ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯಲ್ಲಿ ವೈಭವದ ಪ್ರಜಾರಾಜ್ಯೋತ್ಸವ

| Published : Jan 27 2024, 01:17 AM IST

ಸಾರಾಂಶ

ಹುಕ್ಕೇರಿ: ತಾಲೂಕಿನ ಸಂಕೇಶ್ವರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಶುಕ್ರವಾರ 75ನೇ ಪ್ರಜಾರಾಜ್ಯೋತ್ಸವವನ್ನು ಅತ್ಯಂತ ವೈಭಯುತ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಹಿರಿಯ ನಿರ್ದೇಶಕ ಶಿವಪುತ್ರಪ್ಪಾ ಶಿರಕೋಳಿ ಧ್ವಜಾರೋಹಣ ನೆರವೇರಿಸಿದರು. ಕಾರ್ಖಾನೆಯ ನೌಕರರ ಪ್ರತಿಭಾವಂತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಕಾರ್ಖಾನೆಯ ಕೆಲಸ ನಿರ್ವಹಿಸುತ್ತಿರುವಾಗ ಅಪಘಾತ ಸಂಭವಿಸಿ ನಿಧನರಾದ ರಾಜು ವಾಳಕಿ ಅವರ ಪತ್ನಿ ಸುನೀತಾಗೆ ₹ 5 ಲಕ್ಷ ವಿಮೆ ಪರಿಹಾರ ಹಾಗೂ ₹1.23 ಲಕ್ಷ ಗ್ರ್ಯಾಚುಯಿಟಿ ಚೆಕ್ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ತಾಲೂಕಿನ ಸಂಕೇಶ್ವರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಶುಕ್ರವಾರ 75ನೇ ಪ್ರಜಾರಾಜ್ಯೋತ್ಸವವನ್ನು ಅತ್ಯಂತ ವೈಭಯುತ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಹಿರಿಯ ನಿರ್ದೇಶಕ ಶಿವಪುತ್ರಪ್ಪಾ ಶಿರಕೋಳಿ ಧ್ವಜಾರೋಹಣ ನೆರವೇರಿಸಿದರು.

ವಿವಿಧ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಪಡೆದು ಪಾಸಾದ ಕಾರ್ಖಾನೆಯ ನೌಕರರ ಪ್ರತಿಭಾವಂತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಖಾನೆ ಕಾಲನಿಯಲ್ಲಿರುವ ಕನ್ನಡ ಗಂಡು ಮಕ್ಕಳ ಶಾಲೆ ಹಾಗೂ ಅಂಗನವಾಡಿ ಶಾಲಾ ಮಕ್ಕಳಿಂದ ಭಾಷಣ ಹಾಗೂ ವಿವಿಧ ಮನರಂಜನಾ ಕಾರ್ಯಕ್ರಮಗಳು ಜರುಗಿದವು.

ಇದೇ ಸಂದರ್ಭದಲ್ಲಿ ಕಾರ್ಖಾನೆಯ ಕೆಲಸ ನಿರ್ವಹಿಸುತ್ತಿರುವಾಗ ಅಪಘಾತ ಸಂಭವಿಸಿ ನಿಧನರಾದ ರಾಜು ವಾಳಕಿ ಅವರ ಪತ್ನಿ ಸುನೀತಾಗೆ ₹ 5 ಲಕ್ಷ ವಿಮೆ ಪರಿಹಾರ ಹಾಗೂ ₹1.23 ಲಕ್ಷ ಗ್ರ್ಯಾಚುಯಿಟಿ ಚೆಕ್ ವಿತರಿಸಲಾಯಿತು

ಬಳಿಕ ನಿರ್ದೇಶಕ ಅಶೋಕ ಪಟ್ಟಣಶೆಟ್ಟಿ ಮಾತನಾಡಿ, ಕಾರ್ಖಾನೆಯು ಕೇವಲ 91 ದಿನಗಳ ಕಾರ್ಯಾಚರಣೆಯಲ್ಲಿ 7,03,430 ಮೆ.ಟನ್ ಕಬ್ಬು ನುರಿಸಿ 6,01,200 ಕ್ವಿಂಟಲ್ ಸಕ್ಕರೆ ಉತ್ಪಾದಿಸಿ 38 ಲಕ್ಷ ಲೀಟರ ಎಥಿನಾಲ್ ಉತ್ಪಾದಿಸಿ ದಾಖಲೆ ನಿರ್ಮಿಸಿದೆ. ಇದಕ್ಕೆಲ್ಲ ಕಾರ್ಮಿಕ ಬಂಧುಗಳ ಪರಿಶ್ರಮ ಹಾಗೂ ಸದಸ್ಯ ಭಾಂದವರ, ಕಬ್ಬು ಬೆಳೆಗಾರರ, ರೈತರ ಸಹಕಾರವೇ ಕಾರಣವಾಗಿದೆ. ಕಾರ್ಮಿಕರು ಅಪಘಾತದಲ್ಲಿ ನಿಧನರಾದಲ್ಲಿ ಈಗ ₹ 5 ಲಕ್ಷ ಹಾಗೂ ಆಸ್ಪತ್ರೆ ವೆಚ್ಚ ₹1 ಲಕ್ಷ ನೀಡಲಾಗುತ್ತಿತ್ತು. ಅದನ್ನು ಜನೇವರಿ 2024 ರಿಂದ ಅನ್ವಯವಾಗುವಂತೆ ಅಪಘಾತದಲ್ಲಿ ನಿಧನರಾದಲ್ಲಿ ₹ 10 ಲಕ್ಷ ಹಾಗೂ ಆಸ್ಪತ್ರೆ ವೆಚ್ಚ ₹ 4 ಲಕ್ಷವರೆಗೆ ಹೆಚ್ಚಿಸಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದರು.

ನಿರ್ದೇಶಕರಾದ ಪ್ರಭುದೇವ ಪಾಟೀಲ, ಬಸವರಾಜ ಮರಡಿ, ಸುರೇಂದ್ರ ದೊಡ್ಡಲಿಂಗನವರ, ಬಸವರಾಜ ಕಲ್ಲಟ್ಟಿ, ವ್ಯವಸ್ಥಾಪಕ ನಿರ್ದೇಶಕ ಸಾತಪ್ಪ ಕರ್ಕಿನಾಯಿಕ, ಕಾರ್ಯಾಲಯ ಅಧೀಕ್ಷಕ ಸುಭಾಷ ನಾಶಿಪುಡಿ, ಡಿಸ್ಟಿಲರಿ ಚೀಪ್ ಕೆಮಿಸ್ಟ ಎಂ.ಆರ್.ಪಾಟೀಲ, ಕೋಜನ್ ಚೀಪ್ ಇಂಜನೀಯರ ವಿ.ಎಸ್.ಕತ್ತಿ, ಲೇಖಾಧಿಕಾರಿ ಕೆ.ಆರ್.ಬೆಟಗೇರಿ, ಪರಿಸರ ವಿಜ್ಞಾನಿ ಎ.ಆರ್.ಚಾಟೆ, ಕೇನ್ ಅಕೌಂಟಂಟ ಎಂ.ವೈ.ಪಾಟೀಲ, ಖರೀದಿ ಅಧಿಕಾರಿ ಆನಂದ ಪೂಜೇರಿ, ಕೇನಯಾರ್ಡ ಸುಪರ್ ವೈಜರ ಬಿ.ಎಸ್.ವರ್ಜಿ, ಕೇನ ಮ್ಯಾನೇಜರ ಪ್ರಕಾಶ ಮುಗಳಿ, ಎಚ್‌ಎನ್‌ಟಿ ಮ್ಯಾನೇಜರ ಎಂ.ಕೆ.ಕಳಸನ್ನವರ, ಅಸಿಸ್ಟಂಟ ಅಕೌಂಟಂಟ್ ಸಿ.ಬಿ. ಮರೇದಿ, ಸಂರಕ್ಷಣ ಅಧಿಕಾರಿ ಬಾಬಾಸಾಹೇಬ ನಾಗನೂರಿ ಮತ್ತಿತರರು ಇದ್ದರು. ಲಕ್ಷ್ಮಣ ಹಂಚಿನಮನಿ ನಿರೂಪಿಸಿದರು.