ನರಗುಂದ: ಸ್ಥಳೀಯ ಸಂಸ್ಥೆಯ ಚುನಾವಣೆಗಳು ಮತ್ತು ವಿಧಾನಸಭೆ ಚುನಾವಣೆ ಯಾವುದೇ ಕ್ಷಣದಲ್ಲೂ ಬರಬಹುದು. ಮತದಾರರ ಪಟ್ಟಿಯ ಪರಿಷ್ಕರಣೆ ಬಹಳ ಮಹತ್ವ ಪಡೆದಿದೆ. ಹೀಗಾಗಿ ಚುನಾವಣಾ ಸೇನಾನಿಗಳಾದ ಬಿಎಲ್ಎ- 2 ಹಾಗೂ ಬೂತ್ ಮಟ್ಟದ ಕಾರ್ಯಕರ್ತರು ಜಾಗೃತೆಯಿಂದ ಮತದಾರರ ಪಟ್ಟಿ ಪರಿಷ್ಕರಣೆ ಕೆಲಸ ಮಾಡಬೇಕೆಂದು ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.ಶನಿವಾರ ಪಟ್ಟಣದ ನರಗುಂದ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಕಾರ್ಯಾಲಯದಲ್ಲಿ ಜರುಗಿದ ನರಗುಂದ, ಹೊಳೆಆಲೂರ ಮತ್ತು ಲಕ್ಕುಂಡಿ ಮಂಡಲಗಳ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಬಿಎಲ್ಎ- 2 ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮತದಾರರ ಪಟ್ಟಿಯಲ್ಲಿ ಎಲ್ಲೆಲ್ಲಿಯೋ ಹೆಸರುಗಳು ಸೇರ್ಪಡೆ ಆಗಿವೆ. ಪ್ರಸ್ತುತ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ನಡೆದಿದೆ. ಸಧ್ಯ ಕಾಂಗ್ರೆಸ್‌ನ 75 ಶಾಸಕರು ಬಿಜೆಪಿ ಸೇರಲಿದ್ದಾರೆ. ಸುಪ್ರೀಂಕೋರ್ಟ್ ಆದೇಶದಂತೆ ಮತದಾರರ ಪಟ್ಟಿ ಪರಿಷ್ಕರಣೆ ಏ.1ರಿಂದ ಶೀಘ್ರ ನಡೆಯಲಿದೆ ಎಂದರು.ಉಮೇಶಗೌಡ ಪಾಟೀಲ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ಬಹಳ ಅವಶ್ಯವಿದೆ. 3 ತಿಂಗಳವರೆಗೆ ನಡೆಯಲಿರುವ ಪರಿಷ್ಕರಣೆ ಬಗ್ಗೆ ಕಾರ್ಯಕರ್ತರು ಹೆಚ್ಚು ಆಸಕ್ತಿ ಮತ್ತು ಜಾಗ್ರತೆ ವಹಿಸಬೇಕು. ಈ ಪಟ್ಟಿ ಎಲ್ಲ ಚುನಾವಣೆಗೂ ಅನ್ವಯಿಸಲಿದೆ. ಮತದಾರರ ಪಟ್ಟಿ ಪರಿಷ್ಕರಣೆಯಿಂದ ಬಿಹಾರದಲ್ಲಿ ಬಿಜೆಪಿ 2/3 ಬಹುಮತ ಪಡೆದಿದೆ. ಸ್ವಹಿತಾಸಕ್ತಿವುಳ್ಳ ರಾಜಕೀಯ ಪಕ್ಷಗಳು ಅಧಿಕಾರದ ದುರಾಸೆಗೆ ಬಾಂಗ್ಲಾದ ವಲಸಿಗರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡುತ್ತಿದ್ದಾರೆ. ಕಾರಣ ನಮ್ಮ ಪಕ್ಷದ ಕಾರ್ಯಕರ್ತರು ಜಾಗ್ರತೆ ವಹಿಸಬೇಕು ಎಂದರು. ವಿಭಾಗ ಸಂಯೋಜಕ ಸಂತೋಷ ಹಡಪದ ಮಾತನಾಡಿ, ಬಿಎಲ್ಎ- 2ಗಳು ಚುನಾವಣಾ ಪೂರ್ವದಲ್ಲಿ ಮತದಾರರ ಪಟ್ಟಿಯನ್ನು ಹೇಗೆ ಪರಿಷ್ಕರಣೆ ಮಾಡಬೇಕೆಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಲಕ್ಕುಂಡಿ ಮಂಡಲ ಅಧ್ಯಕ್ಷ ಪ್ರಕಾಶ ಅರಹುಣಶಿ, ನಾಗನಗೌಡ ತಿಮ್ಮನಗೌಡ್ರ, ಸೋಮಶೇಖರ ಚರೇದ, ಲಿಂಗರಾಜ ಪಾಟೀಲ, ಬಿ.ಎಸ್. ಹಿರೇಮಠ, ಗೌಸ ತಾಲೀಮನವರ, ಸಿದ್ದೇಶ ಹೂಗಾರ, ಬಿ.ಎಂ. ಮುಖಾಶಿ, ಬಾಪುಗೌಡ ತಿಮ್ಮನಗೌಡ್ರ, ಚಂದ್ರು ದಂಡಿನ, ವಸಂತ ಮೇಟಿ, ಅಜ್ಜಪ್ಪ ಹುಡೇದ, ಎಸ್.ಆರ್. ಪಾಟೀಲ, ಶಿವನಗೌಡ ಕರಿಗೌಡ್ರ, ಮಹೇಶ ಮುಸ್ಕಿನಬಾವಿ, ಕೇದಾರಗೌಡ ಮಣ್ಣೂರ ಸೇರಿದಂತೆ ಮುಂತಾದವರು ಇದ್ದರು.