ಬೆಳ್ತಂಗಡಿ: ಅಳದಂಗಡಿ ಹಾಲು ಉತ್ಪಾದಕರ ಸಹಕಾರ ಸಂಘದ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭ ಗುರುವಾರ ಅಳದಂಗಡಿಯಲ್ಲಿ ಅದ್ದೂರಿಯಾಗಿ ಜರುಗಿತು. ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಉದ್ಘಾಟಿಸಿದರು.
ಒಕ್ಕೂಟದಲ್ಲಿ ದಿನಕ್ಕೆ 4.65 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಗ್ರಾಹಕರಿಗೆ ಹಾಲು ಸೇರಿದಂತೆ ಗುಣಮಟ್ಟದ ಹಾಲಿನ ಉತ್ಪನ್ನಗಳನ್ನು ನೀಡಿ, ಗ್ರಾಹಕರಿಗೆ ಅತಿ ಹೆಚ್ಚಿನ ದರ ಕೊಡುವ ವ್ಯವಸ್ಥೆ ಒಕ್ಕೂಟ ಮಾಡುತ್ತಿದೆ ಎಂದು ಹೇಳಿದರು. ಸರಕಾರದ ಅನುದಾನ ಸೇರಿದಂತೆ ಗ್ರಾಹಕರಿಗೆ ಈಗ ಒಂದು ಲೀಟರ್ ಗೆ 47 ರು. ದರ ಸಿಗುತ್ತದೆ. ಸ್ವಾವಲಂಬನೆಯ ಜೀವನಕ್ಕೆ ಹೈನುಗಾರಿಕೆ ಪೂರಕವಾಗಿದೆ ಎಂದರು.ಸಂತ ಪೀಟರ್ ಕ್ಷೇವರ್ ಚರ್ಚ್ ಅಳದಂಗಡಿ ಧರ್ಮಗುರು ರೇ| ಫಾ। ಎಲಿಯಾಸ್ ಡಿಸೋಜ ಆಶೀರ್ವಚನ ನೀಡಿ, ಅಳದಂಗಡಿ ಸಂಘ ಉತ್ತಮ ಚಟುವಟಿಕೆ ಮೂಲಕ ಮಾದರಿಯಾಗಿ ನಡೆಯುತ್ತಿದ್ದು, ಗ್ರಾಮದ ಜನರ ಸಹಕಾರ ಅನನ್ಯವಾಗಿದೆ ಎಂದರು.ಅಳದಂಗಡಿ ಅರಮನೆಯ ಡಾ. ಪದ್ಮ ಪ್ರಸಾದ್ ಅಜಿಲ ಅವರು ಉತ್ತಮ ಹೈನುಗಾರರನ್ನು, ಮಾಜಿ ಅಧ್ಯಕ್ಷರನ್ನುಸನ್ಮಾನಿಸಿದರು. ಸಂಘದ ಅಧ್ಯಕ್ಷ ಪ್ರಶಾಂತ್ ವೇಗಸ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಕಂಬಳ ಓಟದ ಸಾಧಕ ಸತೀಶ್ ದೇವಾಡಿಗ ಅವರನ್ನು ಸನ್ಮಾನಿಸಿದರು.
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಎಚ್. ಪ್ರಭಾಕರ, ಕಾಶಿಪಟ್ನ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರಿನ ನಿರ್ದೇಶಕ ಸಹಕಾರ ರತ್ನ ಸತೀಶ್ ಕೆ. ಕಾಶಿಪಟ್ಟ, ಅಳದಂಗಡಿಯ ಉದ್ಯಮಿಗಳಾದ ಸತೀಶ್ ಪೂಜಾರಿ, ನಡಾಯಿ ಭಾಗವಹಿಸಿದ್ದರು.ಕೆ.ಎಂ.ಎಫ್ ಉಪ ವ್ಯವಸ್ಥಾಪಕ ಸತೀಶ್ ರಾವ್, ವಿಸ್ತರಣಾಧಿಕಾರಿ ರಾಜೇಶ್ ಕಾಮತ್, ಅಳಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ, ಅಳದಂಗಡಿ ಹಾ.ಉ. ಸಹಕಾರಿ ಸಂಘದ ಉಪಾಧ್ಯಕ್ಷ ಅಶೋಕ್ ಸುವರ್ಣ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಲ್ಪ್ರೆಡ್ ಫರ್ನಾಂಡಿಸ್, ನಿರ್ದೇಶಕರಾದ ಪ್ರಸಾದ್ ಪಿಂಟೋ, ಗಣೇಶ್ ದೇವಾಡಿಗ, ಲ್ಯಾನ್ಸಿ ರೊಡ್ರಿಗಸ್, ಧರ್ನಪ್ಪ ಪೂಜಾರಿ, ಸುಧೀರ್, ಹರೀಶ್ ಪೂಜಾರಿ, ಸುರೇಶ್ ಪೂಜಾರಿ, ಸುಂದರ್, ಸುನಿಲ್, ಪುಷ್ಪಾವತಿ, ಮಲ್ಲಿಕಾ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಪ್ರಶಾಂತ್ ವೇಗಸ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಲ್ಪ್ರೆಡ್ ಫರ್ನಾಂಡಿಸ್ ಸಂಘದ ಸಾಧನೆಯ ವರದಿ ವಾಚಿಸಿದರು. ಶಿಕ್ಷಕ ಅಜಿತ್ ಕುಮಾರ್ ನಿರೂಪಿಸಿದರು. ನಿದೇ೯ಶಕ ಸತೀಶ್ ಎಸ್.ಎಂ. ವಂದಿಸಿದರು.