ರಘುಚಂದನ್ ಬೆಂಬಲಿಗರಿಂದ ಗೋಬ್ಯಾಕ್ ಕಾರಜೋಳ

| Published : Mar 30 2024, 12:55 AM IST

ಸಾರಾಂಶ

ಸ್ಥಳೀಯ ಅಭ್ಯರ್ಥಿ ವಿಚಾರ ಇಟ್ಟುಕೊಂಡು ಹೋರಗಿನವರಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಬಿಜೆಪಿ ಯುವ ಮುಖಂಡ ರಘುಚಂದನ್ ಬೆಂಬಲಿಗರು ಶುಕ್ರವಾರ ಗೋವಿಂದ ಕಾರಜೋಳ ವಿರುದ್ಧ ಗೋಬ್ಯಾಕ್ ಘೋಷಣೆ ಕೂಗಿದರು.

ಚಿತ್ರದುರ್ಗ: ಸ್ಥಳೀಯ ಅಭ್ಯರ್ಥಿ ವಿಚಾರ ಇಟ್ಟುಕೊಂಡು ಹೋರಗಿನವರಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಬಿಜೆಪಿ ಯುವ ಮುಖಂಡ ರಘುಚಂದನ್ ಬೆಂಬಲಿಗರು ಶುಕ್ರವಾರ ಗೋವಿಂದ ಕಾರಜೋಳ ವಿರುದ್ಧ ಗೋಬ್ಯಾಕ್ ಘೋಷಣೆ ಕೂಗಿದರು.

ಲೋಕಸಭೆ ಚುನಾವಣೆ ಅಧೀಕೃತ ಅಭ್ಯರ್ಥಿಯಾಗಿ ಸಂಜೆ ಬಿಜೆಪಿ ಪ್ರಚಾರ ಕಚೇರಿಗೆ ಗೋವಿಂದ ಕಾರಜೋಳ ಆಗಮಿಸಿದಾಗ ರಘುಚಂದನ್ ಬೆಂಬಲಿಗರು ಪ್ಲೇ ಕಾರ್ಡ್ ಹಿಡಿದು ಘೋಷಣೆ ಕೂಗಿದರು. ಪ್ರತಿಯಾಗಿ ಗೋವಿಂದ ಕಾರಜೋಳ ಬೆಂಬಲಿಗರೂ ರಘು ಚಂದನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಎರಡು ಕಡೆ ಬೆಂಬಲಿಗರು ಪರಸ್ಪರ ವಿರುದ್ಧ ಘೋಷಣೆಯಲ್ಲಿ ನಿರತರಾದ್ದರಿಂದ ಪರಿಸ್ಥಿತಿ ಬಿಗಡಾಯಿಸಿತು. ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಹರಸಾಹಸ ಪಟ್ಟರು. ಅಂತಿಮವಾಗಿ ಪೊಲೀಸರು ಪ್ರತಿಭಟನಾಕಾರ ವಶಕ್ಕೆ ಪಡೆದು ಪರಿಸ್ಥಿತಿ ತಿಳಿಗೊಳಿಸಿದರು.