ಸಾರಾಂಶ
ಎಸ್. ವೈಭವಿ ಅವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಹೊನ್ನಾವರ: ತಾಲೂಕಿನ ಉಪ್ಪೊಣಿಯ ಎಸ್. ವೈಭವಿ ಎಂಬ ವಿದ್ಯಾರ್ಥಿನಿ ನೇತೃತ್ವದ ತಂಡವು ರೂಬಿಕ್ಸ್ ಕ್ಯೂಬ್‌ನಲ್ಲಿ ಎರಡು ಗಿನ್ನೆಸ್ ದಾಖಲೆ ಮಾಡಿದೆ.
ರೂಬಿಕ್ಸ್‌ನ ಒಂದು ಬದಿಯಲ್ಲಿ ಭಾರತದ ಹಾಕಿ ಮೇಜರ್ ಧ್ಯಾನ್‌ಚಂದ್, ಕ್ಯೂಬ್ ಹಿಂಬದಿಯಲ್ಲಿ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಚಿತ್ರ ರಚಿಸಿದ್ದು, ಇದು ಗಿನ್ನೆಸ್ ದಾಖಲೆ ಪುಸ್ತಕ ಸೇರಿದ್ದು, ಈ ಸಾಧಕರಿಗೆ ಇತ್ತೀಚೆಗೆ ಪ್ರಮಾಣಪತ್ರ ವಿತರಿಸಲಾಯಿತು.ಈ ತಂಡವು ಬ್ರಿಟನ್ ಹಾಗೂ ಕಜಕಿಸ್ತಾನದವರ ಈ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. ಕಜಕಿಸ್ತಾನದ ಜೆಂಗಿಸ್ ಇಟ್ಟಾನೋವ್ 5100 ಕ್ಯೂಬ್‌ಗಳೊಂದಿಗೆ 15878 ಚದರ ಮೀಟರ್ ಅಳತೆಯ ರೂಬಿಕ್ಸ್ ಕ್ಯೂಬ್ ಮೊಸಾಯಿಕ್ ಮೂಲಕ ಗಿನ್ನೆಸ್ ದಾಖಲೆ ಮಾಡಿದ್ದರು. ಎಸ್. ವೈಭವಿ ನೇತೃತ್ವದ 50 ವಿದ್ಯಾರ್ಥಿಗಳು 6000 ಕ್ಯೂಬ್ ಬಳಸಿ ಚಿತ್ರ ರಚನೆ ಮಾಡಿ ಕಜಕಿಸ್ತಾನದ ದಾಖಲೆ ಮುರಿದಿದ್ದಾರೆ. ಅದೇ ರೀತಿ ಬ್ರಿಟನ್‌ನಲ್ಲಿ ರೂಬಿಕ್ಸ್ ಬ್ರಾಂಡ್‌ನಲ್ಲಿ 308 ಜನ ನಿರ್ಮಿಸಿದ್ದ ದಾಖಲೆಯನ್ನು ಎಸ್. ವೈಭವಿ ನೇತೃತ್ವದ ವಿದ್ಯಾರ್ಥಿಗಳು ಮುರಿದಿದ್ದಾರೆ.
ಎಸ್. ವೈಭವಿ ಅವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಎಸ್. ವೈಭವಿ ಕಾರವಾರ ಖದ್ರಾ ಪೊಲೀಸ್ ಠಾಣೆಯ ಹವಾಲ್ದಾರ ಸತೀಶ್ ನಾಯ್ಕ್ ಮತ್ತು ತಾಪಂ ಮಾಜಿ ಸದಸ್ಯೆ, ಹೊನ್ನಾವರ ಸೌಹಾರ್ದ ಬ್ಯಾಂಕ್ ಮ್ಯಾನೇಜರ್ ಗಾಯತ್ರಿ ಸತೀಶ್ ನಾಯ್ಕ ದಂಪತಿ ಪುತ್ರಿ.