ಶ್ರೀ ವೆಂಕಟ್ರಮಣ ದೇವಸ್ಥಾನಕ್ಕೆ ಸ್ವರ್ಣ ಲಾಲ್ಕಿಯ ಭವ್ಯ ಪುರಪ್ರವೇಶ

| Published : Feb 03 2024, 01:48 AM IST

ಶ್ರೀ ವೆಂಕಟ್ರಮಣ ದೇವಸ್ಥಾನಕ್ಕೆ ಸ್ವರ್ಣ ಲಾಲ್ಕಿಯ ಭವ್ಯ ಪುರಪ್ರವೇಶ
Share this Article
  • FB
  • TW
  • Linkdin
  • Email

ಸಾರಾಂಶ

ಸುಮಾರು ೩೫ ಕೆಜಿ ಬಂಗಾರ, ೭೦ ಕೆಜಿ ಬೆಳ್ಳಿಯಿಂದ ನಿರ್ಮಾಣ ಮಾಡಲಾದ ಈ ಸ್ವರ್ಣ ಪಲ್ಲಕಿಯನ್ನು ಬ್ರಹ್ಮರಥೋತ್ಸವದ ಹಿಂದಿನ ದಿನ ನಡೆಯುವ ಶ್ರೀ ದೇವರ ಮೃಗಬೇಟೆ ಉತ್ಸವದಂದು ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಸಮರ್ಪಿಸಲಾಗುವುದು.

ಕನ್ನಡಪ್ರಭ ವಾರ್ತೆ ಮಂಗಳೂರು

ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ದೇವರ ಮಹೋತ್ಸವ ಕಾರ್ಯಕ್ರಮಕ್ಕೆ ನೂತನವಾಗಿ ನಿರ್ಮಿಸಲಾದ ಸ್ವರ್ಣ ಲಾಲ್ಕಿಯ ಭವ್ಯ ಪುರ ಪ್ರವೇಶ ಕಾರ್ಯಕ್ರಮ ಶುಕ್ರವಾರ ನಡೆಯಿತು. ನಗರದ ಸಂಘನಿಕೇತನದಿಂದ ಹೊರಟ ಲಾಲ್ಕಿಯನ್ನು ಮೆರವಣಿಗೆಯಲ್ಲಿ ಮಣ್ಣಗುಡ್ಡ , ಕುದ್ರೋಳಿ , ರಥಬೀದಿ ಮೂಲಕ ಶ್ರೀ ದೇವಳಕ್ಕೆ ವಿಜೃಂಭಣೆಯಿಂದ ತರಲಾಯಿತು.ಸುಮಾರು ೩೫ ಕೆಜಿ ಬಂಗಾರ, ೭೦ ಕೆಜಿ ಬೆಳ್ಳಿಯಿಂದ ನಿರ್ಮಾಣ ಮಾಡಲಾದ ಈ ಸ್ವರ್ಣ ಪಲ್ಲಕಿಯನ್ನು ಬ್ರಹ್ಮರಥೋತ್ಸವದ ಹಿಂದಿನ ದಿನ ನಡೆಯುವ ಶ್ರೀ ದೇವರ ಮೃಗಬೇಟೆ ಉತ್ಸವದಂದು ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಸಮರ್ಪಿಸಲಾಗುವುದು.ಈ ಸ್ವರ್ಣ ಲಾಲ್ಕಿಯನ್ನು ಸೇವಾರೂಪದಲ್ಲಿ ಕೊಡುಗೈ ದಾನಿ ಡಾ. ಪಿ. ದಯಾನಂದ ಪೈ ಕುಟುಂಬಸ್ಥರು ಹಾಗೂ ಹತ್ತು ಸಮಸ್ತರ ಸೇವಾರೂಪದಲ್ಲಿ ನೀಡಲಾದ ಸ್ವರ್ಣ ಮತ್ತು ರಜತದಿಂದ ಸಮರ್ಪಿಸಲಾಗಿದೆ. ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ್‌ ಕಾಮತ್‌, ದಾನಿಗಳಾದ ಡಾ. ಪಿ. ದಯಾನಂದ ಪೈ, ಮಾಲತಿ ದಯಾನಂದ ಪೈ, ದೇವಳದ ಆಡಳಿತ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ, ಸಾಹುಕಾರ್ ಕಿರಣ್ ಪೈ, ಸತೀಶ್ ಪ್ರಭು, ಕೆ. ಗಣೇಶ್ ಕಾಮತ್, ಎಂ. ಜಗನ್ನಾಥ್ ಕಾಮತ್, ತಂತ್ರಿಗಳಾದ ಪಂಡಿತ್ ನರಸಿಂಹ ಆಚಾರ್ಯ, ಪಂಡಿತ್ ಕಾಶೀನಾಥ್ ಆಚಾರ್ಯ, ಉದ್ಯಮಿ ಸುರೇಶ ವಿ. ಕಾಮತ್ ಮತ್ತಿತರರು ಇದ್ದರು.