ಸಾರಾಂಶ
ಸಮಾನ ಮನಸ್ಕರ ಪ್ರಗತಿ ಪರ ವೇದಿಕೆ ಅಧ್ಯಕ್ಷ ಸಿ.ಎನ್.ಪ್ರಭು, ಶಿಕ್ಷಕರಾದ ಎನ್.ಸಿ. ರಾಮಪ್ರಸಾದ್
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಪಟ್ಟಣದ ವಿನಾಯಕ ಬಡಾವಣೆಯಲ್ಲಿ ಮತದಾರ ಶಿಕ್ಷಕರ ಮನೆಗಳಿಗೆ ತೆರಳಿ ವೇದಿಕೆಯ ಬೆಂಬಲದಿಂದ ನಿರ್ದೇಶಕ ಸ್ಥಾನಗಳಿಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಾದ ಒಂಟಿಮನೆ ನಾಗರಾಜು, ರಾಜಶೇಖರ, ಬಿ.ಎಲ್. ಮಹದೇವ ಮತ್ತು ಎಚ್.ಟಿ. ಪಾಂಡು ಅವರ ಪರವಾಗಿ ತಾಲೂಕು ಸಾಮರಸ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ. ಪುರುಷೋತ್ತಮ ಮತಯಾಚಿಸಿದರು.ವೇದಿಕೆಯ ಪದಾಧಿಕಾರಿಗಳು, ನಿರ್ದೇಶಕ ಸ್ಥಾನದ ಆಕಾಂಕ್ಷಿಗಳು ಮತ್ತು ಅವರ ಬೆಂಬಲಿತ ಶಿಕ್ಷಕರು ಪಟ್ಟಣದ ಶಿಕ್ಷಕ ಮತದಾರರ ಮನೆ ಮನೆಗೆ ತೆರಳಿ ಬೆಂಬಲ ಕೋರಿದರು.
ಸಮಾನ ಮನಸ್ಕರ ಪ್ರಗತಿ ಪರ ವೇದಿಕೆ ಅಧ್ಯಕ್ಷ ಸಿ.ಎನ್.ಪ್ರಭು, ಶಿಕ್ಷಕರಾದ ಎನ್.ಸಿ. ರಾಮಪ್ರಸಾದ್, ಮುರುಳಿಧರ, ಕೆ.ಎಸ್. ಕೃಷ್ಣ, ಲಕ್ಷ್ಮೀಶ, ಸೈಯದ್ ರಿಜ್ವಾನ್, ಕೆ.ಎಸ್. ನಾಗರಾಜು, ಮಂಜುನಾಥ, ಟಿ.ಎಸ್. ಮೋಹನ್ ಕುಮಾರ್, ಮಂಜುರಾಜು, ವೀರಭದ್ರಶೆಟ್ಟಿ, ಕಲಾವಿದ ಮಹದೇವ, ಸಿ.ಎನ್.ಸ್ವಾಮಿ, ಮುತ್ತೇಶಾಚಾರ್, ಭೋಜೇಗೌಡ, ವಿಷ್ಣುಶೆಟ್ಟಿ, ಶಿವಮೂರ್ತಿ, ಜಯಮ್ಮ, ನಾರಾಯಣಶೆಟ್ಟಿ, ತಾರಾ, ಶ್ವೇತಾ, ಶೋಭಾ, ವಿಜಯಲಕ್ಷ್ಮಿ, ಪುಷ್ಪಾವತಾಮ್ಮ, ಗೋಪಿಕಾಂಭ, ಶಿವಮ್ಮ, ಡಿ. ಅನಿತಾ, ಕೃಷ್ಣನಾಯಕ, ಪ್ರಕಾಶ್, ರಾಮಕೃಷ್ಣ, ಕೆ.ಎನ್. ಕೃಷ್ಣ ಇದ್ದರು.