ಪ್ರತಿನಿತ್ಯ ವ್ಯಾಯಾಮದಿಂದ ಸದೃಢ ಆರೋಗ್ಯ ಸಾಧ್ಯ: ಶಾಸಕ ಶರತ್ ಬಚ್ಚೇಗೌಡ

| Published : Aug 25 2024, 01:45 AM IST

ಸಾರಾಂಶ

ಮಾನಸಿಕ ನೆಮ್ಮದಿಯಿಂದ ಸದೃಢ ಆರೋಗ್ಯ ಪಡೆಯಬಹುದು ನಿರಂತರ ಕಾರ್ಯಭಾರ ಜೀವನ, ಒತ್ತಡದ ಜೀವನದಿಂದ ಹಾಗೂ ಗುಣಮಟ್ಟದವಲ್ಲದ ಆಹಾರ ಸೇವನೆಯಿಂದ ಆರೋಗ್ಯ ಮೇಲೆ ದುಷ್ಪರಿಣಾಮ ಬೀರಲಿದೆ, ಇದನ್ನು ಸುಧಾರಣೆ ಮಾಡಿಕೊಳ್ಳಬೇಕು.

ಸೂಲಿಬೆಲೆ: ಪ್ರತಿನಿತ್ಯ ಸಣ್ಣ- ಪುಟ್ಟ ವ್ಯಾಯಾಮಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯ ಪಡೆಯಬಹುದು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ಸೂಲಿಬೆಲೆ ಹೋಬಳಿ ಬಾಲೇನಹಳ್ಳಿ ಗ್ರಾಮದಲ್ಲಿ ದಿ.ಪಿಳ್ಳಪ್ಪ ಕೃಷ್ಣಮ್ಮ ಅವರ ಸ್ಮರಣಾರ್ಥವಾಗಿ ಕಲ್ವಾರಿ ಎ.ಜಿ ಚರ್ಚ್ ಬಾಲೇನಹಳ್ಳಿ, ವೈದೇಹಿ ಅಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಮಾನಸಿಕ ನೆಮ್ಮದಿಯಿಂದ ಸದೃಢ ಆರೋಗ್ಯ ಪಡೆಯಬಹುದು ನಿರಂತರ ಕಾರ್ಯಭಾರ ಜೀವನ, ಒತ್ತಡದ ಜೀವನದಿಂದ ಹಾಗೂ ಗುಣಮಟ್ಟದವಲ್ಲದ ಆಹಾರ ಸೇವನೆಯಿಂದ ಆರೋಗ್ಯ ಮೇಲೆ ದುಷ್ಪರಿಣಾಮ ಬೀರಲಿದೆ, ಇದನ್ನು ಸುಧಾರಣೆ ಮಾಡಿಕೊಳ್ಳಬೇಕು ಎಂದರು.

ಪ್ರಕೃತಿ ದತ್ತವಾಗಿ ನೀಡಿರುವ ನೀರು, ಗಾಳಿ, ಆಹಾರ ವಿಷವಾಗುತ್ತಿದೆ, ರಾಗಿ ಬೆಳೆಗೂ ಔಷಧಿ ಸಿಂಪಡಿಸುವ ಕಾಲ ಬಂದಿದ್ದು, ಉತ್ತಮ ಆಹಾರ ಸೇವೆ ಮಾಡಬೇಕು, ಸದೃಢ ಆರೋಗ್ಯದಿಂದ ಬಲಿಷ್ಠ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಬಾಲೇನಹಳ್ಳಿ ಗ್ರಾಮದ ಜನರು ಸರ್ಕಾರಿ ಬಸ್ ವ್ಯವಸ್ಥೆಯನ್ನು ಕಲ್ಪಿಸುವಂತೆ ಮನವಿ ಸಲ್ಲಿಸಿದ್ದು, ಶೀಘ್ರ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು. ಕ್ರಿಶ್ಚಿಯನ್ ಸಮುದಾಯದ ಕಲ್ವಾರಿ ಚರ್ಚ್ ಅಭಿವೃದ್ಧಿಗೆ ಹಾಗೂ ಸಮುದಾಯದ ಏಳಿಗೆಗೆ ಅವಶ್ಯಕತೆ ಇರುವ ವಿಷಯವನ್ನು ಇಲಾಖೆಯ ಗಮನಕ್ಕೆ ತಂದು ಅಲ್ಪಸಂಖ್ಯಾತ ಇಲಾಖೆಯಿಂದ ಸವಲತ್ತುಗಳನ್ನು ಕಲ್ಪಿಸಿಕೊಡಲಾಗುವುದು ಎಂದು ಶಾಸಕರು ತಿಳಿಸಿದರು.

ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ.ಸತೀಶಗೌಡ ಮಾತನಾಡಿದರು.

ಆರೋಗ್ಯ ಶಿಬಿರದ ಆಯೋಜಕ ರೆವೆರೆಂಡ್ ರಾಜು, ಯಾಧವ ಸಂಘದ ಅಧ್ಯಕ್ಷ ಮುತ್ಸಂದ್ರ ಆನಂದಪ್ಪ, ಸಮಾಜ ಸೇವಕ ಆರ್.ಟಿ.ಸಿ.ಗೋವಿಂದರಾಜು, ಬಾಲೇನಹಳ್ಳಿ ಗುಂಡಪ್ಪ, ಕಲ್ವಾರಿ ಚರ್ಚ್‌ನ ಪದಾಧಿಕಾರಿಗಳು. ಆಶಾ ಕಾರ್ಯಕರ್ತೆಯರು, ಬೆಂಡಿಗಾನಹಳ್ಳಿ ಸರ್ಕಾರಿ ಅಸ್ಪತ್ರೆ ಸಿಬ್ಬಂದಿ ವರ್ಗ ಮತ್ತಿತರರು ಇದ್ದರು.