ಘಟಸ್ಥಾಪನೆ ಮಾಡಿ ಗಂಗಾಪೂಜೆಯೊಂದಿಗೆ ಜಾತ್ರೆ ವಿಧ್ಯುಕ್ತವಾಗಿ ಆರಂಭಗೊಂಡಿತು. ದೇವಿಗೆ ದೀಪಾಲಂಕಾರ ದೃಷ್ಟಿ ತೆಗೆಯುವುದು.

ಹರಪನಹಳ್ಳಿ: ತಾಲೂಕಿನ ಚಿಗಟೇರಿ ಗ್ರಾಮದಲ್ಲಿ 9 ವರ್ಷಗಳ ನಂತರ ಊರಮ್ಮದೇವಿ ಜಾತ್ರೋತ್ಸವ ಮೂರು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಘಟಸ್ಥಾಪನೆ ಮಾಡಿ ಗಂಗಾಪೂಜೆಯೊಂದಿಗೆ ಜಾತ್ರೆ ವಿಧ್ಯುಕ್ತವಾಗಿ ಆರಂಭಗೊಂಡಿತು. ದೇವಿಗೆ ದೀಪಾಲಂಕಾರ ದೃಷ್ಟಿ ತೆಗೆಯುವುದು. ಬಣಕಾರ ಮನೆಯಿಂದ ತೊಟ್ಟಿಲು ತರುವುದು. ಗಣಪತಿ ಪೂಜೆ, ಕಂಕಣ ಕಟ್ಟುವುದು, ನಂತರ ದೇವಿಯನ್ನು ಚೌಕಿ ಮನೆಗೆ ಕರೆದೊಯ್ದು ನೈವೇದ್ಯ ಮಾಡಿ ಮಹಾ ಮಂಗಳಾರುತಿ ಮಾಡಲಾಯಿತು ಹೀಗೆ ಪೂಜಾ ಕೈಂಕರ್ಯ ಜರುಗಿದವು. ಭಕ್ತರು ಸಮೃದ ಮಳೆ ಬೆಳೆಗಾಗಿ ಪ್ರಾರ್ಥಿಸಿದರು. ರೋಗ- ರುಜಿನಗಳಿಂದ ಶ್ರೀದೇವಿ ಕಾಪಾಡಲಿ ಎಂದು ಬೇಡಿಕೊಂಡರು. ಗ್ರಾಮದ ಸರ್ವ ಸಮುದಾಯದ ಭಕ್ತರು ಅದ್ದೂರಿಯಿಂದ ದೇವಿ ಮೆರವಣಿಗೆ ನಡೆಸಿ ಜಾತ್ರೋತ್ಸವ ಸಂಪನ್ನಗೊಳಿಸಿದರು.

ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್, ಮುಖಂಡರಾದ ಎಚ್.ಎಂ. ಮಲ್ಲಿಕಾರ್ಜುನ ಸ್ವಾಮಿಗಳು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಕುಬೇರಪ್ಪ, ಬಿಡಿಸಿಸಿ ಬ್ಯಾಂಕ್‌ ನಿರ್ದೆಶಕ ಅರಸೀಕೆರೆ ವೈ.ಡಿ ಅಣ್ಣಪ್ಪ, ವಿದ್ಯುತ್ ಗುತ್ತಿಗೆದಾರ ಹಾಗೂ ಸಮಾಜ ಸೇವಕ ಎ.ಕರಿಬಸವರಾಜ ಊರಿನ ಮುಖ್ಯಸ್ಥರಾದ ಬಣಕಾರ ಕರಿಬಸಪ್ಪ ಮತ್ತು ಕೆ.ರಾಮನಗೌಡ , ಕೊಂಗಿ ರಮೇಶ್, ಭರತೇಶ್ ಪಾಟೀಲ್, ನಂಜಪ್ಪ, ಚನ್ನಬಸಪ್ಪ, ರಾಮನಗೌಡ, ಕಿರಣಕುಮಾರ ತಳವಾರ ಬಸಣ್ಣ, ಗೋಣೆಪ್ಪ, ಚಂದ್ರಪ್ಪ, ಸಿದ್ದಲಿಂಗಾಚಾರಿ, ಜಗದೀಶ್.ಬಿ, ರಾಮನಗೌಡ, ಮಂಜಪ್ಪ, ಬಾಬು, ಐ.ಜಿ ವಿರೇಶ್, ರಾಜು, ಕೊರವರ ಪರಸಪ್ಪ ವೀರಣ್ಣ, ಗ್ರಾಪಂ ಅಧ್ಯಕ್ಷ ನಾಗರಾಜ ಮತ್ತು ಸರ್ವ ಸದಸ್ಯರು ಒಗ್ಗಟ್ಟಿನಿಂದ ಪಾಲ್ಗೊಂಡು ಜಾತ್ರೆಯನ್ನು ಯಶಸ್ವಿಗೊಳಿಸಿದರು.

ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ನಡೆದ ಗ್ರಾಮ ದೇವತೆ ಊರಮ್ಮದೇವಿ ಜಾತ್ರೋತ್ಸವದಲ್ಲಿ ಶ್ರೀದೇವಿಯನ್ನು ವೈಭವದಿಂದ ಮೆರವಣಿಗೆ ನಡೆಸಲಾಯಿತು.