ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 6ರಿಂದ 10ವರ್ಷದೊಳಗಿನ ಮಕ್ಕಳಿಗೆ ಏಷ್ಯಾ ಅಂತಾರಾಷ್ಟ್ರೀಯ ಮಟ್ಟದ 10ನೇ ವರ್ಷದ ಏಷಿಯನ್ ಐಟಿಎಫ್ ಟೇಕ್ವೆಂಡೋ ಚಾಂಪಿಯನ್ ಶಿಪ್ ನಲ್ಲಿ ಶಾನ್ವಿ 1ಚಿನ್ನ, 1 ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ 44 ರಾಷ್ಟ್ರಗಳ 650 ಸ್ಪರ್ಧಿಗಳು ಭಾಗಿಯಾಗಿದ್ದರು. ಕಜಾಕಿಸ್ತಾನ, ಯುಎಇ, ಬಾಂಗ್ಲಾದೇಶ, ರಷ್ಟಾ, ಇತಿಯೋಪಿಯ, ಉಜ್ಬೇಕಿಸ್ತಾನ್, ಕೊರಿಯಾ, ಮಂಗೋಲಿಯಾ ,ಮಲೇಷಿಯಾ, ಜಪಾನ್ ಮುಂತಾದ ರಾಷ್ಟ್ರದ ಸ್ಪರ್ಧಿಗಳು ಭಾಗವಹಿಸಿದ್ದರು. ಶಾನ್ವಿಗೆ ಅಂತಿಮ ಪಂದ್ಯದಲ್ಲಿ ಭಾರತದ ಸ್ಪರ್ಧಾಳು ಎದುರಾಳಿಯಾಗಿದ್ದರು. ಪ್ಯಾಟರ್ನ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಮತ್ತು ಕೊನೆಯ ಸ್ಪಾರಿಂಗ್ ಪಂದ್ಯದಲ್ಲಿ ಶಾನ್ವಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದುಕೊಂಡರು. ರಾಮನಗರ ನೇಟಸ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಶಾನ್ವಿ ಎರಡನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ರಾಮನಗರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಸತೀಶ್ ಮತ್ತು ಚೈತ್ರ ಅವರ ಪುತ್ರಿಯಾಗಿದ್ದಾರೆ. ಇನ್ನು 10ನೇ ಏಷಿಯನ್ ಸ್ಪರ್ಧೆಯಲ್ಲಿ ಭಾಗವಹಿಸಿದ ಅತಿ ಕಿರಿಯ ಸ್ಪರ್ಧಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಹಿಂದೆ ದುಬೈನಲ್ಲಿ ನಡೆದ ಅಂತಾರಾಷ್ಟೀಯ ಮಟ್ಟದ ಟೇಕ್ವಾಂಡೊ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶಾನ್ವಿ ಚಿನ್ನ ಹಾಗೂ ಬೆಳ್ಳಿ ಪದಕ ಗಳಿಸಿದ್ದರು.
1ಚಿನ್ನ, 1 ಬೆಳ್ಳಿ ಪದಕ ಗಳಿಸಿ ಭಾರತಕ್ಕೆ ಕೀರ್ತಿ ತಂದಿರುವ ಶಾನ್ವಿ ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಕಾರಿ ದಿಗ್ವಿಜಯ್ ಬೋಡ್ಕೆ, ಅಪರ ಜಿಲ್ಲಾಕಾರಿ ಚಂದ್ರಯ್ಯ ಹಾಗೂ ಉಪ ವಿಭಾಗಾಧಿಕಾರಿ ವಿ.ಆರ್ ವಿಶ್ವನಾಥ್ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಕಾಂತರಾಜು, ನೇಟಸ್ ಶಾಲೆಯ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ತರಬೇತುದಾರರದ ಪ್ರದೀಪ್ ಮತ್ತು ಬಾಲ ರಾಜನ್ ಹಾಗೂ ಕರ್ನಾಟಕ ಟೆಕ್ವಾಂಡೋ ಆಡಳಿತ ಮಂಡಳಿ ಅವರು ಅಭಿನಂದಿಸಿದೆ.