ಕಾಯಕದಲ್ಲಿ ಭಗವಂತನನ್ನು ಕಾಣಬೇಕು: ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಶ್ರೀ

| Published : Mar 14 2024, 02:08 AM IST

ಕಾಯಕದಲ್ಲಿ ಭಗವಂತನನ್ನು ಕಾಣಬೇಕು: ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಕಾಯಕದಲ್ಲಿ ಭಗವಂತನನ್ನು ಕಾಣಬೇಕು. ಬಸವಣ್ಣನವರು ಹೇಳಿದ್ದು ಅದನ್ನೆ. ೧೨ನೇ ಶತಮಾನದಲ್ಲಿ ಕಾಯಕ ನಿಷ್ಠೆಯ ಕುರಿತು ಶರಣರು ಮನಮುಟ್ಟುವಂತೆ ಹೇಳಿದ್ದಾರೆ ಎಂದು ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಶಿಗ್ಗಾಂವಿ: ಕಾಯಕ ಕೇವಲ ಹಣ ಸಂಪಾದನೆಯಾಗಬಾರದು, ಧರ್ಮ ನಿಷ್ಠುರವಾಗಿರಬೇಕು, ಮನಸ್ಸಿಗೆ ತೃಪ್ತಿ ಕೊಡಬೇಕು, ಕಾಯಕದಲ್ಲಿ ಅದರದೇ ಆನಂದ ಇರಬೇಕು. ಅನುಭವ ನೀಡುವಂತಿರಬೇಕು. ಅಂದಾಗ ಬದುಕಿನಲ್ಲಿ ಯಶಸ್ಸು ಸಾದ್ಯ ಎಂದು ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ವಿರಕ್ತಮಠದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಕಾಯಕದಲ್ಲಿ ಭಗವಂತನನ್ನು ಕಾಣಬೇಕು. ಬಸವಣ್ಣನವರು ಹೇಳಿದ್ದು ಅದನ್ನೆ. ೧೨ನೇ ಶತಮಾನದಲ್ಲಿ ಕಾಯಕ ನಿಷ್ಠೆಯ ಕುರಿತು ಶರಣರು ಮನಮುಟ್ಟುವಂತೆ ಹೇಳಿದ್ದಾರೆ ಎಂದು ಹೇಳಿದರು. ಡಾ. ಎಂ.ಎಂ. ತಿರ್ಲಾಪುರ ಮಾತನಾಡಿ, ದುಡಿಮೆಯಲ್ಲಿ ದೇವರನ್ನು ತೋರಿಸಿಕೊಟ್ಟವರು ಬಸವಣ್ಣನವರು. ಬಸವಣ್ಣನವರ ವಚನಗಳ ಸಾರವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಜೀವನದಲ್ಲಿ ಸಾರ್ಥಕ ಜೀವನ ಸಾಗಿಸಬೇಕು ಎಂದರು.

ಪ್ರಥಮದರ್ಜೆ ಗುತ್ತಿಗೆದಾರ ಅರ್ಜುನ ಹಂಚಿನಮನಿ ಮಾತನಾಡಿ, ತಾಯಂದಿಯರು ಶರಣ ಸಂಸ್ಕೃತಿ ಉತ್ಸವದ ಮಹತ್ವವನ್ನು ಮಕ್ಕಳಿಗೆ ತಿಳಿಸಬೇಕು ಎಂದರು.

ರಾಷ್ಟ್ರೀಯ ವೀರಶೈವ ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ವಕೀಲ ಚಿದಾನಂದ ಮಠದ ಮಾತನಾಡಿ, ಕಾಯಕ ತತ್ವದ ಮೇಲೆ ಬದುಕನ್ನು ನಡೆಸಲು ಕಲಿಸಿದವರು ಶರಣರು, ಬಸವಣ್ಣನವರ ತತ್ವಗಳ ಆಳವಡಿಕೆಯಿಂದ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬಹುದು. ವಚನಗಳ ಮೂಲಕ ಶೋಷಿತ ಸಮುದಾಯಗಳಲ್ಲಿ ಸಮಾನತೆ ತಂದ ನಮ್ಮ ವಿಶ್ವಗುರು ಬಸವಣ್ಣನ ಭಾವ ನಿಜಕ್ಕೂ ಸ್ಮರಣೀಯ. ಶೋಷಿತ ಸಮುದಾಯಗಳ ಆಶಾಕಿರಣ ಬಸವಣ್ಣನವರಾಗಿದ್ದಾರೆ ಎಂದರು.

ಗಂಜೀಗಟ್ಟಿ ಮೊರಾರ್ಜಿ ವಸತಿ ಶಾಲೆಯ ಸಂಗೀತ ಶಿಕ್ಷಕ ಬಸಯ್ಯ ಹಿರೇಮಠ ಅವರಿಂದ ಸಂಗೀತ ಸೇವೆ ಜರುಗಿತು.