ಅಧಿಕಾರಕ್ಕೆ ಸೀಮಿತವಾಗದೆ ಅಭಿವೃದ್ಧಿಗೆ ಮುಂದಾಗಿ

| Published : Jan 11 2025, 12:47 AM IST

ಸಾರಾಂಶ

ಕುಂದಾಣ: ಚುನಾವಣೆ ಮುಖಾಂತರ ಆಯ್ಕೆ ಆಗಿರುವಂತಹ ಪದಾಧಿಕಾರಿಗಳು ಅಧಿಕಾರಕ್ಕೆ ಸೀಮಿತವಾಗದೇ ಸಂಘ ಮತ್ತು ಸಂಘದ ಸದಸ್ಯರ ಅಭಿವೃದ್ಧಿಗೆ ಮುಂದಾಗಿ ಸ್ವಯಂ ಬದ್ದತೆಯಿಂದ ಪ್ರಾಮಾಣಿಕ ಪಯತ್ನಗಳು ಹೆಚ್ಚಾಗಲಿ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಹೇಳಿದರು.

ಕುಂದಾಣ: ಚುನಾವಣೆ ಮುಖಾಂತರ ಆಯ್ಕೆ ಆಗಿರುವಂತಹ ಪದಾಧಿಕಾರಿಗಳು ಅಧಿಕಾರಕ್ಕೆ ಸೀಮಿತವಾಗದೇ ಸಂಘ ಮತ್ತು ಸಂಘದ ಸದಸ್ಯರ ಅಭಿವೃದ್ಧಿಗೆ ಮುಂದಾಗಿ ಸ್ವಯಂ ಬದ್ದತೆಯಿಂದ ಪ್ರಾಮಾಣಿಕ ಪಯತ್ನಗಳು ಹೆಚ್ಚಾಗಲಿ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಹೇಳಿದರು.

ಜಿಪಂ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲರ ಸಹಮತದಿಂದ ನೌಕರರ ಸಮಸ್ಯೆಗಳು ಬಗೆಹರಿಸಲು ಹೋರಾಡುವ ಸಂಘಟನಾ ಶಕ್ತಿಯನ್ನು ಗುರುತಿಸಿ ಜಿಲ್ಲಾ ಪದಾಧಿಕಾರಿಗಳಿಗೆ ಅಧಿಕಾರ ನೀಡಿದ್ದಾರೆ. ತಾಲೂಕು ಮತ್ತು ಜಿಲ್ಲಾ ಸಂಘಗಳ ಕಟ್ಟಡ ವಸತಿ ಗೃಹಗಳಿಗೆ ಅನುದಾನ ನೀಡಲಿದ್ದೇವೆ. ಶಿಕ್ಷಕರು ಮುಂಬಡ್ತಿ ಪಡೆಯದೆ ನಿವೃತ್ತಿ ಹೊಂದುತ್ತಿರುವುದರ ಕುರಿತು ಪರಶೀಲಿಸಲಾಗುವುದು ಹಾಗೂ ಪಠ್ಯೇತರ ಚಟುವಟಿಕೆಗಳಿಂದ ಎದುರಿಸುತ್ತಿರುವ ಸಮಸ್ಯೆಗಳಿಂದ ಹೊರಬರಲು ಕ್ರಾಂತಿ ಮಾಡಬೇಕಾಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪಿ.ಗಂಗಾಧರಪ್ಪ ಮಾತನಾಡಿ, ರಾಜ್ಯಾಧ್ಯಕ್ಷ ಷಡಕ್ಷರಿ ಅವರಿಗೆ ಅಭಿನಂದನೆ ತಿಳಿಸಿ, ಸರ್ಕಾರಿ ನೌಕರರ ಹಿತ ಕಾಪಾಡಲು ಮತ್ತು ಆಶೋತ್ತರಗಳನ್ನು ಈಡೇರಿಸುವಂತೆ ಮನವಿ ಮಾಡಿದರು. ಎಲ್ಲಾ ಇಲಾಖೆಯ ನಿರ್ದೇಶಕರ ಸಹಕಾರದಿಂದ ಈ ಅಭೂತಪೂರ್ವ ಗೆಲುವು ಸಾಧಿಸಲು ಸಾಧ್ಯವಾಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆ ನಗರಕ್ಕೆ ಹೊಂದಿಕೊಂಡಿರುವ ಕಾರಣ ಎಚ್‌ಆರ್‌ಐ ಮತ್ತು ಸಿಸಿ ಗ್ರಾಮಾಂತರ ಜಿಲ್ಲೆಗೂ ವಿಸ್ತರಿಸಬೇಕು. ಒಪಿಎಸ್ ಮರುಸ್ಥಾಪನೆ, ಆರೋಗ್ಯ ಸಂಜೀವಿನಿ ಯೋಜನೆಗಳನ್ನು ಜಾರಿಗೆ ತರುವಂತೆ ಒತ್ತಾಯಿಸಲಾಗುವುದು ಎಂದು ಹೇಳಿದರು.

ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಗ್ರಾಮಾಂತರ ಜಿಲ್ಲಾ ಶಾಖೆಯ ಎಲ್ಲಾ ನಿರ್ದೇಶಕರನ್ನು ರಾಜ್ಯಾಧ್ಯಕ್ಷರಾದ ಸಿ.ಎಸ್ .ಷಡಕ್ಷರಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಶಿವಶಂಕರ್, ಉಪಕಾರ್ಯದರ್ಶಿ ರಮೇಶ್, ದೇವನಹಳ್ಳಿ ತಹಸೀಲ್ದಾರ್ ಎಚ್.ಬಾಲಕೃಷ್ಣ, ತಾಪಂ ಇಒ ಶ್ರೀನಾಥ್ ಗೌಡ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಮತ್ತು ತಾಲೂಕಿನ ಪದಾಧಿಕಾರಿಗಳಾದ ಉಮಾಶಂಕರ್, ನಾಗೇಶ್ ಕೆಎನ್‌ಎಂಎಸ್‌ ರಾಜಶೇಖರ್, ನಾರಾಯಣಗೌಡರು, ಹನುಮಂತರಾಯಪ್ಪ, ಎಸ್‌ಆರ್‌ ನಾಗೇಶ್, ಆದರ್ಶ, ವೆಂಕಟೇಶ್, ಸುನೀಲ್ ಮತ್ತಿತರರು ಉಪಸ್ಥಿತರಿದ್ದರು.

(ಫೋಟೋ ಕ್ಯಾಪ್ಷನ್‌)

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.