50 ವರ್ಷಗಳ ಬಳಿಕ ಸುವರ್ಣ ಮಹೋತ್ಸವ: ಡಾ.ಎಚ್.ಎಲ್.ನಾಗರಾಜು

| Published : Aug 19 2024, 12:51 AM IST

ಸಾರಾಂಶ

ಕನ್ನಡ ನಾಡು, ನುಡಿ ಭಾಷೆಗೆ ತನ್ನದೆಯಾದ ಶ್ರೀಮಂತಿಕೆ ಇದ್ದು ಕನ್ನಡಿಗರೆಲ್ಲರೂ ಒಗ್ಗಟ್ಟಿನಿಂದ ಕನ್ನಡ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ಹಾಗೂ ಬೆಳೆಸಿಕೊಂಡು ಹೋಗಲು ಶ್ರಮಿಸಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ರಥಯಾತ್ರೆ ಬಳಿಕ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಕರ್ನಾಟಕ ಏಕೀಕರಣಗೊಂಡ 50 ವರ್ಷಗಳ ಬಳಿಕ ಸುವರ್ಣ ಮಹೋತ್ಸವ ಆಚರಿಸಲಾಗುತ್ತಿದೆ. ಕನ್ನಡಿಗರಲ್ಲಿ ಕನ್ನಡಾಭಿಮಾನದ ಜತೆಗೆ ಕನ್ನಡ ತನವನ್ನು ಬೆಳಸುವ ಉದ್ದೇಶದಿಂದ ಸರ್ಕಾರ ಕನ್ನಡ ಜ್ಯೋತಿ ರಥಯಾತ್ರೆಯನ್ನು ಹಮ್ಮಿಕೊಂಡಿದೆ ಎಂದರು.

ಕನ್ನಡ ನಾಡು, ನುಡಿ ಭಾಷೆಗೆ ತನ್ನದೆಯಾದ ಶ್ರೀಮಂತಿಕೆ ಇದ್ದು ಕನ್ನಡಿಗರೆಲ್ಲರೂ ಒಗ್ಗಟ್ಟಿನಿಂದ ಕನ್ನಡ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ಹಾಗೂ ಬೆಳೆಸಿಕೊಂಡು ಹೋಗಲು ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.

ಪೂಜೆ ಹೊತ್ತು ಕುಣಿದ ಎಡಿಸಿ:

ರಥಯಾತ್ರೆ ವೇಳೆ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಪೂಜಾ ಕುಣಿತ ಮೆರವಣಿಗೆ ಹೊತ್ತು ಆಕರ್ಷಕ ನೃತ್ಯ ಪ್ರದರ್ಶನ ಮಾಡಿದರು. ಜಿಲ್ಲೆಯ ಗಡಿಭಾಗದಲ್ಲಿ ರಥಯಾತ್ರೆಯನ್ನು ಸ್ವಾಗತಿಸಿದ ಬಳಿಕ ಎಡಿಸಿ ಪೂಜಾ ಕುಣಿತ ಮೆರವಣಿಗೆ ಹೊತ್ತು ನೃತ್ಯ ಮಾಡಿದರು ಇದಕ್ಕೆ ಸ್ಥಳದಲ್ಲಿ ನೆರೆದಿದ್ದ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ಅಭಿಮಾನಿಗಳು ನಾಗರಾಜು ಅವರ ನೃತ್ಯ ಪ್ರದರ್ಶನಕ್ಕೆ ಸಾಥ್ ನೀಡಿ ಹೆಜ್ಜೆ ಹಾಕಿದರು.ಬೇಡಿಕೆಗಳ ಈಡೇರಿಕೆಗಾಗಿ ನಾಳೆ ಮ್ಯಾರಥಾನ್

ಕನ್ನಡಪ್ರಭ ವಾರ್ತೆ ಮಂಡ್ಯವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆ.೨೦ರಂದು ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ವ್ಯಾರಥಾನ್ ಆಯೋಜಿಸಲಾಗಿದೆ ಎಂದು ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಎಂ.ಸಿದ್ದರಾಜು ಹೇಳಿದರು.

ಡಿ.ದೇವರಾಜ ಅರಸು ಜನ್ಮದಿನದ ಅಂಗವಾಗಿ ಮಂಡ್ಯ ನಗರ ಮತ್ತು ಜಿಲ್ಲೆ ಶ್ರಮಿಕ ನಗರದ ಜನರಿಗೆ ಭೂಮಿ ಮತ್ತು ವಸತಿಗೆ ಆಗ್ರಹ, ಮಹಿಳೆಯರ ಸುರಕ್ಷತೆಗಾಗಿ, ಯುವಜನತೆಯ ಭರವಸೆಯ ಭವಿಷ್ಯಕ್ಕಾಗಿ ಒತ್ತಾಯಿಸಿ ಹೋರಾಟ ಸಮಿತಿ ಮತ್ತು ಕರ್ನಾಟಕ ಜನಶಕ್ತಿ, ಮಹಿಳಾ ಮುನ್ನಡೆ, ಜಿಲ್ಲಾ ಶ್ರಮಿಕನಗರ ನಿವಾಸಿಗಳ ಒಕ್ಕೂಟ, ಶ್ರಮಿಕಶಕ್ತಿ ವಿದ್ಯಾರ್ಥಿ ಸಂಘಟನೆ ಸಹಯೋಗದಲ್ಲಿ ಸರ್ಕಾರದ ಗಮನ ಸೆಳೆಯಲು ವ್ಯಾರಥಾನ್ ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.ಯುವ ಜನರಿಗೆ ಉದ್ಯೋಗ ಹಾಗೂ ಸ್ವಯಂ ಉದ್ಯಮಿಯಾಗಲು ಸರ್ಕಾರ ನೆರವು ನೀಡುವ ನಿಟ್ಟಿನಲ್ಲಿ ವಿಶೇಷ ಯೋಜನೆ ರೂಪಿಸಬೇಕು. ಜಿಲ್ಲೆಯಲ್ಲಿ ಎಲ್ಲ ಶ್ರಮಿಕನಗರದಲ್ಲಿ ಹೆಣ್ಣು ಭ್ರೂಣ ಹತ್ಯೆ ಆಗದಂತೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಶ್ರಮಿಕನಗರ ನಿವಾಸಿಗಳ ಸಮಸ್ಯೆ ಬಗೆಹರಿಸಬೇಕು ಸೇರಿದಂತೆ ೯ ಬೇಡಿಕೆ ಈಡೇರಿಕೆಗೆ ಒತ್ತಾಯಿಸಲಾಗುವುದು ಎಂದು ವಿವರಿಸಿದರು. ವಿವಿಧ ಸಂಘಟನೆಗಳ ಜಿ.ಪೂರ್ಣಿಮಾ, ಶಿಲ್ಪಾ, ಪ್ರಕಾಶ್, ಅಂಜಲಿ, ನಿಂಗಮ್ಮ, ಲತಾ, ಗಾಯತ್ರಿ ಗೋಷ್ಠಿಯಲ್ಲಿದ್ದರು.