ಕುಶಾಲನಗರದಲ್ಲಿ ಗೋಕುಲೊತ್ಸವ, ರಾಧಾ ಕೃಷ್ಣವೇಷ ಕಾರ್ಯಕ್ರಮ

| Published : Aug 31 2025, 02:00 AM IST

ಸಾರಾಂಶ

ವಿಶ್ವ ಹಿಂದೂ ಪರಿಷತ್‌ ಸ್ಥಾಪನಾ ದಿವಸ ಮತ್ತು ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕುಶಾಲನಗರದಲ್ಲಿ ಗೋಕುಲೋತ್ಸವ ಹಾಗೂ ರಾಧಾಕೃಷ್ಣ ವೇಷ ಕಾರ್ಯಕ್ರಮ ನಡೆಯಿತು.

ಕನ್ನಡಪರಭ ವಾರ್ತೆ ಕುಶಾಲನಗರ

ವಿಶ್ವ ಹಿಂದೂ ಪರಿಷತ್ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿವಸ ಮತ್ತು ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕುಶಾಲನಗರದಲ್ಲಿ ಗೋಕುಲೋತ್ಸವ ಹಾಗೂ ರಾಧಾ ಕೃಷ್ಣವೇಷ ಕಾರ್ಯಕ್ರಮ ನಡೆಯಿತು. ಬಾಲ ಗೋಕುಲ ಕುಶಾಲನಗರ ಸಮಸ್ತ ಭಜನಾ ಮಂಡಳಿ ರಂಗಭಾರತಿ ಕಲಾಮಂದಿರಂ ಸಹಯೋಗದೊಂದಿಗೆ ಕುಶಾಲನಗರ ಜ್ಞಾನಭಾರತಿ ಶಾಲೆಯ ಮಾರುತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಹಿಳಾ ಭಜನಾ ಮಂಡಳಿ ಪ್ರಮುಖರಾದ ಪದ್ಮ ಪುರುಷೋತ್ತಮ್ ಪಾಲ್ಗೊಂಡಿದ್ದರು.ವಿದ್ಯಾರ್ಥಿನಿ ಶ್ರೀಶಾ ದಿಕ್ಸೂಚಿ ಭಾಷಣ ಮಾಡಿದರು. ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ಅವರು ಬೌದ್ಧಿಕ್ ಪ್ರವಚನ ನೀಡಿದರು. 60 ಕ್ಕೂ ಅಧಿಕ ಮಕ್ಕಳು ರಾಧಾಕೃಷ್ಣ ವೇಷ ಧರಿಸಿ ಸಂಭ್ರಮಿಸಿದರು. ಮಕ್ಕಳಿಗೆ ಬಹುಮಾನ ವಿತರಣೆ ಮತ್ತು ನೆನಪಿನ ಕಾಣಿಕೆ ನೀಡಲಾಯಿತು.

ಈ ಸಂದರ್ಭ ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ಡಿ ಸಂತೋಷ್, ರಮೇಶ್ ಬೊಟ್ಟುಮನೆ, ಬಾಲಕೃಷ್ಣ ನಾಯ್ಡು, ಅಮೃತರಾಜ್ ಕಾರ್ಯಕ್ರಮ ಸಂಯೋಜಕರಾದ ವಿನುತ, ನವ್ಯ , ಸಂಧ್ಯಾ ನಾಣಿ, ಮಕ್ಕಳ ಪೋಷಕರು ಮತ್ತಿತರರು ಇದ್ದರು.