ಮಹಾಕುಂಭಮೇಳದಿಂದ ವಿಶ್ವಕ್ಕೆ ಒಳ್ಳೆಯದು: ಶ್ರೀಭೈರವಿ ಅಮ್ಮನವರು

| Published : Feb 27 2025, 12:32 AM IST

ಮಹಾಕುಂಭಮೇಳದಿಂದ ವಿಶ್ವಕ್ಕೆ ಒಳ್ಳೆಯದು: ಶ್ರೀಭೈರವಿ ಅಮ್ಮನವರು
Share this Article
  • FB
  • TW
  • Linkdin
  • Email

ಸಾರಾಂಶ

ಮಹಾಕುಂಭ ಮೇಳ 144 ವರ್ಷಗಳಿಗೊಮ್ಮೆ ಬರುತ್ತದೆ. ಕುಂಭಮೇಳ 12 ವರ್ಷಕ್ಕೊಮ್ಮೆ ಬರುತ್ತದೆ. ಮಹಾಕುಂಭಮೇಳದಲ್ಲಿ ಮಿಂದೆದ್ದ ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಸಾರ್ಥಕತೆ ಪಡೆದುಕೊಳ್ಳುತ್ತಾರೆ. ಅಷ್ಟೇ ಅಲ್ಲ ಈ ಮಹಾಕುಂಭ ಮೇಳವನ್ನು ಎಲ್ಲಿಯೇ ಇದ್ದರೂ ಅಲ್ಲಿಂದಲೇ ಒಳ್ಳೆಯ ಭಾವನೆಯಿಂದ ಕಣ್ಣ ತುಂಬಿಕೊಂಡರೆ ಖಂಡಿತವಾಗಿಯೂ ಅವರಿಗೂ ಒಳ್ಳೆಯದಾಗುತ್ತದೆ.

ಕೊಪ್ಪಳ:

ಮಹಾಕುಂಭ ಮೇಳದಲ್ಲಿ ಸ್ನಾನ ಮಾಡಿದವರು ಅಷ್ಟೇ ಅಲ್ಲ, ಅದನ್ನು ಕಣ್ಣು ತುಂಬಿಕೊಂಡ, ಅದರ ಪುಣ್ಯ ಭಾವನೆ ಇರುವ ಪ್ರತಿಯೊಬ್ಬರಿಗೂ ಒಳ್ಳೆಯದಾಗಲಿದೆ ಎಂದು ಹರಿದ್ವಾರದ ಅಖಾಡದ ಶ್ರೀಭೈರವಿ ಅಮ್ಮನವರು ಹೇಳಿದ್ದಾರೆ.

ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕುಂಭಮೇಳದ ಕುರಿತು ಕೆಟ್ಟದಾಗಿ ಮಾತನಾಡುವವರ ಬಗ್ಗೆ ನಾನೇನು ಹೇಳುವುದಿಲ್ಲ. ಅದು ಅವರವರ ಇಚ್ಛೆ ಎಂದರು.

ಮಹಾಕುಂಭ ಮೇಳ 144 ವರ್ಷಗಳಿಗೊಮ್ಮೆ ಬರುತ್ತದೆ. ಕುಂಭಮೇಳ 12 ವರ್ಷಕ್ಕೊಮ್ಮೆ ಬರುತ್ತದೆ. ಮಹಾಕುಂಭಮೇಳದಲ್ಲಿ ಮಿಂದೆದ್ದ ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಸಾರ್ಥಕತೆ ಪಡೆದುಕೊಳ್ಳುತ್ತಾರೆ. ಅಷ್ಟೇ ಅಲ್ಲ ಈ ಮಹಾಕುಂಭ ಮೇಳವನ್ನು ಎಲ್ಲಿಯೇ ಇದ್ದರೂ ಅಲ್ಲಿಂದಲೇ ಒಳ್ಳೆಯ ಭಾವನೆಯಿಂದ ಕಣ್ಣ ತುಂಬಿಕೊಂಡರೆ ಖಂಡಿತವಾಗಿಯೂ ಅವರಿಗೂ ಒಳ್ಳೆಯದಾಗುತ್ತದೆ. ಹೀಗಾಗಿಯೇ ಮಹಾಕುಂಭ ಮೇಳದಿಂದ ವಿಶ್ವಕ್ಕೆ ಒಳ್ಳೆಯದಾಗಲಿದೆ ಎನ್ನಲಾಗುತ್ತದೆ ಎಂದರು.

ಈ ವರ್ಷ ನಡೆದ ಮಹಾಕುಂಭ ಮೇಳ ಹಿಂದಿನ ಎಲ್ಲ ಕುಂಭಮೇಳಕ್ಕಿಂತಲೂ ಶ್ರೇಷ್ಠವಾಗಿತ್ತು ಮತ್ತು ಜನರಸಾಗರವೇ ಹರಿದು ಬಂದಿತು. ವಿಶ್ವದಲ್ಲಿಯೇ ಇಷ್ಟೊಂದು ಜನಸಾಗರ ಸೇರುವುದು ಈ ಮಹಾಕುಂಭ ಮೇಳದಲ್ಲಿ ಮಾತ್ರ ಎಂದರು.

ಈ ಕುರಿತು ಕೆಲವರು ಕುಹಕದ ಮಾತುಗಳನ್ನಾಡುತ್ತಾರೆ. ಅದನ್ನು ವ್ಯಂಗ ಮಾಡುತ್ತಾರೆ. ಮಹಾ ಪವಿತ್ರ ನೀರಿನ ಕುರಿತು ಇಲ್ಲಸಲ್ಲದ ಆರೋಪ ಮಾಡುತ್ತಾರೆ. ಅದ್ಯಾವುದನ್ನು ನಾವು ಪರಿಗಣಿಸಬೇಕಾಗಿಲ್ಲ. ಅಂಥ ಶ್ರೇಷ್ಠತೆಯ ಬಗ್ಗೆ ಮಾತನಾಡುವವರಿಗೆ ದೇವರು ನೋಡಿಕೊಳ್ಳುತ್ತಾನೆ ಎಂದರು.

ಈ ವೇಳೆ ಸುಮಾ ಶಾಸ್ತ್ರಿ ಇದ್ದರು.