ಸಾಧನೆಗೆ ಪರಿಶ್ರಮದೊಂದಿಗೆ ಉತ್ತಮ ಗೆಳತನವಿರಲಿ: ಬೆಳಗುಂದಿ

| Published : Feb 22 2025, 12:45 AM IST

ಸಾರಾಂಶ

Good friendship should be built on perseverance for success: Belagundi

-ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

----

ಕನ್ನಡಪ್ರಭ ವಾರ್ತೆ ಯಾದಗಿರಿ

ಉತ್ತಮ ಸಾಧನೆಗೆ ಕಷ್ಟ ಪಡಬೇಕು. ಇದಕ್ಕಾಗಿ ಪರಿಶ್ರಮದೊಂದಿಗೆ ಉತ್ತಮರ ಗೆಳತನದ ಮೂಲಕ ಪ್ರಯತ್ನ ಮಾಡಬೇಕು ಎಂದು ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಹೇಳಿದರು.

ತಾಲೂಕಿನ ಸೈದಾಪುರ ಪಟ್ಟಣದ ವಿದ್ಯಾವರ್ಧಕ ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಿಕೆಗಳನ್ನು ಓದಬೇಕು. ಸಮಾಜಕ್ಕೆ ಎನಾದರೂ ಕಾಣಿಕೆ ಕೊಡಬೇಕು. ಎನಾದರೂ ಸಾಧಿಸುವುದೇ ಜೀವನವಾಗಿದೆ ಎಂದರು.

ಸಮಾಜ ವಿಜ್ಞಾನ ಶಿಕ್ಷಕ ಗೂಳಪ್ಪ ಎಸ್. ಮಲ್ಹಾರ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಬಡತನದಲ್ಲಿ ಹುಟ್ಟುವುದು ತಪ್ಪಲ್ಲ. ಆದರೆ, ಬಡತನದಲ್ಲಿ ಸಾಯುವುದು ತಪ್ಪು. ಪ್ರಯತ್ನಗಿಂತ ಮಿಗಿಲಾದ ದೇವರಿಲ್ಲ. ಜೀವನದಲ್ಲಿ ದೊಡ್ಡ ಗುರಿಯಿರಲಿ. ಕಠಿಣ ಶ್ರಮದಿಂದ ಮುಂದೆ ಬರಬೇಕು. ಗನ್ ಗಿಂತ ಪೆನ್ನು ಶ್ರೇಷ್ಠವಾದುದು. ಜ್ಞಾನಕ್ಕೆ ಶತ್ರುಗಳು ಕೂಡ ಅಂಜಬೇಕು. ಕಷ್ಟ ಪಟ್ಟು ಓದದೆ, ಇಷ್ಟ ಪಟ್ಟು ಓದಿದರೆ ಉತ್ತಮ ಸಾಧನೆ ನಿಮ್ಮದಾಗುತ್ತದೆ ಎಂದರು.

ಪ್ರಾಂಶುಪಾಲ ಹಂಪಣ್ಣ ಸಜ್ಜನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಹ ಕಾರ್ಯದರ್ಶಿ ಕೆ.ಬಿ. ಗೋವರ್ಧನ, ಕೋಶಾಧ್ಯಕ್ಷ ಮುಕುಂದ ಕುಮಾರ ಅಲಿಝಾರ, ಆಡಳಿತ ಮಂಡಳಿಯ ಸದಸ್ಯರಾದ ಸಿದ್ರಾಮಪ್ಪಗೌಡ ಗೊಂದಡಗಿ, ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಗೂಳಪ್ಪ ಎಸ್. ಮಲ್ಹಾರ, ಪ್ರಾಂಶುಪಾಲ ಜಿ.ಎಂ.ಗುರುಪ್ರಸಾದ, ಕರಬಸಯ್ಯ ದಂಡಿಗಿಮಠ, ಉಪನ್ಯಾಸಕರಾದ ಶ್ವೇತಾ, ಭರತಕುಮಾರ, ಸಾಭಾಗ್ಯ, ಲಕ್ಷ್ಮಿ, ಸಂಜೀವರೆಡ್ಡಿ, ಇತರರಿದ್ದರು.

ದೇವಮ್ಮ, ಪಾತಿಮಾ, ಭಾಗ್ಯ ಸಂಗಡಿಗರು ಪ್ರಾರ್ಥಾನಾ ಗೀತೆ ಹಾಡಿದರು. ಭವಾನಿ, ಜ್ಯೋತಿ ಸ್ವಾಗತಗೀತೆ ಹಾಡಿದರು. ಮಲ್ಲಮ್ಮ ಸ್ವಾಗತಿಸಿದರು. ಸಹರಭಾನು, ಭಾಗ್ಯಶ್ರೀ ನಿರೂಪಿಸಿದರು. ಪೂಜಾ ವಂದಿಸಿದರು.

----

21ವೈಡಿಆರ್4: ಯಾದಗಿರಿ ತಾಲೂಕಿನ ಸೈದಾಪುರ ವಿದ್ಯಾವರ್ಧಕ ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಸಂಸ್ಥೆಯ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಹಾಗೂ ಗಣ್ಯರು ಉದ್ಘಾಟಸಿದರು.