ಕುಂದಾಪುರ ಶಿಕ್ಷಣ ಸಂಘದ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗವಹಿಸಿ ಮಾತನಾಡಿದರು.

ಕುಂದಾಪುರ ಶಿಕ್ಷಣ ಸಂಘದ ಸುವರ್ಣ ಮಹೋತ್ಸವ ಸಮಾರೋಪ

ಕುಂದಾಪುರ: ಸಮಾಜದಲ್ಲಿ ಇಂದು ನೈತಿಕತೆ ಬೆಳೆಸುವ, ಆಧುನಿಕ ಜ್ಞಾನ - ಮಾನವೀಯ ಮೌಲ್ಯಗಳನ್ನು ಸಂಯೋಜಿಸುವ, ಧರ್ಮ - ಸಂಸ್ಕೃತಿಯನ್ನು ಸಂರಕ್ಷಿಸುವ, ರಾಷ್ಟ್ರದ ಏಕತೆ - ಸಮಗ್ರತೆಯನ್ನು ಹಾಗೂ ಸಮಾನತೆ - ಸಾಮರಸ್ಯವನ್ನು ಕಾಪಾಡುವ ಶಿಕ್ಷಣದ ಅವಶ್ಯಕತೆಯಿದೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ.

ಅವರು ಇಲ್ಲಿನ ಕುಂದಾಪುರ ಶಿಕ್ಷಣ ಸಂಘದ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಾಚೀನ ಕಾಲದಲ್ಲಿ, ನಮ್ಮ ದೇಶವು ತನ್ನ ಜ್ಞಾನ, ವಿಜ್ಞಾನ ಮತ್ತು ಬೌದ್ಧಿಕತೆಯಿಂದಾಗಿ ವಿಶ್ವನಾಯಕನ ಸ್ಥಾನವನ್ನು ಹೊಂದಿತ್ತು. ಇದನ್ನು ಮರಳಿ ಪಡೆಯಲು, ನಮ್ಮ ಯುವಕರ ಕೌಶಲ್ಯ, ಪ್ರತಿಭೆ ಮತ್ತು ಶಕ್ತಿಯನ್ನು ಸಂಘಟಿಸಲು ಸಕ್ರಿಯ ಪ್ರಯತ್ನಗಳನ್ನು ಮಾಡಬೇಕು ಎಂದರು.

ಅಭಿವೃದ್ಧಿ ಹೊಂದುವುದರ ಜೊತೆಗೆ ಸಮಾನತೆ, ಸಾಮರಸ್ಯ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಯುವಪೀಳಿಗೆಯಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ಇದರಲ್ಲಿ ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳ ಪಾತ್ರ ನಿರ್ಣಾಯಕವಾಗಿರುತ್ತದೆ ಎಂದು ಹೇಳಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇ ಗೌಡ ಮಾತನಾಡಿದರು.

ಆಧ್ಯಾತ್ಮ ಚಿಂತಕ ಡಾ.ಬಾಲಕೃಷ್ಣ ಗುರೂಜಿ ತಿರುಪತಿ ಶುಭಾಶಂಸನೆಗೈದರು. ಕುಂದಾಪುರ ಎಜುಕೇಷನ್ ಸೊಸೈಟಿಯ ಅಧ್ಯಕ್ಷರಾದ ಬಿ.ಎಂ.ಸುಕುಮಾರ ಶೆಟ್ಟಿ ಅವರು ರಾಜ್ಯಪಾಲರನ್ನು ಗೌರವಿಸಿದರು.ಸಂಸ್ಥೆಯ ಪ್ರಾಂಶುಪಾಲ ಡಾ. ಉಮೇಶ್ ಶೆಟ್ಟಿ ಕೊತ್ತಾಡಿ ಅವರು, ಕುಂದಾಪುರ ಎಜುಕೇಷನ್ ಸೊಸೈಟಿ ಬೆಳೆದು ಬಂದ ಬಗೆ ವಿವರಿಸಿದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಅರ್ಚಕ ಮೂರ್ತಿ ಕಾಳಿದಾಸ್ ಭಟ್, ಕುಂದಾಪುರ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಆರ್. ಎನ್. ಶೆಟ್ಟಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನವೀನ್ ಕುಮಾರ್ ಶೆಟ್ಟಿ, ವಿಕೆಆರ್ ಆಚಾರ್ಯ ಶಾಲೆಯ ಪ್ರಾಂಶುಪಾಲೆ ಡಾ. ಚಿಂತನಾ ರಾಜೇಶ್ ಇದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ವೀಣಾ ಭಟ್ ಸ್ವಾಗತಿಸಿದರು, ಉಪನ್ಯಾಸಕ ರಕ್ಷಿತ್ ರಾವ್ ಗುಜ್ಜಾಡಿ ಪರಿಚಯಿಸಿದರು, ಉಪನ್ಯಾಸಕಿ ಪ್ರಥ್ವಿಶ್ರೀ ಶೆಟ್ಟಿ ನಿರೂಪಿಸಿದರು,