ತೆರಿಗೆ ಅನ್ಯಾಯ ವಿರೋಧಿಸಿ ‘ಗೋ ಬ್ಯಾಕ್‌ ಮೋದಿ’ ಪ್ರತಿಭಟನೆ

| Published : Apr 14 2024, 01:46 AM IST

ಸಾರಾಂಶ

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ವಿಧಾನಪರಿಷತ್‌ ಸದಸ್ಯ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ಮಂಗಳೂರಿಗೆ ರೋಡ್‌ಶೋಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಮಾಡಿರುವ ಅನ್ಯಾಯಕ್ಕೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡಬೇಕಾದ ತೆರಿಗೆ ಪಾಲು ನೀಡದೆ ಮೋಸ ಮಾಡಿದೆ. ಪ್ರವಾಹ ಮತ್ತು ಬರ ಪರಿಹಾರ ಹಣ ನೀಡಿಲ್ಲ ಎಂದು ಆರೋಪಿಸಿ, ಈ ಹಿನ್ನೆಲೆಯಲ್ಲಿ ಮಂಗಳೂರಿಗೆ ಪ್ರಧಾನಿ ಮೋದಿ ಆಗಮಿಸುವುದನ್ನು ವಿರೋಧಿಸಿ ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು ನಗರದ ಮಿನಿ ವಿಧಾನಸೌಧದ ಎದುರು ಶನಿವಾರ ಪ್ರತಿಭಟನೆ ನಡೆಸಿದರು. ‘ಗೋ ಬ್ಯಾಕ್‌ ಮೋದಿ’ ಘೋಷಣೆ ಕೂಗಿದರು.ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ವಿಧಾನಪರಿಷತ್‌ ಸದಸ್ಯ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ಮಂಗಳೂರಿಗೆ ರೋಡ್‌ಶೋಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಮಾಡಿರುವ ಅನ್ಯಾಯಕ್ಕೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಐವನ್‌ ಡಿಸೋಜ ಮಾತನಾಡಿ, ಬರ, ಪ್ರವಾಹ, ಕೋವಿಡ್‌ ಸೇರಿದಂತೆ ಇತರ ಸಂಕಷ್ಟದ ಕಾಲದಲ್ಲಿ ರಾಜ್ಯಕ್ಕೆ ಮೋದಿ ಬಂದಿರಲ್ಲ. ಈಗ ಬರುವುದು ರಾಜಕೀಯ ಉದ್ದೇಶಕ್ಕಾಗಿಯೇ ಹೊರತು ರಾಜ್ಯದ ಜನರ ಹಿತಕ್ಕಾಗಿ ಅಲ್ಲ ಎಂದು ಹೇಳಿದರು.ವಿಧಾನ ಪರಿಷತ್‌ ಸದಸ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಮುಖಂಡರಾದ ಕೆ.ಅಶ್ರಫ್‌, ಮಲಾರ್‌ ಮೋನು, ನೀರಜ್‌ ಚಂದ್ರಪಾಲ್‌, ಜೋಕಿಂ ಡಿ’ಸೋಜ, ಡಾ. ಶೇಖರ್‌ ಪೂಜಾರಿ, ಸತೀಶ್‌ ಪೆಂಗಲ್‌, ಹೇಮಂತ್‌ ಗರೋಡಿ, ಅಲಿಸ್ಟರ್‌ ಡಿಕುನ್ಹ, ಸಬಿತಾ ಮಿಸ್ಕಿತ್‌, ರಮಾನಂದ ಪೂಜಾರಿ, ಕವಿತಾ ವಾಸು, ಶಾಂತಲಾ ಗಟ್ಟಿ, ಝಕರಿಯಾ ಮಲಾರ್‌, ಡಿ.ಎಂ.ಮುಸ್ತಫ, ಸವಾದ್‌ ಸುಳ್ಯ, ಸುಹಾನ್‌ ಆಳ್ವ ಮತ್ತಿತರರಿದ್ದರು.