ಕಳ್ಳನ ಬಂಧಿಸಿ ಚಿನ್ನದ ಸರ, ಮೊಬೈಲ್‌ ವಶ

| Published : Mar 25 2024, 12:52 AM IST

ಸಾರಾಂಶ

ಗೃಹ ಪ್ರವೇಶ ಕಾರ್ಯ ಮುಗಿಸಿಕೊಂಡು ಊರಿಗೆ ಹೊರಟಿದ್ದ ಮಹಿಳೆ ಬಸ್‌ ಸೀಟು ಹಿಡಿಯಲು ಹಾಕಿದ್ದ ವ್ಯಾನಿಟ್ ಬ್ಯಾಗ್ ಕಳವು ಮಾಡಿದ್ದ ಆರೋಪಿಯನ್ನು ದಾವಣಗೆರೆಯಲ್ಲಿ ಬಂಧಿಸಲಾಗಿದೆ. ಆತನಿಂದ ₹1.80 ಲಕ್ಷ ಮೌಲ್ಯದ 35 ಗ್ರಾಂ ಚಿನ್ನದ ಲಾಂಗ್ ಚೈನ್‌, ವಿವೋ ವೈ 12 ಮೊಬೈಲ್ ಜಪ್ತಿ ಮಾಡಲಾಗಿದೆ.

ದಾವಣಗೆರೆ: ಗೃಹ ಪ್ರವೇಶ ಕಾರ್ಯ ಮುಗಿಸಿಕೊಂಡು ಊರಿಗೆ ಹೊರಟಿದ್ದ ಮಹಿಳೆ ಬಸ್‌ ಸೀಟು ಹಿಡಿಯಲು ಹಾಕಿದ್ದ ವ್ಯಾನಿಟ್ ಬ್ಯಾಗ್ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಆತನಿಂದ ₹1.80 ಲಕ್ಷ ಮೌಲ್ಯದ 35 ಗ್ರಾಂ ಚಿನ್ನದ ಲಾಂಗ್ ಚೈನ್‌, ವಿವೋ ವೈ 12 ಮೊಬೈಲ್ ಜಪ್ತಿ ಮಾಡಲಾಗಿದೆ.

ವಿಜಯ ನಗರ ಜಿಲ್ಲೆ ಹರಪನಹಳ್ಳಿ ವಾಸಿ ಕೆ.ಸಿ.ಶಿವಕುಮಾರ (56) ಬಂಧಿತ ಆರೋಪಿ. ದಾವಣಗೆರೆ ಜಿಲ್ಲೆ ಚನ್ನಗಿರಿ ಪಟ್ಟಣದ ಮಮತಾ ಬಸವರಾಜಪ್ಪ ನ.24ರಂದು ದಾವಣಗೆರೆ ತಾಲೂಕು ಎಚ್.ಕಲ್ಪನಹಳ್ಳಿ ಗ್ರಾಮದಲ್ಲಿ ಸಂಬಂಧಿಯ ಗೃಹ ಪ್ರವೇಶಕ್ಕೆ ಬಂದು, ಸಂಜೆ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣಕ್ಕೆ ಊರಿಗೆ ವಾಪಸ್‌ ಹೊರಟಿದ್ದರು. ಬಸ್ಸು ಹತ್ತಲು ಜನದಟ್ಟಣೆ ಇದ್ದುದರಿಂದ ಮಮತಾ ಸೀಟು ಹಿಡಿಯಲೆಂದು ತಮ್ಮ ವ್ಯಾನಿಟಿ ಬ್ಯಾಗ್‌ ಸೀಟ್ ಮೇಲೆ ಹಾಕಿದ್ದರು. ಬಳಿಕ ಪರಿಶೀಲಿಸಿದಾಗ ಅದರಲ್ಲಿದ್ದ ಮೊಬೈಲ್, ಚಿನ್ನದ ಲಾಂಗ್ ಚೈನ್ ಕಳವಾಗಿತ್ತು. ಈ ಬಗ್ಗೆ ಬಡಾವಣೆ ಪೊಲೀಸ್ ಠಾಣೆಗೆ ಮಮತಾ ದೂರು ನೀಡಿದ್ದರು.

ಆರೋಪಿ ಪತ್ತೆದಾಗಿ ಎಎಸ್‌ಪಿಗಳಾದ ಸಂತೋಷ ಎಂ.ವಿಜಯಕುಮಾರ, ಜಿ.ಮಂಜುನಾಥ, ಗ್ರಾಮಾಂತರ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಎಂ.ಆರ್. ಚೌಬೆ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆಗೆ ಇಳಿದಿತ್ತು.

ಮಾ.24ರಂದು ಬೆಳಗ್ಗೆ ದಾವಣಗೆರೆ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದಲ್ಲಿ ಬಾತ್ಮಿದಾರರ ಮಾಹಿತಿ ಮೇರೆ ಆರೋಪಿ ಹರಪನಹಳ್ಳಿಯ ಕೆ.ಸಿ.ಶಿವಕುಮಾರನನ್ನು ಬಂಧಿಸಲಾಯಿತು. ವಿಚಾರಣೆಗೆ ಒಳಪಡಿಸಿದಾಗ 55 ಗ್ರಾಂ ಚಿನ್ನದ ಲಾಂಗ್ ಚೈನ್ ಹಾಗೂ ಮೊಬೈಲ್ ಕಳವು ಪ್ರಕರಣ ಬಯಲಾಗಿದೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಪಿಎಸ್ಐ ರಮೇಶ, ಎಎಸ್ಐ ರಾಜಪ್ಪ, ಅರುಣಕುಮಾರ, ಕೆಂಚಪ್ಪ, ಸೈಯದ್ ಅಲಿ, ವಿಶ್ವಕುಮಾರ, ಹನುಮಂತಪ್ಪ, ಎಚ್.ಗೀತಾ ಅವರನ್ನು ಒಳಗೊಂಡ ತಂಡದ ಕಾರ್ಯಕ್ಕೆ ಎಸ್‌ಪಿ ಉಮಾ ಪ್ರಶಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- - - -24ಕೆಡಿವಿಜಿ7: ಚಿನ್ನದ ಲಾಂಗ್ ಚೈನ್ , ಮೊಬೈಲ್.