಿವೆ. ಮಕ್ಕಳು ಕಲಿಕಾ ಒತ್ತಡದಿಂದ ಹೊರಬಂದು ಹಾಡು, ನೃತ್ಯ ಮತ್ತಿತರ ಸೃಜನಶೀಲ ಚಟುವಟಿಕೆಗಳು ಮತ್ತು ಆಟೋಟಗಳಲ್ಲಿ ಭಾಗವಹಿಸಿ ತಮ್ಮ ಅಂತಸತ್ವ ಹೆಚ್ಚಿಸಿಕೊಳ್ಳಲು ಇತಂಹ ಶಿಬಿರಗಳು ಸಹಕಾರಿಯಾಗಿವೆ ಎಂದರು.
ಈ ವೇಳೆ ಬಿಜಿಎಸ್ ಶಿಕ್ಷಣ ಸಂಸ್ಥೆ ನಿರ್ದೇಶಕ ವಕೀಲ ಎಸ್.ಸಿ.ವಿಜಯಕುಮಾರ್, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಬಳ್ಳೇಕೆರೆ ಮಂಜುನಾಥ್ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು.ಕೆರಗೋಡು ಡೇರಿ ಅಧ್ಯಕ್ಷರಾಗಿ ತಾಯಮ್ಮ ಆಯ್ಕೆ
ಮಂಡ್ಯ: ತಾಲೂಕು ಕೆರಗೋಡು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ತಾಯಮ್ಮ ಕೆ.ಎಲ್. ಪಂಚೇಗೌಡರ ಮತ್ತು ಉಪಾಧ್ಯಕ್ಷರಾಗಿ ಟಿ.ಸಿ.ಸ್ವಾಮಿ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಅಧಿಕಾರಿ ತ್ಯಾಗರಾಜ, ಕಾರ್ಯನಿರ್ವಣಾಧಿಕಾರಿ ಪ್ರಸನ್ನ ಇದ್ದರು. ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆಯಾಗಲು ಸಹಕರಿಸಿದ ಸಂಘದ ನಿರ್ದೇಶಕರು ಮತ್ತು ಗ್ರಾಮದ ಮುಖಂಡರಾದ ಪ್ರಶಾಂತ್, ಶ್ರೀಕಾಂತ್ ಗೌಡ , ಕೆ.ಪಿ.ರಾಮಚಂದ್ರ, ಪಾರ್ಥಸಾರಥಿ, ಕೆ.ಟಿ.ಗಿರೀಶ್, ಹರ್ಷಿತ್ ಗೌಡ, ಆನಂದ್, ಶಿವು ರಾಮಲಿಂಗೇಗೌಡ ಸೇರದಂತೆ ಗ್ರಾಮಸ್ಥರು ಇದ್ದರು.