ಕಾರ್ಕಳ: ದಾನಿಗಳು ಅನುದಾನಿತ ಶಾಲೆಗಳಿಗೆ ನೆರವು ನೀಡುವ ಮೂಲಕ ಸಮಾಜದ ಋಣವನ್ನು ತೀರಿಸುವ ಮಹತ್ವದ ಕಾರ್ಯ ಮಾಡುತ್ತಿದ್ದಾರೆ ಎಂದು ಕರ್ಣಾಟಕ ಬ್ಯಾಂಕ್ ನ ಮಂಗಳೂರು ಎಂಡಿ ಮತ್ತು ಸಿಇಒ ರಾಘವೇಂದ್ರ ಎಸ್. ಭಟ್ ಹೇಳಿದರು.
ಕಾರ್ಕಳ: ದಾನಿಗಳು ಅನುದಾನಿತ ಶಾಲೆಗಳಿಗೆ ನೆರವು ನೀಡುವ ಮೂಲಕ ಸಮಾಜದ ಋಣವನ್ನು ತೀರಿಸುವ ಮಹತ್ವದ ಕಾರ್ಯ ಮಾಡುತ್ತಿದ್ದಾರೆ ಎಂದು ಕರ್ಣಾಟಕ ಬ್ಯಾಂಕ್ ನ ಮಂಗಳೂರು ಎಂಡಿ ಮತ್ತು ಸಿಇಒ ರಾಘವೇಂದ್ರ ಎಸ್. ಭಟ್ ಹೇಳಿದರು.ಕಾರ್ಕಳ ತಾಲೂಕಿನ ಮಾಳ ಮಲ್ಲಾರಿನ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ‘ಗೋಕುಲಾಮೃತ’ ಸ್ಮರಣ ಸಂಚಿಕೆಯ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ಕಾಲಘಟ್ಟದಲ್ಲಿ ಹಳೆಯ ಶಾಲೆಗಳನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿರುವ ಸಂದರ್ಭ, 75 ವರ್ಷಗಳಿಂದ ಮಕ್ಕಳಿಗೆ ಸಂಸ್ಕಾರವನ್ನು ಧಾರೆ ಎರೆಯುತ್ತಿರುವ ಈ ಶಾಲೆ ಹಳ್ಳಿಯಲ್ಲಿ ಉತ್ಸವದಂತೆ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.ದಾನಿಗಳು ದಾನ ಮಾಡುವ ಮೂಲಕ ಸಮಾಜದ ಋಣವನ್ನು ತೀರಿಸುವ ಪರಂಪರೆಯನ್ನು ಮುಂದುವರೆಸುತ್ತಿದ್ದು, ಮುಂದಿನ ಶತಮಾನೋತ್ಸವವೂ ವಿಜೃಂಭಣೆಯಿಂದ ನಡೆಯಲಿ ಎಂದು ಶುಭಾಶಯ ಕೋರಿದರು.
ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಪಾಠಪ್ರವಚನಗಳ ಜತೆಗೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಹೇಳಿದರು.ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು, ಶಿಸ್ತು ಹಾಗೂ ಸಮಯಪಾಲನೆ ಮೂಲಕ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಡಾ. ಎಂ. ಪ್ರಭಾಕರ ಜೋಶಿ ಮಾತನಾಡಿ, ಕರ್ಣಾಟಕ ಬ್ಯಾಂಕ್ ತನ್ನ ಸಿಎಸ್‌ಆರ್ ನಿಧಿ ಮೂಲಕ ಗುರುಕುಲ ಶಾಲೆಗೆ ಮಹತ್ತರ ಕೊಡುಗೆ ನೀಡಿದೆ ಎಂದು ಹೇಳಿದರು.
ನಾಸಿಕ್‌ನ ಉದ್ಯಮಿ ಸತೀಶ ಚಿಪ್ಳೂಣ್‌ಕರ್ ಮಾತನಾಡಿದರು. ಸ್ಮರಣ ಸಂಚಿಕೆ ಸಂಪಾದಕ ಅರವಿಂದ ಚಿಪ್ಳೂಣ್‌ಕರ್ ಮಾತನಾಡಿ, ಅಮೃತ ಮಹೋತ್ಸವ ಹಳೆಯ ನೆನಪುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಕಾರ್ಯವಾಗಿದ್ದು, ನೆನಪುಗಳ ಗುಚ್ಚವನ್ನು ಹಂಚಿಕೊಳ್ಳುವ ಜತೆಗೆ ಭವಿಷ್ಯದ ಕಾಲಘಟ್ಟವನ್ನು ಪ್ರತಿಬಿಂಬಿಸುವ ಪ್ರಯತ್ನವಾಗಿದೆ ಎಂದರು.ಪ್ರವಾಸದ ಛಾಯಾಚಿತ್ರಗಳು, ಸ್ವಾರಸ್ಯಕರ ಚಿತ್ರಣಗಳು ಹಾಗೂ ನೆನಪುಗಳ ಬುತ್ತಿಯಂತಿರುವ ವಿಶೇಷ ಲೇಖನಗಳನ್ನು ಸಂಚಿಕೆಯಲ್ಲಿ ಒಳಗೊಂಡಿದ್ದು, ಇದು ಪರಿಪೂರ್ಣ ಸ್ಮರಣ ಸಂಚಿಕೆಯಾಗಿರುವುದಾಗಿ ಹೇಳಿದರು. ಅವರು ಸ್ಮರಣ ಸಂಚಿಕೆಯನ್ನು ಅನಾವರಣಗೊಳಿಸಿ ಅದರ ಮಹತ್ವವನ್ನು ವಿವರಿಸಿದರು.
ಅಮೃತ ಹೋತ್ಸವ ಸಮಿತಿ ಗೌರವಾಧ್ಯಕ್ಷ ನಾಗಭೂಷಣ ಜೋಶಿ, ಶ್ರೀ ಗುರುಕುಲ ಶಾಲೆಯ ನಿವೃತ್ತ ಶಿಕ್ಷಕ ಶ್ರೀರಾಮ ಭಟ್ ಹಾಗೂ ಕರ್ಣಾಟಕ ಬ್ಯಾಂಕ್‌ನ ಸುಮನ ಘಾಟೆ, ಮಾಳ ಅನಂದ ನಿಲಯದ ದಿನೇಶ್ ಶೆಟ್ಟಿ ಮಾತನಾಡಿದರು.ಈ ಸಂದರ್ಭ ರಾಘವೇಂದ್ರ ಎಸ್. ಭಟ್, ರಾಮ ಭಟ್ ಪೊಳಲಿ, ಅರವಿಂದ ಚಿಪ್ಳೂಣ್‌ಕರ್ ಸೇರಿದಂತೆ ಹಲವಾರು ದಾನಿಗಳನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಸತೀಶ ಚಿಪ್ಳೂಣ್‌ಕರ್, ಸ್ಮರಣ ಸಂಚಿಕೆ ಸಂಪಾದಕ ಅರವಿಂದ ಚಿಪ್ಳೂಣ್‌ಕರ್, ಕಾರ್ಕಳ ಗೋಪಾಲಕೃಷ್ಣ ಗೋರೆ, ಕಾರ್ಯಾಧ್ಯಕ್ಷ ಗಜಾನನ ಮರಾಠೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಮ ಶೇರಿಗಾರ್ ವಂದಿಸಿದರು.