ಸಾರಾಂಶ
ನಗರದ ಮಾರ್ಗದರ್ಶನ ಸೆಂಟ್ರಲ್ ಸ್ಕೂಲ್ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ವಿಜಯಾನಂದ ಕಾಶಪ್ಪನವರ ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಇಳಕಲ್ಲ
ಮಾರ್ಗದರ್ಶನ ಸಂಸ್ಥೆ ಮಕ್ಕಳ ಬದುಕಿಗೆ ಒಳ್ಳೆಯ ಮಾರ್ಗದರ್ಶನ ನೀಡುತ್ತಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ನಗರದ ಮಾರ್ಗದರ್ಶನ ಸೆಂಟ್ರಲ್ ಸ್ಕೂಲ್ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಆತ್ಮೀಯರಾದ ವಿರೇಶ ಕೂಡಲಗಿಮಠ ಅವರು ಶಿಕ್ಷಣ ಪ್ರೇಮಿ. ಅವರದು ಒಳ್ಳೆಯ ಆಯ್ಕೆ ಆಗಿದೆ. ಈ ಸಂಸ್ಥೆ ಹೆಮ್ಮರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಸಾನ್ನಿಧ್ಯ ವಹಿಸಿದ್ದ ನಂದವಾಡಗಿಯ ಡಾ.ಚನ್ನಬಸವ ಸ್ವಾಮೀಜಿ, ವಿದ್ಯಾರ್ಥಿಗಳಿಗೆ ವಿದ್ಯೆಗೆ ವಿನಯವೇ ಭೋಷಣ ಎಂಬಂತೆ ಉತ್ತಮ ಸಂಸ್ಕಾರ ಹೊಂದಿ ಎಂದು ಆಶಿಸಿದರು. ಸಂಸ್ಥೆಯ ಚೇರ್ಮನ್ ವಿ, ಜಿ ಕೂಡಲಗಿಮಠ ಮಾತನಾಡಿ, ಪಾಲಕರೆಲ್ಲರೂ ಸಹಕಾರ ನೀಡಿ ಸಂಸ್ಥೆ ಬೆಳೆಸಿದ್ದೀರಿ. ನಿಮ್ಮ ಸಹಕಾರದಿಂದ ಬೆಳೆದ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲು ಸಹಕಾರಿ ನೀಡಿ ಎಂದರು.ಕ್ಷೇತ್ರಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ ಮಾತನಾಡಿದರು. ಕರ್ನಾಟಕ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ನೀಲಾ ಕೊಡ್ಲಿ, ವಿಶ್ವನಾಥ ವಂಶಾಕೃತಮಠ, ಸ್ನೇಹರಂಗ ಅಧ್ಯಕ್ಷ ಬಸವರಾಜ ಮಠದ ಅವರಿಗೆ ಸನ್ಮಾನಿಸಲಾಯಿತು. ಸಂಸ್ಥೆಯ ಆಡಳಿತ ಅಧಿಕಾರಿ ಶೋಭಾ ಕೂಡಲಗಿಮಠ, ಸಂಸ್ಥೆಯ ನಿರ್ದೇಶಕರಾದ ರಾಜಶೇಖರ ಕೂಡಲಗಿಮಠ, ಶಶಿಧರ ಸಾಲಿಮಠ, ಸ್ಕೂಲ್ ಪ್ರಾಚಾರ್ಯ ಅರವಿಂದ ಮರಳಿ, ಸಂಗಮೇಶ ಶಿವಪ್ಪಯ್ಯನಮಠ, ಸಂಸ್ಥೆಯ ಎಲ್ಲ ಕಾಲೇಜುಗಳ ಪ್ರಾಚಾರ್ಯರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಹಾಗೂ ಪಾಲಕರು ಉಪಸ್ಥಿತರಿದ್ದರು.