ಉಡುಪಿ: ನಮ್ಮ ಪ್ರಾಮಾಣಿಕ ಆದಾಯದ ಐದನೇ ಒಂದಂಶ ಮಾತ್ರ ಸ್ವಇಚ್ಚೆ ಪೂರೈಕೆಗೆ, ಉಳಿದ ಭಾಗ ಧರ್ಮ ಕಾರ್ಯ, ದೇವ ಕಾರ್ಯ, ಸತ್ಪಾತ್ರರಿಗೆ ದಾನ, ತನ್ನವರಿಗಾಗಿ ವಿನಿಯೋಗ ಮಾಡಬೇಕು. ಊರಿಗೆ ಒಳ್ಳೆಯದಾಗುವ ಕಾರ್ಯವೇ ದೇಶ ಸೇವೆ. ಒಳ್ಳೆಯ ಮನಸ್ಸುಗಳು ಸೇರಿದಾಗ ಉತ್ತಮ ಕಾರ್ಯಗಳು ನಡೆಯುತ್ತವೆ ಎಂದು ಉಡುಪಿ ಶ್ರೀ ಅದಮಾರು ಮಠದ ಕಿರಿಯ ಯತಿವರ್ಯರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ನುಡಿದರು. ವಿಶ್ವ ಹಿಂದೂ ಪರಿಷತ್, ಭಜರಂಗ ದಳ, ಶ್ರೀರಾಮ ಸೇವಾ ಟ್ರಸ್ಟ್ ಮತ್ತು ಉಡುಪಿ ಅದಮಾರು ಮಠದ ವತಿಯಿಂದ ‘ಬಡವರಿಗಾಗಿ ಸೂರು’ ಸಂಕಲ್ಪದಡಿಯಲ್ಲಿ ಮಣಿಪಾಲ ನೆಹರು ನಗರದ ಕಾಲೊನಿಯ ಉಪೇಕ್ಷಿತ ಬಂದು ರೇಣುಕಾ ಕುಟುಂಬಕ್ಕೆ ನೂತನವಾಗಿ ನಿರ್ಮಿಸಿದ ಮನೆಯ ಹಸ್ತಾಂತರ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ, ಪ್ರತಿ ಮನೆಯಲ್ಲೂ ಎಲ್ಲರೂ ಜೊತೆಯಾಗಿ ನಿತ್ಯ ಪ್ರಾರ್ಥನೆ, ಭಜನೆ ನಡೆಯಬೇಕು. ಮನೆಯೇ ಸಂಸ್ಕಾರದ ಕೇಂದ್ರ ಬಿಂದು ಎಂದರು.

ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಕಾರ್‍ಯದರ್ಶಿ ದಿನೇಶ್ ಮೆಂಡನ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಿಶ್ವ ಹಿಂದು ಪರಿಷತ್‌ ಜಿಲ್ಲಾ ಸಹ ಕಾರ್‍ಯದರ್ಶಿ ವಿಖ್ಯಾತ್ ಭಟ್ ಸ್ವಾಗತಿಸಿದರು.

ವಿಹಿಂಪ ಪ್ರಾಂತ ಸಹ ಕಾರ್‍ಯದರ್ಶಿ ಶರಣ್ ಪಂಪ್ವೆಲ್, ಪ್ರಾಂತ ಗೋರಕ್ಷಾ ಪ್ರಮುಖ್ ಸುನಿಲ್ ಕೆ.ಆರ್., ಜಿಲ್ಲಾ ಅಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ಭಜರಂಗ ದಳ ಪ್ರಾಂತ ಸಾಪ್ತಾಹಿಕ ಮಿಲನ್ ಪ್ರಮುಖ್ ಪುನಿತ್ ಅತ್ತಾವರ, ಪ್ರಮುಖರಾದ ರಾಜೇಂದ್ರ ಶೆಣೈ, ಮನೋಜ್ ಮಲ್ಪೆ, ರಾಕೇಶ್ ಮಲ್ಪೆ, ಪ್ರಾಣೇಶ್ ಪರ್ಕಳ, ಪ್ರಕಾಶ್ ಮಲ್ಪೆ, ಸುಧಾಕರ ಆಚಾರ್ಯ, ದಿಲೇಶ್ ಶೆಟ್ಟಿ, ಪುರಂದರ ಕೊಟ್ಯಾನ್, ದೀಪಕ್ ಕೊಟ್ಯಾನ್, ಜಯಪ್ರಕಾಶ್ ಪ್ರಭು ಮಟ್ಟಾರು, ಆನಂದ, ಮಾಜಿ ನಗರಸಭೆ ಸದಸ್ಯೆ ವಿಜಯಲಕ್ಷ್ಮೀ, ಅದಮಾರು ಮಠದ ಗೋವಿಂದರಾಜ್ ಮತ್ತಿತರರು ಉಪಸ್ಥಿತರಿದ್ದರು.ಸಸ