ಕನ್ನಡಪ್ರಭ ವಾರ್ತೆ ವಿಜಯಪುರ

ಅವಳಿ ಜಿಲ್ಲೆಯ ನೌಕರರ ಜೀವನಾಡಿಯಾಗಿರುವ ಸರಕಾರಿ ನೌಕರರ ಸಹಕಾರಿ ಬ್ಯಾಂಕ ತಮ್ಮೆಲ್ಲರ ಸಹಕಾರದಿಂದ ಸುಮಾರು ₹1.5 ಕೋಟಿ ನಿವ್ಹಳ ಲಾಭ ಹೊಂದಿದೆ ಎಂದು ಸರ್ಕಾರಿ ನೌಕರರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಅರ್ಜುನ ಲಮಾಣಿ ಹೇಳಿದರು.

ನಗರದ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬ್ಯಾಂಕಿನ 118ನೇ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರಿ ನೌಕರರ ಸಹಕಾರಿ ಬ್ಯಾಂಕ ಇಡೀ ರಾಜ್ಯಾದ್ಯಂತ ತನ್ನ ವ್ಯಾಪ್ತಿ ವಿಸ್ತರಿಸಿದ್ದು, ಬೃಹತ್ ಆಗಿ ಬೆಳೆದು ನಿಂತಿದೆ. ಬ್ಯಾಂಕಿನಲ್ಲಿ ಸಂಬಳ ಪಡೆಯುವವರಿಗೆ ₹20 ಲಕ್ಷದವರೆಗೆ ವೈಯಕ್ತಿಕ ಸಾಲ ನೀಡಲಾಗುವುದು. ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಂಪೂರ್ಣ ಡಿಜಟಲೀಕರಣಗೊಳಿಸಿದ್ದು, ಗೂಗಲ್ ಪೇ, ಫೋನ್ ಪೇ, ಎಟಿಎಂ ಸೇವೆ ಒದಗಿಸಲಾಗುತ್ತಿದೆ. ಅವಳಿ ಜಿಲ್ಲೆಯಲ್ಲಿ ಸುಮಾರು 12 ಶಾಖೆ ಪ್ರಾರಂಭಿಸಲಾಗಿದೆ. ನಮ್ಮ ಬ್ಯಾಂಕು ವರ್ಷ್ಯಾಂತಕ್ಕೆ ₹600 ಕೋಟಿ ಠೇವಣಿ ಹೊಂದಿದೆ. ಪ್ರತಿ ವರ್ಷ ಬ್ಯಾಂಕಿನ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಅವಳಿ ಜಿಲ್ಲೆಯ ನೌಕರರ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ 74 ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷೆ ಪುಷ್ಪಾ ಗಚ್ಚಿನಮಠ, ನಿರ್ದೇಶಕರಾದ ಅರವಿಂದ ಹೂಗಾರ, ಪ್ರಶಾಂತ ಚನಗೊಂಡ, ಹಣಮಂತ ಕೊಣದಿ, ಆನಂದಗೌಡ ಬಿರಾದಾರ, ಅಲ್ಲಾಭಕ್ಷ ವಾಲೀಕಾರ, ಅಶೋಕ ಚನಬಸುಗೋಳ, ಮಲಕಪ್ಪ ಟಕ್ಕಳಕಿ, ಚಂದ್ರಶೇಖರ ಜಿತ್ತಿ, ಸಯ್ಯದಜುಬೇರ್ ಕೆರೂರ, ಹಣಮಂತರಾಯ ಸಿಂದಗಿ, ಮಹೇಶ ನಾಯಿಕ, ಸರಫರಾಜ ಕಂದಗಲ್, ಗೀತಾ ಹತ್ತಿ, ಪ್ರಧಾನ ವ್ಯವಸ್ಥಾಪಕ ಸಿ.ಎಸ್.ಹಿರೇಮಠ, ಶಶಿ ಸಾತಲಗಾಂವ ಸೇರಿದಂತೆ ಬ್ಯಾಂಕಿನ ಸಿಬ್ಬಂದಿ, ಬ್ಯಾಂಕಿನ ಸದಸ್ಯರು, ನೌಕರರು ಉಪಸ್ಥಿತರಿದ್ದರು.