ಸಾರಾಂಶ
- ರಾಜ್ಯ ವುಶು ಸ್ಪರ್ಧೆಯ ಸಾಂಡಾ ವಿಭಾಗದಲ್ಲಿ ಗೆದ್ದು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ
-----ಬೀದರ್: ಜ್ಞಾನಸುಧಾ ವಿದ್ಯಾಲಯದ 12 ವಿದ್ಯಾರ್ಥಿಗಳು ರಾಜ್ಯಮಟ್ಟದ ವುಶು ಚಾಂಪಿಯನ್‌ಶಿಪ್‌ನಲ್ಲಿ ಗಮನಾರ್ಹ ಸಾಧನೆಗೈದು ರಾಷ್ಟ್ರಮಟ್ಟಕ್ಕೆ ಅರ್ಹತೆ ಪಡೆದಿದ್ದಾರೆ.
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ 23ನೇ ಕರ್ನಾಟಕ ರಾಜ್ಯ ವುಶು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಜ್ಞಾನಸುಧಾ ವಿದ್ಯಾಲಯದ 16 ವಿದ್ಯಾರ್ಥಿಗಳ ಪೈಕಿ 12 ವಿದ್ಯಾರ್ಥಿಗಳು ವುಶು ಸ್ಪರ್ಧೆಯ ಸಾಂಡಾ ವಿಭಾಗದಲ್ಲಿ ಒಂದು ಚಿನ್ನದ ಪದಕ, ಎರಡು ಬೆಳ್ಳಿ ಪದಕ ಮತ್ತು 9 ಕಂಚಿನ ಪದಕಗಳನ್ನು ಗೆದ್ದು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ಸ್ಪರ್ಧೆಯಲ್ಲಿ ಜ್ಞಾನಸುಧಾ ವಿದ್ಯಾಲಯದ 7ನೇ ತರಗತಿ ವಿದ್ಯಾರ್ಥಿಯಾದ ಸಾಯಿ ಮಹಾದೇವ ಚಿನ್ನದ ಪದಕ ಗೆದ್ದುಕೊಂಡಿದ್ದರೆ 9ನೇ ತರಗತಿ ವಿದ್ಯಾರ್ಥಿಗಳಾದ ವಿಘ್ನೇಶ ಸುಭಾಷರೆಡ್ಡಿ, ದೀಕ್ಷಿತ್ ವಿನೋದ ಅವರು ಬೆಳ್ಳಿ ಪದಕ ಗಳಿಸಿದ್ದಾರೆ. 3ನೇ ತರಗತಿ ವಿದ್ಯಾರ್ಥಿ ವಿರಾಜ್ ಜಾಧವ ವಿಜಯಕುಮಾರ, 5ನೇ ತರಗತಿ ವಿದ್ಯಾರ್ಥಿ ಅರ್ಥವ ಗೋರಕ್, 6ನೇ ತರಗತಿ ವಿದ್ಯಾರ್ಥಿ ನರೇಂದ್ರ ಆನಂದ, 9ನೇ ತರಗತಿಯ ವಿದ್ಯಾರ್ಥಿಗಳಾದ ಓಂ ಪಂಡರಿ ಇಂಗ್ಲೆ, ಬಸವಕುಮಾರ ರಾಜಕುಮಾರ, ಅಷ್ಫಾಕ್ ಮುಸ್ತಾಫ್, ಸಾಯಿಪ್ರಸಾದ ಶಾಂತಕುಮಾರ, 10ನೇ ತರಗತಿ ವಿದ್ಯಾರ್ಥಿ ವೀರಸಂಗಪ್ಪ ಚಂದ್ರಕಾಂತ ಅವರು ಕಂಚಿನ ಪದಕ ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ನಗರದ ಮಾಮನಕೇರಿಯಲ್ಲಿರುವ ಜ್ಞಾನಸುಧಾ ವಿದ್ಯಾಲಯದ ಜ್ಞಾನರಂಗ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪೌಷ್ಟಿಕ ಆಹಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ತಜ್ಞ ವೈದ್ಯರಾದ ಡಾ. ವಿ.ವಿ. ನಾಗರಾಜ, ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಪೂರ್ಣಿಮಾ ಜಾರ್ಜ್ ಹಾಗೂ ಜ್ಞಾನಸುಧಾ ವಿದ್ಯಾಲಯದ ನಿರ್ದೇಶಕರಾದ ಡಾ. ಮುನೇಶ್ವರ ಲಾಖಾ ಅವರು ವುಶು ಚಾಂಪಿಯನ್‌ಶಿಪ್‌ನಲ್ಲಿ ಅತ್ಯುತ್ತುಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಪದಕ ಹಾಗೂ ಪ್ರಮಾಣ ಪತ್ರವನ್ನು ವಿತರಿಸಿ ಸನ್ಮಾನಿಸಿದರು.ನಮ್ಮ ವಿದ್ಯಾಲಯದ ವಿದ್ಯಾರ್ಥಿಗಳು ರಾಜ್ಯಮಟ್ಟದ ವುಶು ಕ್ರೀಡಾಕೂಟದಲ್ಲಿ ಭಾಗವಹಿಸಿ ಅತ್ಯುತ್ತಮ ಸಾಧನೆಗೈದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು ಸಂತಸದ ವಿಷಯವಾಗಿದೆ. ರಾಷ್ಟ್ರಮಟ್ಟದ ಸ್ಪರ್ಧೆಯಲ್ಲೂ ಉತ್ತಮ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.
----ಫೈಲ್ 18ಬಿಡಿ4