ಸಾರಾಂಶ
ಕಿನ್ನಿಗೋಳಿ ಸಮೀಪದ ಗೋಳಿಜೋರದ ಶಶೀಂದ್ರ ರಂಗವೇದಿಕೆಯಲ್ಲಿ ನಡೆದ ಗೋಳಿಜೋರ ಶ್ರೀ ರಾಮ ಯುವಕ ವೃಂದದ ೩೯ ನೇ ವಾರ್ಷಿಕೋತ್ಸವ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಸಂಘ, ಸಂಸ್ಥೆಗಳು ಸಮಾಜಮುಖಿ ಚಿಂತನೆಯ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ದ.ಕ. ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಐಕಳ ಬಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದ್ದಾರೆ.ಕಿನ್ನಿಗೋಳಿ ಸಮೀಪದ ಗೋಳಿಜೋರದ ಶಶೀಂದ್ರ ರಂಗವೇದಿಕೆಯಲ್ಲಿ ನಡೆದ ಗೋಳಿಜೋರ ಶ್ರೀ ರಾಮ ಯುವಕ ವೃಂದದ ೩೯ ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಉದ್ಯಮಿ ಸಂತೋಷ್ ಕುಮಾರ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ ಕಾರ್ಯಕ್ರಮ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಸಾಧಕಿ ಶ್ರೇಯಾ ಕುಜಿಂಗಿರಿ ಅವರನ್ನು ಸಮ್ಮಾನಿಸಲಾಯಿತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ,ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್, ಬೆಂಗಳೂರು ಉದ್ಯಮಿ ವೆಂಕಟೇಶ ಶೆಟ್ಟಿ, ಮೋಹಿನಿ ಕಲಾ ಸಂಪದದ ಗಂಗಾಧರ ಡಿ. ಶೆಟ್ಟಿಗಾರ್, ಬರ್ಕೆ ಮನೆ ಜಗನ್ನಾಥ ಸುವರ್ಣ , ಸಮಾಜ ಸೇವಕಿ ಪದ್ಮಿನಿ ವಸಂತ್ , ಗೋಳಿಜೋರ ಹರಿಹರ ಶ್ರೀ ರಾಮ ಭಜನಾ ಮಂಡಳಿಯ ಅಧ್ಯಕ್ಷ ರಘು ಗೋಳಿಜೋರ, ಅಂಗನವಾಡಿ ಶಿಕ್ಷಕಿ ಜೂಲಿಯಾನ ಬರ್ಬೊಜಾ, ಸಂಸ್ಥೆಯ ಗೌರವ ಸಲಹೆಗಾರ ಸುಧಾಕರ ಶೆಟ್ಟಿ ಕಾರ್ಯದರ್ಶಿ ನವನೀತ್ ಗೋಳಿಜೋರ ಮತ್ತಿತರರು ಇದ್ದರು.
ಶಿಕ್ಷಕ ಉಮೇಶ್ ನೀಲಾವರ ಅಭಿನಂದನಾ ಭಾಷಣ ಮಾಡಿದರು. ಸಂಸ್ಥೆಯ ಅಧ್ಯಕ್ಷ ಹರಿಕೃಷ್ಣ ಗೋಳಿಜೋರ ವಂದಿಸಿದರು. ಮನೋಜ್ ಗೋಳಿಜೋರ ಸ್ವಾಗತಿಸಿದರು. ಸಂತೋಷ್ ನಂಬಿಯಾರ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು.